ಸೋಮವಾರ, ಜೂನ್ 21, 2021
23 °C
ನಮ್ಮೂರ ಊಟ

ತಂಪುಣಿಸುವ ಸೌತೆಕಾಯಿ

ಜ್ಯೋತಿ ಎ.ಕೆ Updated:

ಅಕ್ಷರ ಗಾತ್ರ : | |

ಪಾನಕ

ಸಾಮಗ್ರಿ: ತುರಿದ ಸೌತೆಕಾಯಿ ಒಂದು ಕಪ್, ಕಾಳುಮೆಣಸಿನ ಪುಡಿ ಕಾಲು ಚಮಚ, ಉಪ್ಪು, ಚಿಟಿಕೆ ಸಕ್ಕರೆವಿಧಾನ: ಮೇಲೆ ಹೇಳಿದ ಎಲ್ಲಾ ವಸ್ತುಗಳನ್ನು ಮಿಕ್ಸಿಯಲ್ಲಿ ರುಬ್ಬಿ. ಬೇಕಾದಷ್ಟು ನೀರು ಸೇರಿಸಿದರೆ ಬೇಸಿಗೆಯಲ್ಲಿ ರುಚಿಕರವಾದ ಪಾನಕ ಕುಡಿಯಬಹುದು.ಸೌತೆ ತಿರುಳಿನ ಚಟ್ನಿ

ಸಾಮಗ್ರಿ:
ಸೌತೆಕಾಯಿ ತಿರುಳು ಒಂದು ಕಪ್, ಹಸಿಮೆಣಸು, ತೆಂಗಿನತುರಿ ಮೂರು ಚಮಚ, ಹುರಿದ ಉದ್ದಿನಬೇಳೆ ಪುಡಿ ಒಂದು ಚಮಚ, ಹುರಿದ ಕಡ್ಲೆಬೇಳೆ ಪುಡಿ ಒಂದು ಚಮಚ, ಹುಣಿಸೆಹಣ್ಣು ಸ್ವಲ್ಪ, ಉಪ್ಪು, ಕೊತ್ತಂಬರಿ ಸೊಪ್ಪು.

ವಿಧಾನ: ತಿರುಳು ಮತ್ತು ಹಸಿಮೆಣಸನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಬೇಕು. ಇದರೊಂದಿಗೆ ಉಳಿದೆಲ್ಲಾ ಸಾಮಗ್ರಿಗಳನ್ನು ಸೇರಿಸಿ ನುಣ್ಣಗೆ ರುಬ್ಬಿ, ನಂತರ ಒಗ್ಗರಣೆ ಹಾಕಿದರೆ ಚಟ್ನಿ ಸಿದ್ಧ.ಕೋಸಂಬರಿ

ಸಾಮಗ್ರಿ:
ಚಿಕ್ಕದಾಗಿ ಹೆಚ್ಚಿದ ಸೌತೆಕಾಯಿ ಒಂದು ಕಪ್, ನೆನೆಸಿದ ಹೆಸರು ಬೇಳೆ  ಅರ್ಧ ಕಪ್, ಹಸಿಮೆಣಸು ೧, ಕಾಯಿತುರಿ ಅರ್ಧ ಕಪ್, ಉಪ್ಪು, ಕೊತ್ತಂಬರಿ ಸೊಪ್ಪು.

ವಿಧಾನ: ಹೆಚ್ಚಿದ ಸೌತೆಕಾಯಿ, ನೆನೆಸಿದ ಹೆಸರು ಬೇಳೆ, ಕತ್ತರಿಸಿದ ಹಸಿ ಮೆಣಸು, ಕಾಯಿತುರಿ, ಉಪ್ಪು ಹಾಕಿ ಕಲಿಸಿದರೆ ಕೋಸಂಬರಿ ಸಿದ್ಧ. ಇದು ಚಪಾತಿ–ರೊಟ್ಟಿಯ ಜೊತೆ ತಿನ್ನಲು ರುಚಿಕರವಾಗಿರುತ್ತದೆ.ಸೌತೆಕಾಯಿ ಮಸಾಲೆ ಥಾಲೀಪೀಟ್ (ರೊಟ್ಟಿ)

ಸಾಮಗ್ರಿ: ತುರಿದ ಒಂದು ಸೌತೆಕಾಯಿ, ಜೊಳದ ಹಿಟ್ಟು ಮೂರು ಕಪ್, ಕಡಲೆಹಿಟ್ಟು ಎರಡು ಚಮಚ, ಗೋದಿ ಹಿಟ್ಟು ಒಂದು ಚಮಚ, ಖಾರದ ಪುಡಿ ಮೂರು ಚಮಚ, ಅರಿಶಿಣ ಒಂದು ಚಮಚ , ಜೀರಿಗೆ ಅರ್ಧ ಚಮಚ, ಒಂಕಾಳು ಕಾಲು ಚಮಚ, ಉಪ್ಪು, ಕೊತ್ತಂಬರಿ ಸೊಪ್ಪು, ಎಣ್ಣೆ.

ವಿಧಾನ: ತುರಿದ ಸೌತೆಕಾಯಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಅದರಲ್ಲಿ ಎಲ್ಲಾ ಹಿಟ್ಟು, ಖಾರದ ಪುಡಿ, ಅರಿಶಿಣ, ಜೀರಿಗೆ ಒಂಕಾಳು, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ರೊಟ್ಟಿ ತಟ್ಟುವ ಹದಕ್ಕೆ ಕಲಿಸಿಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಚ್ಚಿ ಬಾಣಲೆ ಕಾದ ನಂತರ ಬಾಳೆ ಎಲೆಯ ಮೇಲೆ ತಟ್ಟಿ, ಹಂಚಿಗೆ ಹಾಕಿ, ಎಣ್ಣೆ ಸವರಿ ಹಾಕಿ ಬೇಯಿಸಬಹುದು. ಬಿಸಿ ಬಿಸಿ ರೊಟ್ಟಿಯನ್ನು ಗಟ್ಟಿ ಮೊಸರು ಅಥವಾ ಬೆಣ್ಣೆಯೊಂದಿಗೆ  ಕೊಟ್ಟರೆ ತುಂಬಾ ಆರೋಗ್ಯಕರವಾಗಿರುತ್ತದೆ.ಸೌತೆಕಾಯಿ ಅವಲಕ್ಕಿ

ಸಾಮಗ್ರಿ: ಸಿಪ್ಪೆ ತೆಗೆದು ಹೆಚ್ಚಿದ ಸೌತೆಕಾಯಿ ಒಂದು ಕಪ್, ಮೀಡಿಯಂ ಅವಲಕ್ಕಿ, ಸಾಸಿವೆ ಒಂದು ಚಮಚ, ಕಡಲೆಬೀಜ ಒಂದು ಹಿಡಿ, ಕಡಲೆಬೇಳೆ ಒಂದು ಚಮಚ, ಉದ್ದಿನಬೇಳೆ ಒಂದು ಚಮಚ, ಅರಿಶಿಣ ಸ್ವಲ್ಪ, ಕರಿಬೇವು, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸ್ವಲ್ಪ, ತೆಂಗಿನತುರಿ, ರುಚಿಗೆ ಉಪ್ಪು.

ವಿಧಾನ: ಬಾಣಲೆಗೆ ಎಣ್ಣೆ ಹಾಕಿಕೊಂಡು ಸಾಸಿವೆ, ಕಡಲೆಬೀಜ, ಕಡಲೆಬೇಳೆ, ಉದ್ದಿನಬೇಳೆ, ಅರಿಶಿಣ, ಕರಿಬೇವು, ಹಸಿಮೆಣಸು ಹಾಕಿ ಒಗ್ಗರಣೆ ರೆಡಿಮಾಡಿ, ಇನ್ನೊಂದು ಪಾತ್ರೆಯಲ್ಲಿ ಅವಲಕ್ಕಿ, ಕಾಯಿತುರಿ ಮತ್ತು ಸೌತೆಕಾಯಿಯನ್ನು ಮಿಶ್ರಣ ಮಾಡಿಟ್ಟುಕೊಳ್ಳಿ. ಈ ಮಿಶ್ರಣಕ್ಕೆ ಸಿದ್ಧವಾಗಿಟ್ಟ ಒಗ್ಗರಣೆಯನ್ನು ಹಾಕಿ ಚೆನ್ನಾಗಿ ಕಲೆಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.ಸೌತೆಕಾಯಿ ಸಾಸಿವೆ

ಸಾಮಗ್ರಿ:
ಸೌತೆಕಾಯಿ ತುರಿದಿದ್ದು ಒಂದು ಕಪ್, ಕಾಯಿತುರಿ ನಾಲ್ಕು ಚಮಚ, ಹಸಿ ಮೆಣಸು ೨, ಸಾಸಿವೆ ಸ್ವಲ್ಪ, ಉಪ್ಪು

ಒಗ್ಗರಣೆಗೆ: ಸಾಸಿವೆ ಸ್ವಲ್ಪ, ಒಣ ಮೆಣಸು, ಕಡಲೆಬೇಳೆ, ಕರಿಬೇವು.ವಿಧಾನ: ಕಾಯಿತುರಿ, ಹಸಿಮೆಣಸು ಮತ್ತು ಸಾಸಿವೆ ಹಾಕಿ ನುಣ್ಣಗೆ ರುಬ್ಬಿ. ತುರಿದಿಟ್ಟ ಸೌತೆಕಾಯಿ ಜೊತೆಗೆ ಮೊಸರು, ಉಪ್ಪು ಹಾಕಿ ಕಲೆಸಿ ಒಗ್ಗರಣೆ ಹಾಕಿದರೆ ಸೌತೆಕಾಯಿ ಸಾಸಿವೆ ಸಿದ್ಧ. ಅನ್ನದ ಜೊತೆಗೆ ತಿನ್ನಲು ರುಚಿಕರ.ಸೌತೆಕಾಯಿ ಗ್ರೇವಿ

ಸಾಮಗ್ರಿ:
ಸಿಪ್ಪೆ ತೆಗೆದು ಹೆಚ್ಚಿದ ಸೌತೆಕಾಯಿ ಒಂದು ಕಪ್, ಕಡ್ಲೆಬೀಜದ ಪುಡಿ ಎರಡು ಚಮಚ, ಎಳ್ಳಿನ ಪುಡಿ ಎರಡು ಚಮಚ, ಖಾರದ ಪುಡಿ ಒಂದು ಚಮಚ, ಅರಿಶಿಣ ಸ್ವಲ್ಪ, ಹುಣಸೆ ರಸ ಒಂದು ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ಉಪ್ಪು.

ಒಗ್ಗರಣೆಗೆ: ಎಣ್ಣೆ ಎರಡು ಚಮಚ, ಸಾಸಿವೆ ಸ್ವಲ್ಪ, ಕಡಲೆಬೇಳೆ ಸ್ವಲ್ಪ, ಕರಿಬೇವು, ಒಣಮೆಣಸು ಎರಡು ತುಂಡು, ಇಂಗು.ವಿಧಾನ: ಒಗ್ಗರಣೆಯಲ್ಲಿ ಸೌತೆಕಾಯಿ ಹಾಕಿ ಸ್ವಲ್ಪ ಬೇಯಿಸಿ ಅದಕ್ಕೆ ಕಡಲೆಬೀಜದ ಪುಡಿ, ಎಳ್ಳಿನ ಪುಡಿ, ಖಾರದ ಪುಡಿ, ಅರಿಶಿಣ, ಹುಳಿ, ಉಪ್ಪು  ಕೊತ್ತಂಬರಿ ಸೊಪ್ಪು ಹಾಕಿ ಬೇಯಿಸಿದರೆ ಸೌತೆಕಾಯಿ ಗ್ರೇವಿ ಸಿದ್ಧ. ಚಪಾತಿ ಅಥವಾ ಅನ್ನದ ಜೊತೆಗೆ ಇದು ರುಚಿಯಾಗಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.