ತಲೆಚಿಪ್ಪು, ಮೆದುಳು ಇಲ್ಲದ ವಿಚಿತ್ರ ಶಿಶು ಜನನ!

7

ತಲೆಚಿಪ್ಪು, ಮೆದುಳು ಇಲ್ಲದ ವಿಚಿತ್ರ ಶಿಶು ಜನನ!

Published:
Updated:
ತಲೆಚಿಪ್ಪು, ಮೆದುಳು ಇಲ್ಲದ ವಿಚಿತ್ರ ಶಿಶು ಜನನ!

ಮೊಳಕಾಲ್ಮುರು: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ವಿಚಿತ್ರ ಸಮಸ್ಯೆಯುಳ್ಳ ಶಿಶುವೊಂದು ಜನಿಸಿದೆ. ಇದರಿಂದ ಮಗುವಿನ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.ನೆರೆಯ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಚಿರತಗುಂಡ ಗ್ರಾಮದ ಚಂದ್ರಮ್ಮ ಅವರನ್ನು ಇಲ್ಲಿನ ಆಸ್ಪತ್ರೆಗೆ ಹೆರಿಗೆಗೆ ದಾಖಲು ಮಾಡಲಾಗಿದ್ದು, ಮಧ್ಯಾಹ್ನ 1.30ರ ಸುಮಾರಿಗೆ ತಲೆ ಚಿಪ್ಪು ಹಾಗೂ ಮೆದುಳು ಇಲ್ಲದ  ವಿಚಿತ್ರ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ.ಈ ಕುರಿತು ಮಾಹಿತಿ ನೀಡಿದ ವೈದ್ಯಾಧಿಕಾರಿ ಡಾ.ರುದ್ರೀಬಾಯಿ, `ರಕ್ತಸಂಬಂಧಗಳಲ್ಲಿ ಮದುವೆಗಳನ್ನು ಮಾಡುವುದರಿಂದ ಅಥವಾ ಗರ್ಭಿಣಿ ಇದ್ದಾಗ ವೈದ್ಯರ ಸಲಹೆ ಇಲ್ಲದೇ ಮಾತ್ರೆ ಸೇವನೆ ಮಾಡುವುದರಿಂದ ಮತ್ತು ಸಕಾಲಕ್ಕೆ ವೈದ್ಯರ ಸಲಹೆ ತೆಗೆದುಕೊಳ್ಳದಿದ್ದಲ್ಲಿ ಇಂತಹ ಸಮಸ್ಯೆ ಉಳ್ಳ ಶಿಶು ಜನ್ಮಕ್ಕೆ ಕಾರಣವಾಗಲಿದೆ. ಈ ಶಿಶು ಹೆಚ್ಚು ಕಾಲ ಬದುಕುಳಿಯುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry