ಭಾನುವಾರ, ಏಪ್ರಿಲ್ 18, 2021
33 °C

ತಿಪ್ಪೆಗುಂಡಿಯಾಗಿರುವ ಗುಂಡ್ಲಹಳ್ಳಿ...

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ತಿಪ್ಪೆಗುಂಡಿಯಾಗಿರುವ ಗುಂಡ್ಲಹಳ್ಳಿ...

ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಲವಂಗಲ ಹೋಬಳಿಯ ಗುಂಡ್ಲಹಳ್ಳಿ ಗ್ರಾಮದ ಸಮೀಪ

ಬಿಬಿಎಂಪಿ ಕಸ ತಂದು ಸುರುವುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳೀಯ ಜನರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಮೇಯರ್ ನಡೆಸಬೇಕಾಗಿದ್ದ ಸಭೆ ನಡೆಯಲಿಲ್ಲ.ಬೆಂಗಳೂರು ನಗರದ ವ್ಯಾಪ್ತಿಯಲ್ಲಿಯ ಕಸವನ್ನು ಪ್ರತಿದಿನ ನೂರಾರು ಲಾರಿಗಳಲ್ಲಿ ತಂದು ಗುಂಡ್ಲಹಳ್ಳಿ ಸಮೀಪ ರಾಶಿ ಹಾಕಲಾಗುತಿತ್ತು. ಇದರ ವಿರುದ್ಧ ಸಿಡಿದೆದ್ದಿದ್ದ ಜನರು ಐದು ದಿನಗಳಿಂದಲೂ ಕಸ ತುಂಬಿದ ಯಾವುದೇ ಲಾರಿಗಳನ್ನು ಈ ಕಡೆಗೆ ಸುಳಿಯಲು ಅವಕಾಶ ನೀಡಿರಲಿಲ್ಲ.ಈ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ಎಸ್ಪಿ, ಬಿಬಿಎಂಪಿ ಅಧಿಕಾರಿಗಳು ನಡೆಸಿದ್ದ ಎಲ್ಲ ಸಭೆಗಳು ವಿಫಲವಾಗಿದ್ದವು. ಯಾವುದೇ ಕಾರಣಕ್ಕೂ ನಮ್ಮೂರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸ ತಂದು ಸುರುವಲು ಅವಕಾಶ ನೀಡಲು ಸಾಧ್ಯವಿಲ್ಲವೆಂದು ಸ್ಥಳೀಯರು ಅಧಿಕಾರಿಗಳನ್ನು ಹಿಂದಕ್ಕೆ ಕಳುಹಿಸಿದ್ದರು.  ನರಕವಾಗುತ್ತಿರುವ ಬದುಕು: ಗುಂಡ್ಲಹಳ್ಳಿ ಗ್ರಾಮದ ಸಮೀಪ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಸ ತಂದು ಎರೆಗೊಬ್ಬರ, ವಿದ್ಯುತ್ ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ತಯಾರಿಸಲು ಟೆರ‌್ರಾ ಫಾರಂ ಆರಂಭಿಸಲಾಗುತ್ತಿದೆ~ ಎಂದು ಕಂಪೆನಿ ಸ್ಥಳೀಯ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವತಿಂಯಿದ 2008 ರಲ್ಲಿ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆದಿದೆ.ಆದರೆ ಈತನಕ ಎರೆ ಗೊಬ್ಬರವನ್ನು ತಯಾರಿಸಲೇ ಇಲ್ಲ. ಇನ್ನು ವಿದ್ಯುತ್, ಪ್ಲಾಸ್ಟಿಕ್ ಚೀಲಗಳ ತಯಾರಿಕೆ ಕೇವಲ ಪತ್ರದಲ್ಲಿ ಮಾತ್ರ ಇದೆ. ಆದರೆ ಟೆರ‌್ರಾ ಫಾರಂ ಬಿಬಿಎಂಪಿ ವತಿಯಿಂದ ತನ್ನ ಸಾಮರ್ಥ್ಯಕ್ಕೂ ಹೆಚ್ಚಿನ ಕಸವನ್ನು ಪಡೆದು ಇಲ್ಲಿ ಅವೈಜ್ಞಾನಿಕವಾಗಿ ರಾಶಿ ಹಾಕುತ್ತಲೇ ಇದೆ.

 

ಒಂದು ಮೂಲದ ಪ್ರಕಾರ ಪ್ರತಿದಿನ ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ 3 ಸಾವಿರ ಟನ್ ಕಸವನ್ನು ಇಲ್ಲಿಗೆ ತಂದು ಸುರುವುಲಾಗುತ್ತಿದೆ. ಇದರ ಪರಿಣಾಮವೇ ಟೆರ‌್ರಾ ಫಾರಂ ಸುತ್ತಲಿನ ಗುಂಡ್ಲಹಳ್ಳಿ, ಚಿಕ್ಕಮಂಕಲಾಳ, ಕಾಮನ ಅಗ್ರಹಾರ, ಸಕ್ಕರೆಗೊಲ್ಲ ಹಳ್ಳಿ, ಕಾಡತಿಪ್ಪೂರು ಸೇರಿದಂತೆ ಸುತ್ತಲಿನ ಸುಮಾರು 20 ಗ್ರಾಮಗಳ ಜನ ಕಸದ ದುರ್ನಾತ, ಸೊಳ್ಳೆ, ನೊಣಗಳ ಕಡಿತದಿಂದ ನಾನಾ ತರಹದ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎನ್ನಲಾಗಿದೆ.ಈ ದುರ್ನಾತ ಮತ್ತು ಸೊಳ್ಳೆ, ನೊಣಗಳ ತೀವ್ರತೆ ಎಷ್ಟರಮಟ್ಟಿಗೆ ಇದೆ ಅಂದರೆ ಈಗ್ಗೆ ಎರಡು ದಿನಗಳ ಹಿಂದೆ ಚಿಕ್ಕಮಂಕಲಾಳ ಗ್ರಾಮದ 1ನೇ ತರಗತಿ ವಿದ್ಯಾರ್ಥಿ ಮದನ್‌ಕುಮಾರ್ ಬಲಿಯಾಗಿದ್ದಾನೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.ಟೆರ‌್ರಾ ಫಾರಂ ಕಂಪೆನಿ ಗುಂಡ್ಲಹಳ್ಳಿ ಗ್ರಾಮದ ಸಮೀಪ ಕಸ ತಂದು ರಾಶಿ ಹಾಕಲು ಆರಂಭವಾದ ಮೇಲೆ ಈ ಭಾಗದಲ್ಲಿ ಭೂಮಿಯ ಮಾರಾಟ ನಿಂತು ಹೋಗಿದೆ. ಇಲ್ಲಿನ ರೈತರು ಟೊಮೆಟೊ, ಸೊಪ್ಪು, ಅವರೆ ಕಾಯಿ ಸೇರಿದಂತೆ ತರಕಾರಿ ಬೆಳಗಳನ್ನು ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಕಾರಣ ನೊಣಗಳ ಹಾವಳಿಯಿಂದ ರೋಗಗಳ ಬಾಧೆ ಅಧಿಕ. ಈ ಹಿನ್ನೆಲೆಯಲ್ಲಿ ರಾಗಿ, ಮುಸುಕಿನಜೋಳ ಹೊರತು ಇತರೆ ಯಾವುದೇ ಬೆಳೆ ಬೆಳೆಯಲು ರೈತರು ಧೈರ್ಯ ಮಾಡುತ್ತಿಲ್ಲ.ಕುರುಡಾದ ಜನ ಪ್ರತಿನಿಧಿಗಳು: ಗುಂಡ್ಲಹಳ್ಳಿ ಗ್ರಾಮದಲ್ಲಿ ಬಿಬಿಎಂಪಿ ಕಸ ತಂದು ಸುರುವುತ್ತಿರುವುದರಿಂದ ಈ ಭಾಗದಲ್ಲಿನ ಅಲ್ಪ-ಸ್ವಲ್ಪ ಸ್ಥಿತಿವಂತ ಕುಟುಂಬಗಳವರು ಗ್ರಾಮಗಳನ್ನು ತೊರೆದು ನಗರ ಸೇರುತ್ತಿದ್ದಾರೆ.`ಟೆರ‌್ರಾ ಫಾರಂ ಪ್ರಾರಂಭವಾದಾಗಿನಿಂದಲೂ ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಕಸವನ್ನು ಮಾತ್ರ ಪಡೆದು ಸೂಕ್ತ ರೀತಿಯಲ್ಲಿ ಎರೆಗೊಬ್ಬರ ತಯಾರಿಸಿದ್ದರೆ ಯಾರ ಆಕ್ಷೇಪಣೆಯೂ ಇರುತ್ತಿರಲಿಲ್ಲ. ಆದರೆ ಆಸೆಬುರುಕ ಟೆರ‌್ರಾ ಫಾರಂ ತನ್ನ ಸಾಮರ್ಥ್ಯಕ್ಕೂ ಮೀರಿ ಕಸ ತರಿಸಿಕೊಂಡು ರಾಶಿ ಹಾಕಿಕೊಂಡು ಸುತ್ತಲಿನ 20 ಗ್ರಾಮಗಳ ಜನ ನರಕಯಾತನೆ ಅನುಭವಿಸುವಂತೆ ಮಾಡಿದೆ~ ಎನ್ನುತ್ತಾರೆ ಸ್ಥಳೀಯರು.    

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.