ಶುಕ್ರವಾರ, ಫೆಬ್ರವರಿ 26, 2021
19 °C

ತುಂಬದ ಕೆರೆ: ಮಾಯವಾದ ಕಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಂಬದ ಕೆರೆ: ಮಾಯವಾದ ಕಳೆ

ಹಿರೀಸಾವೆ:  ಪಟ್ಟಣದ ದೊಡ್ಡ ಕೆರೆಯಲ್ಲಿ ನೀರು ತುಂಬಿದರೆ ಸುತ್ತಮತ್ತುಲ ಹತ್ತಾರು ಹಳ್ಳಿಗಳ ಜನರು ಸೊಂತೋಷವಾಗಿ ಜೀವನ ನಡೆಸುತ್ತಿದ್ದರು. ಅದರೆ ಹಲವು ವರ್ಷಗಳಿಂದ ಕೆರಗೆ ನೀರು ಬಾರದೆ ಹಲವು ಗ್ರಾಮಗಳು ಕುಡಿಯುವ ನೀರಿಗೂ ತೊಂದರೆ ಪಡುತ್ತಿದ್ದಾರೆ.ಹೋಬಳಿಯಲ್ಲಿಯೇ ಇದು ದೊಡ್ಡ ಕೆರೆ. ನೂರಾರು ವರ್ಷಗಳ ಹಿಂದೆ ಕೆರೆ ನಿರ್ಮಿಸಲಾಗಿದೆ. ಸರ್ವೆ ನಂ 424ರಲ್ಲಿ 136 ಎಕರೆಯ ವಿಶಾಲವಾದ ಕೆರೆ ಇದು. ಕೆರೆಯ ನೀರಿನಿಂದ ನೂರಾರು ಎಕರೆಯಲ್ಲಿ ಭತ್ತ ಬೆಳೆಯತ್ತಿದ್ದರು. ಸುತ್ತಮತ್ತುಲ ಸಾವಿರಾರು ತೆಂಗಿನ ಮರಗಳಿಗೆ ನೀರು ಒದಗಿಸುತ್ತಿತ್ತು. ಈಗ ಕೆರೆ ತುಂಬದೆ ಹಲವು ವರ್ಷಗಳು ಕಳೆದ ಕಾರಣ, ಮೈದಾನದ ತುಂಬ ಕುರುಚಲ ಗಿಡಗಳು ಬೇಳೆದಿವೆ, ಸಣ್ಣ ಕಾಡು ಪ್ರಾಣಿಗಳು ಮತ್ತು ಚಿರತೆಗಳು ವಾಸಿಸುವ ತಾಣವಾಗಿದೆ. ಹಾಸನ-ಬೆಂಗಳೂರು ರೈಲು ಮಾರ್ಗವು ಕೆರೆಯ ಮದ್ಯದಲ್ಲಿ ಹಾದುಹೋಗಿದ್ದು, ಕೆರೆಯು ಎರಡು ಭಾಗವಾಗಿದೆ, ಮಾರ್ಗ ಮದ್ಯದಲ್ಲಿ ಸೇತುವೆ ನಿರ್ಮಾಣ ಮಾಡುವ ಮೂಲಕ ನೀರು ಎರಡು ಕಡೆ ಶೇಖರಣೆಯಾಗುತ್ತದೆ.ಕೆರೆಗೆ ಎರಡು ತೂಬು, ಎರಡು ಕೊಡಿಗಳನ್ನು ನಿರ್ಮಿಸಲಾಗಿದೆ. ಒಂದು ಕೊಡಿ, ತುಂಬು ಹಿರೀಸಾವೆ ಕಡೆ ಇದ್ದರೆ ಮೊತ್ತೊಂದು ಕೊಡಿ, ತುಬು ಕೊಳ್ಳೇನಹಳ್ಳಿ ಕಡೆ ಇವೆ. ಏರಿಯ ಕೆಳ ಭಾಗದಲ್ಲಿ ಚೌಡೇಶ್ವರಿ ದೇವಸ್ಥಾನವಿದೆ. ಏರಿಯ ಮೇಲೆ ಬ್ರಹ್ಮೇಶ್ವರ ದೇವಸ್ಥಾನವಿದೆ. ಕೆರೆ ತುಂಬಿದರೆ, ಕೊತ್ತನಹಳ್ಳಿ, ಅರಕೆರೆ, ಬೂಕ, ಕೊಳ್ಳೇನಹಳ್ಳಿ, ತುಬಿನಕೆರೆ ಮತ್ತು ಹಿರೀಸಾವೆಗೆ ಕುಡಿಯುವ ನೀರಿನ ಬರವಿರುವುದಿಲ್ಲ. ಕೆರೆಯಲ್ಲಿ ನೀರಿದ್ದಾಗ 10 ಅಡಿಯಲ್ಲಿ ಅಂತರ್ಜಲ ಸಿಗುತ್ತಿತ್ತು, ಈಗ 600 ಅಡಿಯ ಅಂತರದಲ್ಲಿದೆ, ಕೆರೆ ಅಕ್ಕ-ಪಕ್ಕ ಇದ್ದ ಕಲ್ಲು ಬಾವಿಗಳಲ್ಲಿ ನೀರಿಲ್ಲದೆ ಕೆಲವು ಮುಚ್ಚಿವೆ, ಇನ್ನೂ ಕೆಲವು ಕಸ ತುಂಬುವ ತೊಟ್ಟಿಗಳಾಗಿವೆ. ಹಲವು ವರ್ಷಗಳಿಂದ ಕೆರೆಗೆ ನೀರು ಬಾರದೆ ಸುತ್ತಮುತ್ತು ಹಳ್ಳಿಗಳಿಗೆ ಕುಡಿಯು ನೀರನ ಸಮಸ್ಯೆ ಹೆಚ್ಚಾಗಿದೆ ಮತ್ತು ಪ್ಲೋರೈಡ್ ಅಂಶವು ಹೆಚ್ಚಾಗಿ, ಜನರಲ್ಲಿ ಮೂಳೆ ಸವೆತ ಮತ್ತು ಕೆಲವು ಮಾರಕ ರೋಗಳು ಕಾಣಿಸಿಕೊಂಡಿವೆ.  136 ಎಕರೆ ಕೆರೆಯಲ್ಲಿ ಅಕ್ಕ-ಪಕ್ಕದ ಜಮೀನಿ ನವರು 32 ಎಕರೆ ಒತ್ತುವರಿ ಮಾಡಿಕೊಂಡು, ತೆಂಗು ಮತ್ತು ಇತರೆ ಕೃಷಿ ಬೆಳೆಗಳನ್ನು ಬೇಳೆದು ಒತ್ತುವರಿ ಭೂಮಿಯನ್ನು ಅಭಿವೃದ್ದಿ ಪಡಿಸಿದ್ದಾರೆ, ಕಳೆದ ವರ್ಷ ಸಣ್ಣ ನೀರಾವರಿ ಇಲಾಖೆಯು, ಕೆರೆಯನ್ನು ಅಳತೆ ಮಾಡಿಸಿ, ಸುತ್ತ ಕಾಲುವೆ ನಿರ್ಮಾಣ ಮಾಡಿದೆ.ಕಳೆದ 30 ವರ್ಷದಿಂದ 8 ಕಿ.ಮೀ. ದೂರದಲ್ಲಿರುವ ಜನಿವಾರ ಕೆರೆಯಿಂದ ಏತ ನೀರಾವರಿ ಮೂಲಕ ನೀರು ಹರಿಸುಂತೆ ರೈತರು ಮನವಿ ಮಾಡುತ್ತಿದ್ದಾರೆ, ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಜನ ಪ್ರತಿನಿಧಿಗಳು ಮಾತ್ರ ಗಮನಹರಿಸಿಲ್ಲ. ಕಳೆದ ಎರಡು ವರ್ಷಗಳಿಂದ ಏತ ನೀರಾವರಿಗಾಗಿ ಹೋರಾಟಗಳು ನಡೆಯುತ್ತಿವೆ. ಕೆರೆ ತುಂಬಿದರೆ ಸುತ್ತ-ಮುತ್ತಲ ರೈತರು ಸುಬಿಕ್ಷ ಮತ್ತು ಜನರು ಉತ್ತಮವಾದ ನೀರು ಕುಡಿಯಲು ಸಾದ್ಯ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಏತ ನೀರಾವರಿಯ ಬಗ್ಗೆ ಗಮನಹರಿಸಬೇಕಿದೆ.  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.