ಭಾನುವಾರ, ಏಪ್ರಿಲ್ 18, 2021
32 °C

ತೆಲಂಗಾಣ ಬೇಡಿಕೆ, ಕಲಾಪ ಮುಂದೂಡಿಕೆ, ರೈಲು ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಹೈದರಾಬಾದ್(ಪಿಟಿಐ): ಆಂಧ್ರಪ್ರದೇಶದ ವಿಧಾನಸಭೆ ಮತ್ತು ವಿಧಾನ ಪರಿಷತ್ ಗಳಲ್ಲಿ ~ಪ್ರತ್ಯೇಕ ತೆಲಂಗಾಣ ರಾಜ್ಯ~ ರಚನೆ ಬೇಡಿಕೆಯು ಮಂಗಳವಾರದ ಕಲಾಪವನ್ನು ನುಂಗಿಹಾಕಿತು. ವಿಧಾನಸಭೆಯಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ಬೇಡಿಕೆಯ ಜೊತೆಗೆ ಶ್ರೀಕಾಕುಲಂ ನಲ್ಲಿ ನಡೆದ ಗೋಲಿಬಾರ್ ಪ್ರಕರಣವೂ ಪ್ರಸ್ತಾಪಗೊಂಡು ಸಭೆಯಲ್ಲಿ ಕೋಲಾಹಲ ಉಂಟು ಮಾಡಿತು.

ವಿಧಾನ ಸಭೆ: ಪ್ರತ್ಯೇಕ ತೆಲಂಗಾಣ ರಚನೆ ಮತ್ತು ಶ್ರೀಕಾಕುಲಂ ನಲ್ಲಿ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸ್ಥಾಪನೆ ವಿರುದ್ಧ  ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಗೋಲಿಬಾರಿನಲ್ಲಿ ಇಬ್ಬರು ಸಾವಿಗೀಡಾದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಗೊಂಡು ಮಂಗಳವಾರ ವಿಧಾನಸಭಯನ್ನು ಯಾವುದೇ ಕಲಾಪ ನಡೆಸದೇ ಬುಧವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.

ವಿಧಾನ ಪರಿಷತ್ತು; ಟಿಡಿಪಿ, ಕಾಂಗ್ರೆಸ್ ಮತ್ತು ಇತರ ಸದಸ್ಯರು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತ  ಮಸೂದೆಯನ್ನು ಪ್ರಸಕ್ತ ಲೋಕಸಭೆಯ ಅಧಿವೇಶನದಲ್ಲೇ ಮಂಡಿಸಬೇಕೆಂದು ಆಗ್ರಹಿಸಿದ್ದರಿಂದ ಮಂಗಳವಾರವೂ ವಿಧಾನಪರಿಷತ್ತಿನಲ್ಲಿ ಗದ್ದಲವುಂಟಾಗಿ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು.

ರೈಲು ತಡೆ: ದಿನದಿಂದ ದಿನಕ್ಕೆತೀವ್ರ ಸ್ವರೂಪ ಪಡೆಯುತ್ತಿರುವ ‘ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ’ ಬೇಡಿಕೆ ಹೋರಾಟದ ಸಂದರ್ಭದಲ್ಲಿ ಮಂಗಳವಾರ ತೆಲಂಗಾಣ ಪ್ರಾಂತ್ಯದಲ್ಲಿರುವ ಹೈದರಾಬಾದ್ ಸೇರಿದಂತೆ 9 ಜಿಲ್ಲೆಗಳಲ್ಲಿ ‘ರೈಲು ತಡೆ’ ಪ್ರತಿಭಟನೆ ನಡೆಯಿತು. 

ತೆಲಂಗಾಣ ಜಂಟಿ ಕಾರ್ಯಕಾರಿ ಸಮಿತಿ ಸೇರಿದಂತೆ ‘ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ’ಯ ಪರ ಹೋರಾಟ ಸಂಘಟನೆಗಳು ಒಂಬತ್ತು ಜಿಲ್ಲೆಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತು ‘ರೈಲು ತಡೆ’ ಪ್ರತಿಭಟನೆ ನಡೆಸಿದ್ದರಿಂದ ರೈಲುಗಳ ಸಂಚಾರಕ್ಕೆ ತೀವ್ರ ತೊಂದರೆಯುಂಟಾಯಿತು. ಕೆಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. 

 


ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.