ಭಾನುವಾರ, ಜನವರಿ 19, 2020
27 °C

ತೆಹೆಲ್ಕಾ ಸಮೂಹದ ಸಾಲ ₨13 ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾ­ಚಾರ ಎಸಗಿದ ಆರೋಪದ ಮೇಲೆ ‘ತೆಹೆಲ್ಕಾ’ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ಅವ­ರನ್ನು ಗೋವಾ ಪೊಲೀಸರು ವಶಕ್ಕೆ ತೆಗೆ­ದುಕೊಂಡ ಬೆನ್ನ ಹಿಂದೆಯೇ   ‘ತೆಹೆಲ್ಕಾ ಸಮೂಹದ’ ಕುರಿತು ಹಲವು ಮಾಹಿತಿ­ಗಳು ಹೊರಬಿದ್ದಿವೆ.‘ತೆಹೆಲ್ಕಾ ಹೋಲ್ಡಿಂಗ್‌’ನ ಒಟ್ಟಾರೆ ಸಾಲ  ಒಟ್ಟು ಸಂಪತ್ತಿ ಗಿಂತಲೂ ಹೆಚ್ಚಿದೆ. ಕಂಪೆನಿ ಸೇವಾ ತೆರಿಗೆ­ಯನ್ನೂ ಪಾವತಿ­ಸಿಲ್ಲ ಎಂಬ ಮಾಹಿತಿ­ಯನ್ನು ಲೆಕ್ಕಪತ್ರ ಪರಿಶೋಧ ಕರು ಹೊರಗೆಡ­ವಿದ್ದಾರೆ. ಬಂಡವಾಳ ಹೂಡಿಕೆಗೆ ಸಂಬಂ­ಧಿ­ಸಿದಂತೆ ಕಾರ್ಪೊ ರೇಟ್‌ ವ್ಯವಹಾರಗಳ ಸಚಿವಾ­ಲಯ ನಿಗದಿಪಡಿಸಿರುವ ಹಲವು ನಿಯ­­­ಮ­­ ಗಳನ್ನೂ ಕಂಪೆನಿ ಉಲ್ಲಂಘಿ­ಸಿದೆ. ತೆಹೆಲ್ಕಾ ಸಮೂಹ ನಡೆಸಿರುವ ಹಲವು ಹಣಕಾಸು ವಹಿವಾಟು ಸಹ ಸಂಶಯಕ್ಕೆ ಎಡೆ­ಮಾಡಿಕೊಡು ವಂತಿ­ದೆ’ ಎಂದೂ ಮೂಲ­­ಗಳು ಹೇಳಿವೆ. ಆದರೆ, ಈ ಕುರಿತು ತನಿಖಾಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಹೊರ ಬಿದ್ದಿಲ್ಲ.ಕಂಪೆನಿ ವ್ಯವಹಾರಗಳ ಸಚಿವಾ­ಲ­ಯದ ಬಳಿ ಇರುವ ಮಾಹಿತಿ ಪ್ರಕಾರ, ತೆಹೆಲ್ಕಾ ಸಮೂಹ ₨13 ಕೋಟಿಯಷ್ಟು ಸಾಲ ಹೊಂದಿದೆ. ₨26 ಲಕ್ಷ ಸೇವಾ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿದೆ.

ಪ್ರತಿಕ್ರಿಯಿಸಿ (+)