ಬುಧವಾರ, ಜನವರಿ 29, 2020
29 °C

ದತ್ತ ಜಯಂತಿಗೆ ಕಳೆಗಟ್ಟಿದ ಸಂಕೀರ್ತನಾ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದತ್ತ ಜಯಂತಿಗೆ ಕಳೆಗಟ್ಟಿದ ಸಂಕೀರ್ತನಾ ಯಾತ್ರೆ

ಚಿಕ್ಕಮಗಳೂರು: ದತ್ತಮಾಲಾ ಅಭಿ­ಯಾನ ಮತ್ತು ದತ್ತಜಯಂತಿ ಅಂಗವಾಗಿ ಶನಿವಾರ ಬೆಳಿಗ್ಗೆ ನಗರ­ದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜ­ರಂಗ ದಳದ ನೇತೃತ್ವ­ದಲ್ಲಿ ಮಹಿಳೆ­ಯ­ರು ಸಂಕೀರ್ತನಾ ಯಾತ್ರೆ ನಡೆಸಿದರು.ನಂತರ ಗುರು ಇನಾಂ ದತ್ತಾತ್ರೇಯ ಪೀಠಕ್ಕೆ ತೆರಳಿ, ಪೊಲೀಸರ ಸರ್ಪಗಾವ­ಲಿನಲ್ಲಿ ಸರದಿ ಸಾಲಿನಲ್ಲಿ ನಿಂತು ದತ್ತಾತ್ರೇಯರ ಗುಹೆಯಲ್ಲಿ ಅನ­ಸೂಯ ದೇವಿ ಮತ್ತು ದತ್ತ ಪಾದುಕೆಗಳ ದರ್ಶನ ಪಡೆದರು.ಗುಹೆ ಹೊರಭಾಗದ ತಾತ್ಕಾ­ಲಿಕ ಸಭಾಂ­­ಗಣ­ದಲ್ಲಿ ಅನ­ಸೂಯ ದೇವಿ ಪೂಜೆ, ಗಣಪತಿ ಹೋಮ, ದುರ್ಗಾ ಹೋಮ ನಡೆಸಿ, ದತ್ತಾ­ತ್ರೇಯ ಅವರ ತಾಯಿ ಅನ­ಸೂಯ ದೇವಿಯ ಜಯಂತಿ ಆಚರಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಮಹಿಳೆ­ಯರು ಧಾರ್ಮಿಕ ಕಾರ್ಯ­ಕ್ರಮ­ಗಳಲ್ಲಿ ಪಾಲ್ಗೊಂಡು ದತ್ತಾ­ತ್ರೇಯ­ರ ಭಜನೆ ಮಾಡಿದರು. ಇದಕ್ಕೂ ಮೊದಲು ನಗರದ ಬೋಳ­­ರಾಮೇಶ್ವರ ದೇವಾ­ಲಯ ಆವ­ರಣ­ದಿಂದ ಆರಂಭವಾದ ಸಂಕೀರ್ತನಾ ಯಾತ್ರೆ ಐ.ಜಿ. ರಸ್ತೆ ಮತ್ತು ಆರ್.ಜಿ. ರಸ್ತೆಯಲ್ಲಿ ಸಾಗಿ ಕಾಮಧೇನು ಗಣಪತಿ ದೇವಾಲಯ ಆವರಣದವರೆಗೆ ನಡೆಯಿತು.ಮಹಿಳಾ ಮೋರ್ಚಾ ಮುಖಂಡರು ಅನಸೂಯ ದೇವಿ ಭಾವಚಿತ್ರ ಹಿಡಿದುಕೊಂಡು, ದತ್ತಾತ್ರೇಯರ ನಾಮ­ಸ್ಮರಣೆ ಮಾಡುತ್ತಾ ಸಂಕೀರ್ತನಾ ಯಾತ್ರೆ ನಡೆಸಿದರು. ಯಾತ್ರೆ ಉದ್ದಕ್ಕೂ ಭಗವಾಧ್ವಜಗಳು ಹಾರಾಡಿದವು.ಯಾತ್ರೆ ಹನುಮಂತಪ್ಪ ವೃತ್ತ ಬಳಸಿ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಲು ಮುಂದಾಗುತ್ತಿದ್ದಂತೆ ಪೊಲೀ­ಸರು ತಡೆಯೊಡ್ಡಿದರು. ಶಾಂತಿ ಸಭೆ­ಯಲ್ಲಿ ತೀರ್ಮಾನವಾದಂತೆ ರತ್ನಗಿರಿ ರಸ್ತೆಯಲ್ಲಿ ತೆರಳಬೇಕು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದಾಗ, ಶಾಸಕ ಸಿ.ಟಿ.ರವಿ ಮತ್ತು ಸಂಘ ಪರಿವಾರದ ಮುಖಂಡರು ಸಮ್ಮತಿಸಿ, ನಿಗದಿತ ಮಾರ್ಗದಲ್ಲೆ ಯಾತ್ರೆ ಸಾಗಿದರು.ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವ­ಶಂಕರ್, ಮುರಳೀಧರ ಕಿಣಿ, ಬಜರಂಗ ದಳದ ಪ್ರೇಂ ಕಿರಣ್, ಸಂತೋಷ್ ಕೋಟ್ಯಾನ್ ಹಾಗೂ ಬಿಜೆಪಿ ಮುಖಂಡರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)