ಬೆಂಗಳೂರು: `ರಾಜಕೀಯ ಹಿತಾಸಕ್ತಿ ಗಳಿಗಾಗಿ ದಲಿತ ಜನಾಂಗವನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಎಚ್ಚರವಹಿಸಬೇಕು' ಎಂದು ದಲಿತ ಸೇನೆಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸೂರ್ಯಮಣಿ ಬಿಗ್ಹಾಡೆ ಅಭಿಪ್ರಾಯಪಟ್ಟರು.

ದಲಿತ ಸೇನೆಯು ಕೆ.ಇ.ಬಿ. ಎಂಜಿನಿಯರಿಂಗ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಚಿಂತನ- ಮಂಥನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಅವಕಾಶ ರಾಜಕಾರಣದ ಸಂದರ್ಭಗಳು ಹೆಚ್ಚುತ್ತಿದೆ. ಅವಕಾಶವಿದ್ದೆಡೆ ದಲಿತ ಶಕ್ತಿಯನ್ನು ಬಳಸಿಕೊಂಡು ರಾಜಕೀಯವಾಗಿ ಸಬಲರಾಗುವ ಹಲವು ನಾಯಕರು ನಂತರ ದಲಿತರನ್ನು ಕಡೆಗಣಿಸುತ್ತಾರೆ. ಇದಕ್ಕೆಲ್ಲ ಅವಕಾಶ ನೀಡದಂತೆ ದಲಿತರು ಜಾಗೃತರಾಗಬೇಕು' ಎಂದು ತಿಳಿಸಿದರು.

`ಗ್ರಾಮಗಳಲ್ಲಿ ದಲಿತಶಕ್ತಿಯನ್ನು ಸಂಘಟಿಸುವ ಸಲುವಾಗಿ ಎಲ್ಲ ಕಾರ್ಯ ಕರ್ತರು ಒಂದುಗೂಡುವ ಅಗತ್ಯ ಎದ್ದುಕಾಣುತ್ತಿದೆ. ದಲಿತರಲ್ಲಿರುವ ಒಡಕುಗಳು ಮರೆಯಾದರೆ ಏಳಿಗೆ ಸಾಧ್ಯವಿದೆ' ಎಂದು ತಿಳಿಸಿದರು.

ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್. ಜಗನ್ನಾಥ್ ಮಾತನಾಡಿ, `ಅಂಬೇಡ್ಕರ್ ಅವರಂತಹ ಮೇರು ವ್ಯಕ್ತಿತ್ವದ ನಾಯಕ ಕೇವಲ ಪ್ರತಿಮೆಗಳಲ್ಲಿ, ಭಾವಚಿತ್ರಗಳಲ್ಲಿ ರೂಪ ಪಡೆಯದೇ ದಲಿತರ ನಿಜವಾದ ಶಕ್ತಿಯಾಗಬೇಕು' ಎಂದು ಹೇಳಿದರು.

ಗೌರವಾಧ್ಯಕ್ಷ ವೆಂಕಟರಮಣ ಸ್ವಾಮಿ ಮಾತನಾಡಿ, `ಹೊಸ ಪೀಳಿಗೆ ಯುವಕರು ದಲಿತ ಹಾಗೂ ಬಂಡಾಯ ಚಳವಳಿಯ ಪೂರ್ವಾಪರವನ್ನು ಸಮರ್ಪಕವಾಗಿ ತಿಳಿದುಕೊಂಡು ಆ ನಂತರ ದಲಿತರ ಸಮಸ್ಯೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸಲಿ' ಎಂದು ಆಶಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.