ಗುಬ್ಬಿ: ಕುಡಿಯುವ ನೀರು ಪೂರೈಸುತ್ತಿರುವ ತಾಲ್ಲೂಕಿನ ದೊಡ್ಡಗುಣಿ ಗ್ರಾಮದ ಓವರ್ ಹೆಡ್ ಟ್ಯಾಂಕ್ ಯಾವಾಗ ಬೇಕಾದರೂ ಕುಸಿದು ಬೀಳುವ ಸಾಧ್ಯತೆಯಿದ್ದರೂ; ಹೊಸ ಟ್ಯಾಂಕ್ ನಿರ್ಮಾಣಕ್ಕೆ ಯಾರೂ ಚಿಂತನೆ ನಡೆಸುತ್ತಿಲ್ಲ ಎಂದು ದೊಡ್ಡಗುಣಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಎರಡು ಸಾವಿರಕ್ಕೂ ಅಧಿಕ ಮನೆಗಳಿರುವ ಊರು ದೊಡ್ಡಗುಣಿ. ಗಣಿಗಾರಿಕೆ ನಡೆಯುವ ಹತ್ತಾರು ಹಳ್ಳಿಗಳ ಮಾರುಕಟ್ಟೆಯ ಸ್ಥಳ ಇಂದು ಶುದ್ಧ ನೀರಿಲ್ಲದೆ ಪರದಾಡುತ್ತಿದೆ. ಇಡೀ ಊರಿನ ಜನಕ್ಕೆ ನೀರುಣಿಸಲು ಇರುವ ಏಕೈಕ ಓವರ್ಹೆಡ್ ಟ್ಯಾಂಕ್ ಅಪಾಯ ಎದುರಿಸುತ್ತಿದೆ.
ಈಗಾಗಲೇ ಹೊಸ ಟ್ಯಾಂಕ್ ನಿರ್ಮಿಸಬೇಕಿತ್ತು.

ಟ್ಯಾಂಕ್ ಹೊತ್ತು ನಿಂತಿರುವ ಪಿಲ್ಲರ್ಗಳು ಯಾವಾಗ ಬೇಕಾದರೂ ಮುರಿದು ಬೀಳಬಹುದು. ಪಿಲ್ಲರ್ಗಳಿಂದ ಹೊರಚಾಚಿರುವ ಕಬ್ಬಿಣದ ಸರಳುಗಳು ಸವೆದಿರುವುದಲ್ಲದೆ ತುಕ್ಕುಹಿಡಿದಿದ್ದು, ಅಪಾಯ ಹೆಚ್ಚಿದೆ. ಟ್ಯಾಂಕ್ನ ಕತೆ ಇಷ್ಟಕ್ಕೆ ಮುಗಿಯುವುದಿಲ್ಲ. ಓವರ್ಹೆಡ್ ಟ್ಯಾಂಕ್ ಇರುವುದು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ. ಮಕ್ಕಳು ಆಟವಾಡುವುದು, ಓದುವುದು ಇದರ ಸಮೀಪವೇ. ನೂರಾರು ಮಕ್ಕಳು ಕಲಿಯುವ ಶಾಲಾ ಕೊಠಡಿಗಳಿಗೆ ಹೊಂದಿಕೊಂಡಿದೆ.

ಟ್ಯಾಂಕ್ನ ಸುತ್ತ ಬೇಲಿ ಬೆಳೆದಿದೆ. ಹಾವು, ಮುಂಗುಸಿ, ನಾಯಿ, ಚೇಳುಗಳಿಗೆ ಆವಾಸ ಸ್ಥಾನವಾಗಿದೆ. ಇದರಿಂದ ಸಂಪರ್ಕ ಪಡೆದ ಪೈಪ್ಲೈನ್ ಸ್ಥಿತಿ ಹೇಗಿದೆ ಎಂಬುದು ಇಲ್ಲಿವರೆಗೂ ತಿಳಿದಿಲ್ಲ. ಅದರ ಸುತ್ತ ಸ್ವಚ್ಛತೆಯಿಲ್ಲ. ಆಳೆತ್ತರಕ್ಕೆ ಬೆಳೆದ ಬೇಲಿ ಟ್ಯಾಂಕ್ನ ಕಂಬಗಳನ್ನು ಮರೆ ಮಾಡಿದೆ.

ಟ್ಯಾಂಕ್ನಿಂದ ನೀರು ಹರಿಸುವ ಕಬ್ಬಿಣದ ಪೈಪ್ಲೈನ್ ತುಕ್ಕು ಹಿಡಿದಿದೆ. ಕುಡಿಯುವ ನೀರು ವಾಲ್ಗಳಲ್ಲಿ ಹೆಚ್ಚು ಸೋರಿಕೆಯಾಗುತ್ತಿದ್ದು, ತುಕ್ಕು ಮಿಶ್ರಿತ ನೀರನ್ನು ಕುಡಿಯುವ ದುಃಸ್ಥಿತಿ ಗ್ರಾಮದ ಜನರಿಗೆ ಬಂದೊದಗಿದೆ. ಬಳಕೆಗಷ್ಟೇ ಈ ನೀರನ್ನು ಬಳಸುತ್ತಿದ್ದು, ಕುಡಿಯುವ ನೀರಿಗಾಗಿ ಖಾಸಗಿ ಕೊಳವೆಬಾವಿ ಅವಲಂಬಿಸಿದ್ದಾರೆ.

ಅತಿ ಹೆಚ್ಚು ಗಣಿಗಾರಿಕೆ ನಡೆದ ಹಿನ್ನೆಲೆಯಲ್ಲಿ ಅಂತರ್ಜಲ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಟ್ಯಾಂಕ್ನಿಂದ ಬರುವ ನೀರನ್ನು ಬಿಂದಿಗೆಯಲ್ಲಿ ಸಂಗ್ರಹಿಸಿಟ್ಟರೆ ಒಂದೇ ದಿನದಲ್ಲಿ ನೀರು ಕೆನೆಗಟ್ಟುತ್ತದೆ. ಇದು ಶುದ್ಧ ನೀರೋ, ಅಶುದ್ಧ ನೀರೋ ಎನ್ನುವುದು ಇಲ್ಲಿವರೆಗೂ ತಿಳಿದಿಲ್ಲ. ಆದರೂ ಅನಿವಾರ್ಯವಾದ್ದರಿಂದ ಉಪಯೋಗಿಸುತ್ತಿದ್ದೇವೆ.

ಕುಡಿಯುವ ನೀರಿಗಾಗಿ ಹೊಸದೊಂದು ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಶುದ್ಧ ಕುಡಿಯುವ ನೀರು ಒದಗಿಸಿ ಎಂದು ಆಗ್ರಹಿಸುತ್ತಾರೆ ಗ್ರಾಮಸ್ಥರಾದ ಎಸ್.ಪ್ರಕಾಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.