ಬೆಂಗಳೂರು: ಹದಿನಾರು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದ ಪೆವಿಲಿಯನ್ ಪಕ್ಕದ ಸ್ಟ್ಯಾಂಡ್ನಲ್ಲಿ ಕುಳಿತು, `ಪ್ರಜಾವಾಣಿ~ಗೆ ಸಂದರ್ಶನ ನೀಡುತ್ತಿದ್ದ 23 ವರ್ಷ ವಯಸ್ಸಿನ ಯುವಕನ ಕಣ್ಣುಗಳಲ್ಲಿ ಕನಸಿನ ಗೋಪುರ ಕಂಡಿತ್ತು. 1996ರ ವಿಶ್ವ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದ ಆಯ್ಕೆಗೆ ಕೆಲವೇ ದಿನಗಳಿದ್ದವು. ಈ ವಿಶ್ವ ಕಪ್ನಲ್ಲಿ ಭಾರತಕ್ಕೆ ತಂಡಕ್ಕೆ ಹೊಸ ಆಟಗಾರನೊಬ್ಬನಿಗೆ ಆಯ್ಕೆಯಾಗುವ ಅರ್ಹತೆ ಯಾರಿಗಾದರೂ ಇದ್ದಲ್ಲಿ ಅದು ನನಗೆ ಅಂದರೆ ರಾಹುಲ್ ದ್ರಾವಿಡ್ಗೆ ಮಾತ್ರ ಎಂದು ಆ ಯುವಕ ಹೇಳಿದಾಗ, ಆತನ ಆತ್ಮವಿಶ್ವಾಸ ಕಂಡು `ಶಹಬ್ಬಾಸ್~ ಎಂದಿದ್ದೆ. ಅದು ಎಲ್ಲ ಯುವ ಆಟಗಾರರು ತಮ್ಮ ಕನಸಿನ ಬಗ್ಗೆ ಹೇಳುವ ಸಾಮಾನ್ಯ ಮಾತಾಗಿರಲಿಲ್ಲ. ತಾನು ಭಾರತ ತಂಡಕ್ಕೆ ಆಡುವ ಸಾಮರ್ಥ್ಯ ಮುಟ್ಟಿದ್ದೇನೆ ಎಂದು ಘಂಟಾಘೋಷವಾಗಿ ಹೇಳುವ ದನಿಯಾಗಿತ್ತು. ಆದರೆ ಆ ವಿಶ್ವ ಕಪ್ಗೆ ರಾಹುಲ್ ಆಯ್ಕೆಯಾಗಲಿಲ್ಲ. ಭಾರತ ಕೋಲ್ಕತ್ತದ ಈಡನ್ ಗಾರ್ಡನ್ಸ್ನಲ್ಲಿ ನಡೆದ ಸೆಮಿಫೈನಲ್ನಲ್ಲಿ ಶ್ರೀಲಂಕಾಕ್ಕೆ ಶರಣಾದಾಗ (ಗಲಾಟೆಯಿಂದ ಪಂದ್ಯ ಅಪೂರ್ಣಗೊಂಡು ಶ್ರೀಲಂಕಾ ವಿಜಯಿ ಎಂದು ಪ್ರಕಟಿಸಲಾಗಿತ್ತು.) ತಂಡದ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಇದ್ದಿದ್ದರೇ ಎಂಬ ಯೋಚನೆಯೊಂದು ಮಿಂಚಿ ಮಾಯವಾಗಿತ್ತು. ಮುಂದೆ ರಾಹುಲ್ ಹದಿನಾರು ವರ್ಷಗಳ ಕಾಲ ಮೂರನೇ ಕ್ರಮಾಂಕದಲ್ಲಿ `ಗೋಡೆ~ಯಂತೆ ನಿಂತು ಆಡಿದ ಚಿತ್ರಗಳನ್ನು ನೆನಪಿಸಿಕೊಂಡಾಗ, ಅಂದು ಈಡನ್ ಗಾರ್ಡನ್ಸ್ನಲ್ಲಿ ರಾಹುಲ್ ಇರಬೇಕಿತ್ತು ಎಂಬ ಅನಿಸಿಕೆ ಗಟ್ಟಿಯಾಗಿತ್ತು.

ವಿಶ್ವ ಕಪ್ಗೆ ಆಯ್ಕೆಯಾಗದ ಬೇಸರ ಎರಡೇ ತಿಂಗಳುಗಳಲ್ಲಿ ಹೊರಟುಹೋಗಿತ್ತು. ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾದ ರಾಹುಲ್, `ಕ್ರಿಕೆಟ್ ಕಾಶಿ~ ಎಂದೆನಿಸಿದ ಲಾರ್ಡ್ಸ್ನಲ್ಲಿ ಆಡಿದ ತಮ್ಮ ಚೊಚ್ಚಲ ಟೆಸ್ಟ್ನಲ್ಲಿ 95 ರನ್ ಹೊಡೆದರು. ಸೌರವ್ ಗಂಗೂಲಿ ಕೂಡ ಇವರ ಜೊತೆ ಟೆಸ್ಟ್ಗೆ ಕಾಲಿಟ್ಟಿದ್ದರು. ಸೌರವ್ ಶತಕ ಗಳಿಸಿದರು. ರಾಹುಲ್ಗೆ ನೂರು ಬರದಿದ್ದರೂ, ಜಿ.ಆರ್. ವಿಶ್ವನಾಥ್ ಅವರಂತೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಬಲ್ಲ ಆಟಗಾರನ ಆಗಮನವಾಗಿತ್ತು. ವಿಶಿ ಕಲಾತ್ಮಕ ಆಟಗಾರನಾಗಿದ್ದರೆ, ರಾಹುಲ್ ತಮ್ಮ ಶಿಸ್ತು, ಸಂಯಮ ಹಾಗೂ ತಾಂತ್ರಿಕ ಕೌಶಲದಿಂದ ಪರಿಪೂರ್ಣ ಆಟಗಾರನಾದರು. ಮೂರನೇ ಕ್ರಮಾಂಕದಲ್ಲಿ ಅವರನ್ನು ಅಲುಗಾಡಿಸಲು ಯಾರಿಗೂ ಆಗಲಿಲ್ಲ. ಇನ್ನೊಂದು ತುದಿಯಲ್ಲಿ ಸಚಿನ್ ತೆಂಡೂಲ್ಕರ್ ಖ್ಯಾತಿಯ ಶಿಖರವನ್ನು ಓಡುತ್ತ ಹತ್ತುತ್ತಿದ್ದರೆ ರಾಹುಲ್ ಎಂಥ ದಾಳಿಯನ್ನಾದರೂ ಎದುರಿಸಿ ನಿಲ್ಲಬಲ್ಲ ಸಾಮರ್ಥ್ಯದ ಬ್ಯಾಟ್ಸಮನ್ ಆಗುವತ್ತ ಹೆಜ್ಜೆ ಇಟ್ಟರು.

ಹದಿನಾರು ವರ್ಷಗಳ ಕಾಲ ಸತತವಾಗಿ ತಂಡದಲ್ಲಿ ಉಳಿಯುವುದು ಸಾಧಾರಣ ವಿಷಯವಲ್ಲ. ಹತ್ತರಲ್ಲಿ ಹನ್ನೊಂದನೆಯವನಾಗಿರುವುದು ಅವರಿಗೆ ಬೇಕಾಗಿರಲಿಲ್ಲ. ಇನ್ನು ಸಾಕು ಎಂದು ಹೇಳಿಸಿಕೊಳ್ಳುವ ಮೊದಲೇ ರಾಹುಲ್ ಆಟದಿಂದ ತಮ್ಮ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. ಅದು ದಿಢೀರನೆ ತೆಗೆದುಕೊಂಡ ನಿರ್ಧಾರವಲ್ಲ. ಯಾವುದಕ್ಕೂ ಒಂದು ಅಂತ್ಯ ಎಂಬುದು ಇರುವಂತೆ ಕ್ರೀಡಾಪಟುವಿನ ಜೀವನದಲ್ಲೂ ನಿವೃತ್ತಿಯ ದಿನ ಬಂದೇಬರುತ್ತದೆ.

ಕಳೆದ ವರ್ಷ ಇಂಗ್ಲೆಂಡ್ನಲ್ಲಿಯ ಅದ್ಭುತ ಯಶಸ್ಸಿನ ನಂತರ ಆಸ್ಟ್ರೇಲಿಯದಲ್ಲಿ ಅನುಭವಿಸಿದ ವೈಫಲ್ಯ ಅವರ ನಿವೃತ್ತಿಗೆ ಕಾರಣವಲ್ಲ. ಒಂದು ವರ್ಷದ ಮೊದಲೇ ನಿವೃತ್ತಿಯಾಗಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದು ಸುಳ್ಳೆಂದು ಅನಿಸುವುದಿಲ್ಲ. ಯಾಕೆಂದರೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಕರ್ನಾಟಕಕ್ಕೆ ಹೆಸರು ತಂದುಕೊಟ್ಟ `ಸಭ್ಯತೆ~ಯ ಪರಂಪರೆಯನ್ನು ಇವರೂ ಮುಂದುವರಿಸಿದವರು. 39ನೇ ವಯಸ್ಸಿಗೆ ಕಾಲಿಟ್ಟಾಗ ಅವರಿಗೆ `ಇನ್ನು ಸಾಕು~ ಎಂದೆನಿಸುವುದು ಸಹಜವೇ ಆಗಿತ್ತು. ಸೂಕ್ತ ಸಮಯ ಈಗ ಬಂತಷ್ಟೇ.

ಸಚಿನ್ ಇನ್ನೂ ಆಡುತ್ತಿರುವಾಗ ರಾಹುಲ್ ಕೂಡ ಇನ್ನೂ ಸ್ವಲ್ಪ ದಿನ ಮುಂದುವರಿಯಬಹುದಿತ್ತು ಎಂದು ಅವರ ಅಭಿಮಾನಿಗಳು ಹೇಳಬಹುದು. ಆದರೆ ಅವರು ತೆಗೆದುಕೊಂಡ ನಿವೃತ್ತಿ ನಿರ್ಧಾರ ಸ್ವಾಗತಾರ್ಹ. ಹೊಸ ನೀರಿಗೆ ಅವರು ದಾರಿ ಮಾಡಿಕೊಟ್ಟಿದ್ದಾರೆ. ಆಟಕ್ಕೆ ಯಾರೂ ಅನಿವಾರ್ಯ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇವರಂಥ ಆಟಗಾರ ಮತ್ತೊಬ್ಬ ಬರುವುದಿಲ್ಲ ಎಂದು ಹೇಳುವುದು ಕ್ಲೀಷೆಯಾದೀತು.

ಸುನೀಲ್ ಗಾವಸ್ಕರ್, ವಿಶ್ವನಾಥರಂಥ ಮಹಾನ್ ಆಟಗಾರರು ನಿವೃತ್ತಿಯಾದಾಗಲೂ ಇದೇ ಮಾತು ಬಂದಿತ್ತು. ಆದರೆ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ರಾಹುಲ್ ಅವರಂಥ ಆಟಗಾರರು ಬೆಳಕಿಗೆ ಬಂದರು. ಕಪಿಲ್ ದೇವ್ ನಂತರ ಜಾವಗಲ್ ಶ್ರೀನಾಥರಂಥ ಬೌಲರ್ ಬಂದರು. ಅನಿಲ್ ಕುಂಬ್ಳೆ ಯಶಸ್ವೀ ಸ್ಪಿನ್ನರ್ ಆಗಿ ರೂಪುಗೊಂಡರು. ಆಟದ ಸೌಂದರ್ಯ ಎದ್ದುಕಾಣುವುದೇ ಹೊಸ ಹೊಸ ಆಟಗಾರರು ಬಂದಾಗ. ರಾಹುಲ್ ಅವರಿಗೆ ಅಂದು ಶಹಬ್ಬಾಸ್ ಹೇಳಿದಂತೆ ಈಗ ಅವರಿಗೆ `ಚೆನ್ನಾಗಿ ಆಡಿದಿರಿ~ ಎಂದು ಅಭಿನಂದಿಸಿ ಬೀಳ್ಕೊಡಬೇಕು. ಹಾಗೆಂದು ಅವರು ಕ್ರಿಕೆಟ್ನಿಂದ ಸಂಪೂರ್ಣ ದೂರವೇನೂ ಹೋಗುವುದಿಲ್ಲ. ಕ್ರಿಕೆಟ್ನಲ್ಲಿ ಈಗ ತುಂಬಿರುವ ವಿವಿಧ ಹುದ್ದೆಗಳನ್ನು ಅವರು ಬ್ಯಾಟ್ಸಮನ್ನನಂತೆಯೇ ಯಶಸ್ವಿಯಾಗಿ ಅಲಂಕರಿಸಬಹುದು.

ಸಚಿನ್ ಯುಗದಲ್ಲೇ ರಾಹುಲ್ ಅವರೂ ಇದ್ದದ್ದರಿಂದ ಅವರಿಗೆ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ ಎಂದು ಹೇಳಬಹುದಾದರೂ ಅದರ ಬಗ್ಗೆ ಅವರೆಂದೂ ತಲೆಕೆಡಿಸಿಕೊಂಡವರಲ್ಲ. ರನ್ನುಗಳು ಬರದಿದ್ದಾಗಲೂ ಪ್ರಯತ್ನ ಬಿಟ್ಟವರಲ್ಲ. ನಾಯಕರಾಗಿದ್ದಾಗ ಅವರಿಗೆ ಉಳಿದವರಿಂದ ಸಂಪೂರ್ಣ ಸಹಕಾರ ಸಿಗದಿದ್ದರೂ ರಾಜಕೀಯಕ್ಕೆ ಕೈಹಾಕಿದವರಲ್ಲ. 2007 ರ ವಿಶ್ವ ಕಪ್ನಲ್ಲಿ ಭಾರತ ಮೊದಲ ಸುತ್ತಿನಲ್ಲೇ ನಿರ್ಗಮಿಸಿದಾಗ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡವರು. ಕ್ರಿಕೆಟ್ ರಾಜಕೀಯವನ್ನು ವೇಗದ ಬೌಲರುಗಳನ್ನು ಎದುರಿಸಿದಂತೆಯೇ ಸಮಾಧಾನ ಚಿತ್ತದಿಂದಲೇ ಎದುರಿಸಿದವರು. ಬಾಯಿ ಎಂದೂ ಸಡಿಲಬಿಟ್ಟವರಲ್ಲ.

ಚೆಂಡಿಗೆ ಬ್ಯಾಟು ಗೋಡೆಯಾಗಿದ್ದರೆ ಟೀಕಾಕಾರರಿಗೆ ಮುಗುಳ್ನಗೆಯೇ ಉತ್ತರವಾಗಿರುತ್ತಿತ್ತು. ಆ ಮುಗುಳ್ನಗೆಯ ಹಿಂದೆ ತಮ್ಮನ್ನು ದೂರುವವರ ಬಾಯಿ ಮುಚ್ಚಿಸುವ ಛಲ ಇರುತ್ತಿತ್ತು. ಅವರ ಅಂಕಿ ಅಂಶಗಳೇ ಇದನ್ನು ಹೇಳುತ್ತವೆ. ಒಂದು ದಿನದ ಹಾಗೂ 20 ಓವರುಗಳ ಚುಟುಕು ಕ್ರಿಕೆಟ್ನ ಭರಾಟೆಯಲ್ಲಿ ಇವರ ಬ್ಯಾಟಿಂಗ್ ಬೋರು ಹೊಡಿಸುತ್ತದೆ ಎಂದು ದಿಢೀರ್ ಕ್ರಿಕೆಟ್ನ ಮೋಹದಲ್ಲಿ ಮುಳುಗಿದವರು ಗೊಣಗಿದರೂ ಟೆಸ್ಟ್ ಕ್ರಿಕೆಟ್ಟೇ ನಿಜವಾದ ಆಟ ಎಂದು ನಂಬಿದ ಲಕ್ಷಾಂತರ ಜನರಿಗೆ ರಾಹುಲ್ ಬ್ಯಾಟಿಂಗ್ ಆಟದ ಸಕಾರಾತ್ಮಕ ಅಂಶಗಳನ್ನು ಎತ್ತಿ ಹಿಡಿಯುವ ಮಾದರಿಯಾಗಿತ್ತು. ರಾಹುಲ್ ತಮ್ಮ ಆಟದಿಂದಷ್ಟೇ ಅಲ್ಲ ತಮ್ಮ ಸ್ವಭಾವದಿಂದಲೂ ಎಲ್ಲರ ಮನ ಗೆದ್ದವರು. ಈಗಿನ ಕೆಲವು ಆಟಗಾರರಂತೆ ಹೆಸರು ಮತ್ತು ಹಣ ಅವರ ನೆತ್ತಿಗೇರಲಿಲ್ಲ. ನಿವೃತ್ತಿಯ ಸಂದರ್ಭದಲ್ಲಿ ಅವರು ಸುದೀರ್ಘ ಕ್ರಿಕೆಟ್ ಜೀವನದಲ್ಲಿ ನೆರವಾದ ಎಲ್ಲರ ಜೊತೆ ಪ್ರೇಕ್ಷಕರಿಗೂ ತಮ್ಮ ಧನ್ಯವಾದ ಅರ್ಪಿಸಿದ್ದಾರೆ. ಇವರ ಸ್ಥಾನ ತುಂಬುವ ಆಟಗಾರ ಬಂದೇ ಬರುತ್ತಾನೆ. ಆದರೆ ರಾಹುಲ್ ಎಲ್ಲರ ನೆನಪಲ್ಲಿ ಬಹುಕಾಲ ಉಳಿಯುವ ಆಟವಾಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುವ ಸಂದರ್ಭ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.