ಸೋಮವಾರ, ಜನವರಿ 20, 2020
27 °C
ಪೂರಕ ಆಹಾರ: ಸ್ಥಾಯಿ ಸಮಿತಿ ಕಳವಳ

ನಕಲಿ ಔಷಧಿಗಳಿಗೆ ಬೀಳಲಿದೆ ಕಡಿವಾಣ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಒಂದು ವಾರದಲ್ಲಿ ನಿಮ್ಮ ದೇಹದ ತೂಕವನ್ನು 10 ಕೆ.ಜಿ ಹೆಚ್ಚಿಸಿ­ಕೊಳ್ಳಿ, ಎರಡು ವಾರದಲ್ಲಿ 15 ಕೆ.ಜಿ ತೂಕ ಇಳಿಸಿಕೊಳ್ಳಿರಿ..., ಮುಖದ ಕಲೆ ಹೋಗಲಾಡಿಸಿ ಸುಂದ­­ರವಾಗಿ ಕಾಣಲು ಪ್ರಕೃತ್ತಿದತ್ತ­ವಾದ ಈ ಕ್ರೀಂ ಬಳಸಿ... ಹೀಗೆ ಮಾರುಕಟ್ಟೆ ತುಂಬಾ ತುಂಬಿ­ಕೊಂಡಿರುವ ಇಂತಹ ಸಾವಿ­­ರಾರು ಉತ್ಪನ್ನಗಳಿಗೆ ಇನ್ನು ಮುಂದೆ ಕಡಿವಾಣ ಬೀಳಲಿದೆ.ಗ್ರಾಹಕರನ್ನು ವಂಚಿಸುವ ಇಂತಹ ತರಹೇವಾರಿ ‘ಪೂರಕ ಉತ್ಪನ್ನಗಳ’ ಮೇಲೆ ತೀವ್ರ ನಿಗಾ ವಹಿಸುವಂತೆ ಮತ್ತು ಇಂತಹ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ­ಗೊಳ್ಳುವ ಮುನ್ನವೇ ನೈಜತೆ ಪರಿಶೀಲಿಸುವಂತೆ ಆರೋಗ್ಯಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ಸೂಚಿಸಿದೆ.ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರು ಸಹ ಕೆಲವೊಮ್ಮೆ ‘ಪೂರಕ ಆಹಾರ’ಗಳನ್ನು ತೆಗೆದುಕೊಳ್ಳು­ವಂತೆ ರೋಗಿಗಳಿಗೆ ಸೂಚಿಸುತ್ತಾರೆ. ದೇಹ-­ದಲ್ಲಿ ಪ್ರೊಟೀನ್‌ ಮತ್ತು ವಿಟಮಿನ್‌ ಅಂಶ ಕೊರತೆ ಇದ್ದರೆ ಇಂತಹ ಔಷಧ­ಗಳನ್ನು ಸೂಚಿಸಲಾಗುತ್ತದೆ. ಆದರೆ, ಈ ಪೂರಕ ಉತ್ಪನ್ನಗಳು ಈಗ ‘ಔಷಧದ ಮಾನದಂಡ ನಿರ್ಧರಿಸುವ ಕೇಂದ್ರೀಯ ಸಂಸ್ಥೆಯ ನಿಯಂತ್ರಣದಿಂದ ಹೊರಗಿವೆ. ಹಾಗಾಗಿ ಮಾರುಕಟ್ಟೆ ತುಂಬ ಎಗ್ಗಿಲ್ಲದೆ ಇಂತಹದೇ ಉತ್ಪನ್ನಗಳು ತುಂಬಿಕೊಂ­ಡಿವೆ. ಗ್ರಾಹಕರು ಸಹ ವೈದ್ಯರ ಶಿಫಾ­ರಸು ಸಹ ಇಲ್ಲದೆ, ಇಂತಹ ಔಷಧ­ಗಳನ್ನು ತೆಗೆದುಕೊಳ್ಳುವುದರಿಂದ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿ­ದ್ದಾರೆ ಎಂದು ಸಮಿತಿ ಕಳವಳ ವ್ಯಕ್ತಪಡಿಸಿದೆ.ದೇಶದಲ್ಲೇ ತಯಾರಿಸುವ ಮತ್ತು ಆಮದು ಮಾಡಿಕೊಳ್ಳುವ ಇಂತಹ ಪೂರಕ ಆಹಾರ ಉತ್ಪನ್ನಗಳನ್ನು ‘ಔಷಧದ ಮಾನದಂಡ ನಿರ್ಧರಿಸುವ ಕೇಂದ್ರೀಯ ಸಂಸ್ಥೆಯ ನಿಯಂತ್ರಣಕ್ಕೆ ತರಬೇಕು. ಮಾರುಕಟ್ಟೆಗೆ ಬಿಡುಗಡೆ­ಗೊಳ್ಳುವ ಮುನ್ನ ಕಡ್ಡಾಯವಾಗಿ ಪ್ರಯೋ­ಗಾಲ­ಯದಲ್ಲಿ ಪರೀಕ್ಷೆ ನಡೆಸಬೇಕು, ಯಾವುದೇ ಅಡ್ಡ ಪರಿಣಾ­ಮಗಳಿಲ್ಲ ಎನ್ನುವುದು ದೃಢಪಟ್ಟಿರ­ಬೇಕು. ಇಂತಹ ಉತ್ಪನ್ನಗಳನ್ನು ತಯಾರಿ­ಸುವ ದೇಶೀಯ ಮತ್ತು ಬಹುರಾ­ಷ್ಟ್ರೀಯ ಕಂಪೆನಿಗಳನ್ನು ಸರ್ಕಾರದ ನಿಯಂತ್ರಣದ ವ್ಯಾಪ್ತಿಗೆ ತರಬೇಕು ಎಂದು  ಸಮಿತಿ ಹೇಳಿದೆ.‘ಔಷಧ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ತಿದ್ದುಪಡಿ ಮಸೂದೆ–2013’ರಲ್ಲಿ ಪ್ರಸ್ತಾಪಿಸಲಾಗಿರುವ ‘ಕೇಂದ್ರ ಔಷಧ ಪ್ರಾಧಿಕಾರ’ (ಸಿಡಿಎ) ರಚನೆ­ಯನ್ನು ಸಂಸದೀಯ ಸಮಿತಿ ತಳ್ಳಿಹಾಕಿದೆ.ಇದು ಅಧಿಕಾರಶಾಹಿ ಧೋರಣೆಯಿಂದ ಕೂಡಿದೆ. ಮಂತ್ರಿಗಳು ಮತ್ತು ಆಯ್ದ ಇಲಾಖೆಗಳ ಕಾರ್ಯದರ್ಶಿಗಳು ಇದರ ಸದಸ್ಯರಾ­ಗುವುದರಿಂದ  ಇದರ ದುರುಪ­ಯೋಗವೇ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದೆ. ಇದಕ್ಕೆ ಬದಲಾಗಿ, ತಜ್ಞರು, ಔಷಧ ವಿಜ್ಞಾನಿ­ಗಳನ್ನು ಒಳಗೊಂಡ ಕೇಂದ್ರೀಯ ನಿಯಂತ್ರಣ ಸಂಸ್ಥೆ ರಚಿಸುವಂತೆ ಸೂಚಿಸಿದೆ.

ಪ್ರತಿಕ್ರಿಯಿಸಿ (+)