ಹಿಂದಿಯಲ್ಲಿ ತೆರೆಕಂಡಿದ್ದ `ಕಹಾನಿ' ಚಿತ್ರ ಈಗ ತಮಿಳು, ತೆಲುಗು ಎರಡು ಭಾಷೆಗಳಿಗೂ ರಿಮೇಕ್ ಆಗುತ್ತಿದೆ. ವಿದ್ಯಾ ಬಾಲನ್ ನಿರ್ವಹಿಸಿದ್ದ ಪಾತ್ರವನ್ನು ನಯನತಾರಾ ನಿರ್ವಹಿಸುತ್ತಿದ್ದಾರೆ. ದ್ವಿಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ `ಅನಾಮಿಕ' ಎಂದು ಹೆಸರಿಡಲಾಗಿದೆ.

ಎರಡು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ `ಅನಾಮಿಕ' ಚಿತ್ರವನ್ನು ಶೇಖರ್ ಕಮ್ಮುಲ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರವನ್ನು ಆದಷ್ಟು ಬೇಗ ಮುಗಿಸಿ ಅಕ್ಟೋಬರ್ನಲ್ಲಿ ಅಂದರೆ ದಸರಾ ವೇಳೆಗೆ ತೆರೆಕಾಣಿಸುವ ಯೋಚನೆ ಅವರದ್ದು.

`ಕಹಾನಿ' ಚಿತ್ರದ ರಿಮೇಕ್ನಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಆಕೆಗೆ ಸಿಕ್ಕಾಪಟ್ಟೆ ಥ್ರಿಲ್ ಆಗಿದೆಯಂತೆ. ಈ ಚಿತ್ರವನ್ನು ಪ್ರಶಸ್ತಿ ಪುರಸ್ಕೃತ ಪ್ರತಿಭೆ ಶೇಖರ್ ನಿರ್ದೇಶಿಸುತ್ತಿರುವುದು ಮಾಡುತ್ತಿರುವುದು ಇನ್ನೂ ಹೆಚ್ಚಿನ ಖುಷಿ ತಂದಿದೆಯಂತೆ. ಗಟ್ಟಿಕತೆಯುಳ್ಳ ಮಹಿಳಾ ಕೇಂದ್ರಿತವಾದ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬ ಖುಷಿಯಾಗಿದೆ. `ಅನಾಮಿಕ' ಚಿತ್ರದಲ್ಲಿ ನನ್ನ ಅಭಿಮಾನಿಗಳು ಈವರೆಗೆ ನೋಡಿರದ ಗೆಟಪ್ನಲ್ಲಿ ಕಾಣಲಿದ್ದಾರೆ. ಚಿತ್ರದಲ್ಲಿನ ನನ್ನ ಪಾತ್ರ, ನಟನೆಯನ್ನು ಅಭಿಮಾನಿಗಳು ಮೆಚ್ಚಿಕೊಳ್ಳಲಿದ್ದಾರೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ ನಯನಾ.

ಅಂದಹಾಗೆ, ಸಿನಿಮಾ ಚಿತ್ರೀಕರಣ ಹೈದರಾಬಾದ್ ಮತ್ತು ಅದರ ಸುತ್ತಮುತ್ತ ಭರದಿಂದ ಸಾಗಿದೆಯಂತೆ. `ಕಹಾನಿ' ಚಿತ್ರಕ್ಕಿಂತ ಭಿನ್ನವಾಗಿ `ಅನಾಮಿಕಾ' ಚಿತ್ರ ಮೂಡಿಬರಲಿದೆ ಎನ್ನುವ ನಿರ್ದೇಶಕ ಶೇಖರ್ ಅವರಿಗೆ ಈ ಚಿತ್ರವನ್ನು ತೆಲುಗು, ತಮಿಳು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಬಗ್ಗೆ ಕಾತುರವಿದೆಯಂತೆ. ಮೂಲ ಚಿತ್ರಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರಬೇಕು ಎನ್ನುವ ಕಾರಣಕ್ಕೆ ಹೆಚ್ಚು ಶ್ರದ್ಧೆ ವಹಿಸಿದ್ದಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.