ಪಾವಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಹೆಣ್ಣು ಶಿಶುಗಳನ್ನು ತಂದೆಯೇ ಬೇರೆಯವರಿಗೆ ನೀಡಿದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ತಾಲ್ಲೂಕಿನ ನಾಗೇನಹಳ್ಳಿ ತಾಂಡಾದ ನಾಗಮಣಿ ಹಾಗೂ ಗಂಗಾಧರ ನಾಯ್ಕ ದಂಪತಿಗೆ ಈಗಾಗಲೇ ನಾಲ್ಕು ಹೆಣ್ಣು ಮಕ್ಕಳಿದ್ದು, ನ. 27ರಂದು ಅವಳಿ ಹೆಣ್ಣು ಮಕ್ಕಳು ಜನಿಸಿದ್ದವು.

ಆಸ್ಪತ್ರೆಯಲ್ಲಿ ಸ್ವಚ್ಛತೆ ಕೆಲಸ ಮಾಡುವ ಬಾಬು ಹಾಗೂ ಶಿಶುವಿನ ತಂದೆ ಗಂಗಾಧರ ಸೇರಿಕೊಂಡು ಒಂದು ಹೆಣ್ಣು ಮಗುವನ್ನು ಹಿಂದೂಪುರದ ಗಂಗರಾಜು ಎಂಬುವರಿಗೆ ನ. 28ರಂದು ರಾತ್ರಿ ನೀಡಿದ್ದಾರೆ. ಮತ್ತೊಂದು ಮಗುವನ್ನು ನ.30ರಂದು ತಾಲ್ಲೂಕಿನ ಕಿಲಾರ್ಲಹಳ್ಳಿ ಗ್ರಾಮದ ಆಂಜನೇಯನಾಯ್ಕ ಎಂಬುವರಿಗೆ ನೀಡಿದ್ದಾರೆ. ಮಕ್ಕಳನ್ನು ಹಣಕ್ಕೆ ಮಾರಾಟ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಕ್ಕಳನ್ನು ಕಾನೂನು ಬಾಹಿರವಾಗಿ ಬೇರೆಯವರಿಗೆ ನೀಡಿರುವ ವಿಚಾರ ತಿಳಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಷಾ ಅವರು ತಿರುಮಣಿ ಪೊಲೀಸರ ಸಹಾಯದೊಂದಿಗೆ ಹಿಂದೂಪುರ, ತುಮಕೂರಿನಲ್ಲಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಕ್ಕಳನ್ನು ಗುರುವಾರ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಯಿತು. ಗಂಗಾಧರ, ಮಗುವನ್ನು ಅನ್ಯರಿಗೆ ನೀಡಲು ಸಹಕರಿಸಿದ ಸರ್ಕಾರಿ ಆಸ್ಪತ್ರೆಯ ಸ್ವೀಪರ್ ಬಾಬು ಅವರನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.