ಬೆಂಗಳೂರು:  `ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನೀಡುವ `ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ' ಯನ್ನು ಇದೇ ಮಂಗಳವಾರ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು' ಎಂದು ಮಂಡಳಿಯ ಅಧ್ಯಕ್ಷ ಡಾ.ವಾಮನ ಆಚಾರ್ಯ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಪರಿಸರ ಸಂರಕ್ಷಣೆಗಾಗಿ ವ್ಯಕ್ತಿ ಮತ್ತು ಸಂಸ್ಥೆಸಲ್ಲಿಸಿರುವ ಸೇವೆ ಗುರುತಿಸಿ ಈ ಪ್ರಶಸ್ತಿನೀಡಲಾಗುತ್ತಿದೆ. ಈ ಬಾರಿ ಅಧಿಕಾರಿಗಳು ಖುದ್ದಾಗಿ ಅರ್ಜಿ ಬಂದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇದರಿಂದ ಅರ್ಹರಿಗೆ ಪ್ರಶಸ್ತಿ ಲಭಿಸಿದೆ' ಎಂದರು.

`ಈ ಬಾರಿಯ ಪ್ರಶಸ್ತಿಗೆ ಇಬ್ಬರು ವ್ಯಕ್ತಿಗಳು ಮತ್ತು ನಾಲ್ಕು ಸಂಸ್ಥೆಗಳು ಆಯ್ಕೆಯಾಗಿವೆ. ದಕ್ಷಿಣ ವಲಯ, ಮಲೆನಾಡು ಮತ್ತು ಕರಾವಳಿ ವಲಯ ಹಾಗೂ ಉತ್ತರವಲಯಗಳನ್ನಾಗಿ ವಿಭಾಗಿಸಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು' ಎಂದರು.

`ದಕ್ಷಿಣ ವಲಯದಲ್ಲಿ ಒಬ್ಬ ವ್ಯಕ್ತಿ ಮತ್ತು ಒಂದು ಸಂಸ್ಥೆಗೆ, ಮಲೆನಾಡು ಮತ್ತು ಕರಾವಳಿ ವಲಯದಲ್ಲಿ ವ್ಯಕ್ತಿಗಳ ವಿಭಾಗದಲ್ಲಿ ಯಾರು ಅರ್ಹರಿಲ್ಲವೆಂದು ಪರಿಗಣಿಸಿ ಸಂಸ್ಥೆಯ ವಿಭಾಗದಲ್ಲಿಯೇ ಎರಡು ಪ್ರಶಸ್ತಿ ಮತ್ತು ಉತ್ತರ ವಲಯದಲ್ಲಿ ಒಬ್ಬ ವ್ಯಕ್ತಿ ಮತ್ತು ಒಂದು ಸಂಸ್ಥೆಯು ಪ್ರಶಸ್ತಿಗೆ ಆಯ್ಕೆಯಾಗಿವೆ' ಎಂದರು.

`ಪ್ರಶಸ್ತಿಯು ತಲಾ 1 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಮಂಗಳವಾರ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ್ ರೈ, ಶಾಸಕ ಡಾ.ಸಿ.ಎನ್.ಅಶ್ವಥ ನಾರಾಯಣ ಪಾಲ್ಗೊಳ್ಳಲಿದ್ದಾರೆ' ಎಂದರು.

ಪ್ರಶಸ್ತಿ ಪುರಸ್ಕೃತರು
* ರಾಮನಗರ ಜಿಲ್ಲೆಯ ಸಾಲು ಮರದ ನಿಂಗಣ್ಣ, ಬಾಗಲಕೋಟೆ ಜಿಲ್ಲೆಯ ಪಿ.ಡಿ.ವಾಲೀಕರ

* ಮೈಸೂರು ಜಿಲ್ಲೆಯ ಮೆಸರ್ಸ್ ಐ.ಟಿ.ಸಿ ಲಿಮಿಟೆಡ್, ಶಿವಮೊಗ್ಗ ಜಿಲ್ಲೆಯ ಸಂತೆ ಕಡೂರು ಪರಿಸರ ಅಧ್ಯಯನ ಕೇಂದ್ರ, ಮಂಗಳೂರಿನ ಕೈಕಾಂಬ ಡೆವಲಪಮೆಂಟ್ ಇನ್ಷಿಯೇಟಿವ್ ಫಾರ್ ಸಸ್ಟೇನೆಬಲ್ ಹ್ಯೂಮನ್ ಅಡ್ವಾನ್ಸ್ಮೆಂಟ್ ಸಂಸ್ಥೆ, ಲಿಂಗಸಗೂರಿನ ಸಜ್ಜಲಶ್ರೀ ಸಮಗ್ರ ಕೃಷಿ ಅಧ್ಯಯನ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ

ನ್ಯಾಯಾಧೀಕರಣಕ್ಕೆ ಮೊರೆ
`ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಮಾಕೋಹಳ್ಳಿ ಸಕ್ಕರೆ ಕಾರ್ಖಾನೆಯಲ್ಲಿ ಕಲ್ಲಿದ್ದಲು ಬಳಸಲು ಅನುಮತಿ ನೀಡದಂತೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಆದರೆ, ಶೇ 15 ರಷ್ಟು ಬಳಸಬಹುದೆಂಬ ನಿಯಮ ಇರುವುದರಿಂದ ಏನು ಕ್ರಮ ಕೈಗೊಂಡಿರಲಿಲ್ಲ. ಈಗ ಅವರು ಹಸಿರು ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿಯೇ ನಿರ್ಧಾರವಾಗಬೇಕು. ಕಲ್ಲಿದ್ದಲು ಬಳಸಲು ಅನುಮತಿ ನೀಡಬೇಕು ಎಂದು ಪ್ರತಿಭಟನೆ ನಡೆದಿದೆ' ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.