ಸೋಮವಾರ, ಮೇ 25, 2020
27 °C

ನಿರ್ಲಕ್ಷ್ಯ: ಕೊಳೆತು ನಾರುತ್ತಿದೆ ಕಡೂರು ಎಪಿಎಂಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಚರಂಡಿಗಳಲ್ಲಿ ನೀರು, ಕೊಳೆತು ದುರ್ವಾಸನೆ ಬೀರುತ್ತಿರುವ ಕಸದ ರಾಶಿ, ತೆಂಗಿನ ಕಾಯಿಗಳ ತೊಪ್ಪೆಗಳು, ವಾರದ ಸಂತೆಯ ಕಸ, ರೈತರು ಸುಗ್ಗಿಮಾಡಿ ಬೇಕಾಬಿಟ್ಟಿ ಬಿಟ್ಟು ಹೋಗಿರುವ ಕಸದರಾಶಿ. ಇದು ಕಡೂರು ಎಪಿಎಂಸಿಯ ಚಿತ್ರಣ.  ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಕಂಡರೂ ಕಣ್ಣಿದ್ದು ಕುರುಡ ರಂತೆ ಕಾಣುತ್ತಿರುವ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಮೂಲ ಕಾರಣ ಎಂದು ರೈತರು, ಸಾರ್ವಜನಿಕರು ಆರೋಪ ಮಾಡುತ್ತಾರೆ.ಇಲ್ಲಿನ ಎಪಿಎಂಸಿಗೆ ಕಾರ್ಯದರ್ಶಿ ಇಲ್ಲದೇ ಒಂದು ವರ್ಷಗಳಾಗುತ್ತಿದೆ. ಹೆಚ್ಚುವರಿಯಾಗಿ ಚಿಕ್ಕಮಗಳೂರಿನ ಕೃಷಿ ಮಾರು ಕಟ್ಟೆಯ ಸಹಾಯಕ ನಿರ್ದೇಶಕ ಶೈಲಜಾ ಅವರು ವಾರಕ್ಕೆ ಎರಡು ದಿನಗಳು ಮಾತ್ರ ಕಚೇರಿಗೆ ಭೇಟಿ ನೀಡುತ್ತಾರೆ. ಆದರೆ ಆವರಣದಲ್ಲಿ ಬಿದ್ದಿರುವ ಕಸದ ರಾಶಿಯ ಬಗ್ಗೆ ಅವರು ಗಮನಿಸುತ್ತಿಲ್ಲ ಎಂದು ಅನೇಕ ವರ್ತಕರು ತಮ್ಮ ನೋವು ತೋಡಿಕೊಳ್ಳುತ್ತಾರೆ.ಪಟ್ಟಣದಲ್ಲಿ ಪ್ರತಿ ಸೋಮವಾರ (ವಾರದ ಸಂತೆ) ಸಂತೆ ಯು ಕೃಷಿ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದು, ಸಂತೆಯ ನಂತರ ಕಸದ ರಾಶಿ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ. ಇದರಿಂದ ದುರ್ವಾಸನೇ ಬೀರುತ್ತಿದ್ದರೂ ತೆಗೆಯುತ್ತಿಲ್ಲ ಎಂದು ಆರೋಪಿಸುತ್ತಾರೆ. ‘ನಾವು ಕಸ ವಿಲೇವಾರಿಗೆ ಯಾವುದೇ ಹಣ ವಸೂಲು ಮಾಡುತ್ತಿಲ್ಲ. ಪ್ರತಿವಾರ ಕಸ ತೆಗೆಸುವುದೇ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಹೇಳುತ್ತಾರೆ.ಪ್ರತಿನಿತ್ಯ ಹಳ್ಳಿಗಳಿಂದ ತರಕಾರಿ ತಂದು ಸಂಜೆ ಹರಾಜು ನಡೆಯುತ್ತಿದ್ದು, ರೈತರು ತರುವ ತರಕಾರಿ ಚೀಲಗಳಲ್ಲಿನ ಸೊಪ್ಪು, ಕೊಳೆತ ತರಕಾರಿಗಳನ್ನು ರಸ್ತೆಗಳಲ್ಲೇ ಎಸೆಯುತ್ತಾರೆ.ಇದರಿಂದ ಹಂದಿ, ನಾಯಿ, ದನಕರುಗಳ ವಾಸಸ್ಥಾನಗಳಾಗಿ ಮಾರುಕಟ್ಟೆ ಮಾರ್ಪಾಟಾಗಿದೆ.  ಕರ್ನಾಟಕ ರಾಜ್ಯ ಆಹಾರ ನಿಗಮದ ಮಳಿಗೆಗಳು ಇಲ್ಲಿದ್ದು, ಲಾರಿಗಳಿಗೆ ಆಹಾರ ಪದಾರ್ಥಗಳ ಚೀಲಗಳನ್ನು ತುಂಬಲು ಮತ್ತು ಇಳಿಸಲು ಅನೇಕ ಆಹಾರ ಧಾನ್ಯಗಳು ಸೋರುವು ದರಿಂದ ಇದನ್ನು ತಿನ್ನಲು ಹಂದಿಗಳ ಹಿಂಡೇ ಇಲ್ಲಿರುವುದರಿಂದ ಸಾಂಕ್ರಾಮಿಕ ರೋಗಗಳ ತಾಣವಾಗಿದೆ.ರೈತರು ತಾವು ಬೆಳೆದ ರಾಗಿ, ಜೋಳ, ಇತರೆ ದವಸ ಧಾನ್ಯ ಗಳನ್ನು ಇಲ್ಲಿನ ಟಾರ್ ರಸ್ತೆಗಳಲ್ಲಿ ಸುಗ್ಗಿ ಮಾಡಿ ಕಸದ ರಾಶಿ ಯನ್ನು ರಸ್ತೆಯಲ್ಲೇ ಬಿಟ್ಟು ತೆರಳುವುದರಿಂದ ಕಸವು ಕೊಳೆತು ವಾಸನೆ ಬೀರುತ್ತಿದ್ದು ಇದರ ಜೊತೆಯಲ್ಲಿ ಅಡಿಕೆಯ ಸಿಪ್ಪೆ ಯನ್ನು ರಸ್ತೆಯ ಪಕ್ಕದಲ್ಲೆ ಎಸೆಯುತ್ತಿದ್ದು ರೈತರು ಸಹ ಎಪಿ ಎಂಸಿ ಯನ್ನು ಕಸದ ರಾಶಿಯ ತೊಟ್ಟಿ ಎಂದು ಭಾವಿಸಿದ್ದಾರೆ. ಇನ್ನಾದರು ರೈತರು ಸುಗ್ಗಿ ಮಾಡಿದ ನಂತರ ಉಳಿಯುವ ಕಸವನ್ನು ಬೇರೆಡೆಗೆ ವಿಲೇವಾರಿ ಮಾಡಲಿ ಎಂದು ಸಾರ್ವ ಜನಿಕರು ಆಗ್ರಹಿಸುತ್ತಾರೆ.ಹೋಟೆಲ್ ತೆರೆಯಲು ಎಪಿಎಂಸಿ ಒಂದು ಪರವಾನಿಗೆ ಯನ್ನು ನೀಡಿದ್ದು ಆದರೆ ಇಲ್ಲಿ ಕಾನೂನನ್ನು ಉಲ್ಲಂಘಿಸಿ ಟೀ ಸ್ಟಾಲ್ ತೆರೆದಿದ್ದು ಇದರ ಸುತ್ತಮುತ್ತ ಹಂದಿ, ನಾಯಿಗಳು ಕೊಳೆತ ಕಸದಿಂದ ರೋಗಾಣು ಉತ್ಪತ್ತಿ ಮಾಡುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡು ವಂತಾಗಿದೆ.ಇಷ್ಟಕ್ಕೆಲ್ಲಾ ಕಾರಣ ಎಪಿಎಂಸಿಯ ಕಾರ್ಯದರ್ಶಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ಮಂಡಳಿ ಇಲ್ಲದೇ ಇರುವುದು ಮತ್ತೊಂದು ಕಾರಣ. ಸಂತೆಯ ದಿನ ಸುಂಕ ಪಡೆದು ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಸ್ವಚ್ಛತೆ ಕಾಪಾಡಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ತೆಂಗಿನ ಸಿಪ್ಪೆಯನ್ನು ಎಸೆಯದಂತೆ ವರ್ತಕರಿಗೆ ಆದೇಶ ನೀಡಿ ಕೊಳೆತು ನಾರುತ್ತಿರುವ ಕಡೂರು ಎಪಿಎಂಸಿಗೆ ಕಾಯಕಲ್ಪವನ್ನು ನೀಡು ವ ಅಧಿಕಾರಿಗಳನ್ನು ನೇಮಿಸಬೇಕೆಂದು ಅನೇಕ ಅಂಗಡಿಗಳ ವರ್ತಕರು, ಸಾರ್ವಜನಿಕರು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಇತ್ತ ಗಮನ ಹರಿಸಲಿ ಎಂದು ಮನವಿ ಮಾಡುತ್ತಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.