ಮಂಗಳವಾರ, ಜೂನ್ 22, 2021
29 °C

ನಿಲುಕುವ ವಜ್ರ

ರಶ್ಮಿ ಎಸ್. Updated:

ಅಕ್ಷರ ಗಾತ್ರ : | |

ವಜ್ರದಾಭರಣ ಎಲ್ಲರ ಕನಸು. ಆದರೆ ವಜ್ರವೆಂದರೆ ಕೈಗೆಟುಕದ ಕನಸು ಎಂಬ ಭ್ರಮೆಯೂ ಇದೆ. ಸಾಮಾನ್ಯರ ಈ ಕನಸನ್ನು ಸಾಕಾರಗೊಳಿಸಲೆಂದೇ ವಜ್ರಗಳನ್ನು ಕಡಿಮೆ ಬೆಲೆಗೆ ನೀಡಲಾಗುತ್ತಿದೆ ಎಂದು ಅಶೋಕ್ ಕೌಲ್ ವಿವರಿಸುತ್ತಿದ್ದರು.ಕೈಗೆಟಕುವ ಬೆಲೆ ಎಂದರೆ... 2 ಸಾವಿರ ರೂಪಾಯಿಗಳಿಂದ 2 ಕೋಟಿ ರೂಪಾಯಿಗಳವರೆಗೂ ಬೆಲೆ ಬಾಳುವ ವಜ್ರಾಭರಣಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಅಶೋಕ್ ಹೇಳಿದರು.ಎಂ.ಜಿ.ರಸ್ತೆಯಲ್ಲಿ ಆರಂಭಿಸಲಾದ ದೇಶದ 37ನೆಯ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಯ ಆರಂಭೋತ್ಸವದಲ್ಲಿ ತಮ್ಮ ಮಳಿಗೆಯ ಬಗ್ಗೆ ರಿಲಯನ್ಸ್ ಜ್ಯುವೆಲ್ಸ್‌ನ ಹಿರಿಯ ಉಪಾಧ್ಯಕ್ಷ ಮತ್ತು ವಹಿವಾಟು ಮುಖ್ಯಸ್ಥ ಅಶೋಕ್ ಕೌಲ್ ಹೇಳುತ್ತಿದ್ದರು.ವಿಶಾಲವಾದ ಮಳಿಗೆಯಲ್ಲಿ ಭಾರತದ ಎಲ್ಲೆಡೆಯ ಎಲ್ಲ ಬಗೆಯ ಆಭರಣಗಳೂ ಲಭ್ಯ ಇವೆ. ಕೋಲ್ಕತ್ತ, ಜುನಾಗಢ, ಪೋಲ್ಕಿ, ದೇವಸ್ಥಾನ ಶೈಲಿಯ ಆಭರಣಗಳು ಇವೆ.ವಿಶೇಷವೆಂದರೆ ಈ ಎಲ್ಲ ಆಭರಣಗಳನ್ನೂ ಪರಿಪೂರ್ಣ ನೈಪುಣ್ಯದೊಂದಿಗೆ ತಯಾರಿಸಲಾಗಿದೆ. ಪರಿಣಾಮ, ಇವುಗಳ ತೂಕದಲ್ಲಿ ಇಳಿಕೆಯಾಗಿದೆ. ಹಾಗಾಗಿ ಎಲ್ಲರ ಕೈಗೆಟಕುವಂತಾಗಿವೆ.

 

ದೇವಳ ಶೈಲಿಯ ಹಾರಗಳು ಕನಿಷ್ಠವೆಂದರೂ 90 ಗ್ರಾಂಗಳಲ್ಲಿ ತಯಾರಿಸಲಾಗುತ್ತದೆ. ಆದರೆ ರಿಲಯನ್ಸ್ ಜುವೆಲ್ಸ್‌ನಲ್ಲಿ ನಲ್ವತ್ತು ಗ್ರಾಂಗಳಿಂದಲೇ ಸಂಗ್ರಹ ಆರಂಭವಾಗುತ್ತದೆ ಎನ್ನುತ್ತಾರೆ ಅವರು.ಈ ಮಳಿಗೆ ಆರಂಭವಾದ ಖುಷಿಯಲ್ಲಿ ರಿಲಯನ್ಸ್ 9 ದಿನಗಳ ಕಾಲ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. 9 ದಿನಗಳ ಅವಧಿಯಲ್ಲಿ ಚಿನ್ನ ಕೊಳ್ಳುವ ಗ್ರಾಹಕರಿಗೆ ಪ್ರತಿ ಗ್ರಾಂಗೆ ಕೇವಲ 99 ರೂಪಾಯಿ ತಯಾರಿಕೆ ಬೆಲೆಯನ್ನು ನಿಗದಿಗೊಳಿಸಲಾಗಿದೆ. ವಜ್ರದಾಭರಣಗಳಿಗೆ ಪ್ರತಿ ಗ್ರಾಂಗೆ ಕೇವಲ 9 ರೂಪಾಯಿ ನಿಗದಿಗೊಳಿಸಲಾಗಿದೆ.ಕೋಲ್ಕತ್ತ ಫಿಲಿಗ್ರಿ ಹಾಗೂ ಇನ್ನಿತರ ಆಭರಣಗಳಿಗೆ 199 ರೂಪಾಯಿ ತಯಾರಿ ವೆಚ್ಚವನ್ನು ನಿಗದಿಗೊಳಿಸಲಾಗಿದೆ ಎಂದು ಅವರು ಘೋಷಿಸಿದರು.ಅಷ್ಟರಲ್ಲಿಯೇ ರೂಪದರ್ಶಿಗಳಿಬ್ಬರು ವಜ್ರದಾಭರಣ ಧರಿಸಿ ನಗುತ್ತ ಮಳಿಗೆಯನ್ನು ಪ್ರವೇಶಿಸಿದರು.ತಿಳಿ ಗುಲಾಬಿ ವರ್ಣದ ಸೀರೆಯನ್ನುಟ್ಟ ಕೋಮಲಾಂಗಿಯ ಕತ್ತನ್ನಾವರಿಸಿದ್ದ ಸರದ ಬೆಲೆ ಸರಾಸರಿ 40 ಲಕ್ಷ ರೂಪಾಯಿಗೂ ಮಿಗಿಲಾದ ಸರ ತೊಟ್ಟು ನಕ್ಕಾಗ ಆ ನಗುವಿನ ಮಿಂಚು ವಜ್ರದ ಸರಕ್ಕಿಂತ ಮಿಗಿಲಾಗಿತ್ತು.ಹಸಿರು ವರ್ಣದ ಸೀರೆಯುಟ್ಟು ನಗುತ್ತ ನಿಂತ ಚೆಲುವೆ ವಜ್ರದ ಬಳೆ ಹಾಗೂ ಸರ ತೊಟ್ಟು ನಿಂತರು. ನೆರೆದವರಿಗೆ ಯಾರನ್ನು ನೋಡುವುದು, ಒಡವೆಗಳನ್ನೋ, ಒಡವೆ ತೊಟ್ಟ ಹೆಂಗಳೆಯರನ್ನೋ ಎಂಬಂತೆ ಅಯೋಮಯವಾಗಿತ್ತು.ಸುಂದರಿಯರು ನಗೆಮಿಂಚು ಚೆಲ್ಲುತ್ತ ಕ್ಯಾಮೆರಾ ಕಣ್ಣನ್ನು ದಿಟ್ಟಿಸುತ್ತಿದ್ದರು.

ಆಗಲೇ ಅಶೋಕ್ ಕೌಲ್ ಇನ್ನೊಂದು ವಿಷಯವನ್ನು ಹಂಚಿಕೊಂಡರು. `ಸಾಲಿಟೆರ್ ಇಲ್ಯುಷನ್~ ಸಂಗ್ರಹದ ಬಗ್ಗೆ.ಈ ಸಂಗ್ರಹದ ವಿಶೇಷವೆಂದರೆ ಸಾವಿರಗಳ ಲೆಕ್ಕದಲ್ಲಿ ಲಕ್ಷಗಟ್ಟಲೆ ಬೆಲೆ ಬಾಳುವಂಥ ಸಂಗ್ರಹ ಎಂದರು. ಗೊಂದಲಮಯವಾಗಿರುವ ಈ ಹೇಳಿಕೆಯನ್ನು ಆಮೇಲೆ ಅವರು ಬಿಡಿಸಿಟ್ಟರು. ಸಾಲಿಟೇರ್ ಸಂಗ್ರಹ ಕೋಟಿಗಟ್ಟಲೆ ಬಾಳುತ್ತವೆ. ವಜ್ರಗಳ ವಿಶೇಷ ವಿನ್ಯಾಸದ ಈ ಸಂಗ್ರಹವನ್ನು ಕಡಿಮೆ ಕಟ್ಸ್ ಇರುವ ಕಡಿಮೆ ಬೆಲೆಯ ವಜ್ರಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.ವಜ್ರದಾಭರಣ ಹೊಂದಲು, ವಜ್ರದೋಲೆ, ಪದಕ, ಉಂಗುರ ಮುಂತಾದವುಗಳು ಈ ಸಂಗ್ರಹದಲ್ಲಿದೆ. ಮೂರುವರೆ ಲಕ್ಷ ಬೆಲೆ ಬಾಳುವಂತೆ ಕಾಣುವ ಉಂಗುರ ಇಲ್ಲಿ 45 ಸಾವಿರ ರೂಪಾಯಿಗಳಿಗೆ ಲಭ್ಯ. ಇಂಥ ಇಲ್ಯೂಷನ್ ಸೃಷ್ಟಿಯ ಆಭರಣಗಳು ಸಾಮಾನ್ಯರ ಕನಸನ್ನು ನನಸಾಗಿಸುತ್ತವೆ ಎಂದರು.ಆಭರಣ ಕೊಳ್ಳುವುದು ಎಂದರೆ ಹಣವನ್ನು ತೊಡಗಿಸಿದಂತೆ. ಈ ನಿಟ್ಟಿನಲ್ಲಿ ಮಳಿಗೆಯನ್ನು ಸಾಕಷ್ಟು ಮುತುವರ್ಜಿ ವಹಿಸಿ ವಿನ್ಯಾಸಗೊಳಿಸಲಾಗಿದೆ.ಒಂದು ಆಭರಣ ಕೊಳ್ಳಲು ಸಾಮಾನ್ಯವಾಗಿ ಒಂದು ಕುಟುಂಬವೇ ಬರುತ್ತದೆ. ಅವರೆಲ್ಲರೂ ಪರಸ್ಪರ ಪರಾಮರ್ಶಿಸಿಕೊಳ್ಳಲು ಅನುಕೂಲವಾಗುವಂತೆ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯರೂ ಈ ಅಂಗಡಿಗೆ ಬರಲಿ ಎಂಬುದು ಅವರ ಉದ್ದೇಶವಂತೆ!

           

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.