ಬೆಂಗಳೂರು: ನಿವೇಶನ ನೀಡುವುದಾಗಿ ನಂಬಿಸಿ ಅರ್ಜಿದಾರರೊಬ್ಬರಿಂದ ಹಣ ಪಡೆದು ಆರು ವರ್ಷ ಕಳೆದರೂ ನಿವೇಶನ ನೀಡದ ಆರ್.ವಿ.ರಸ್ತೆಯ ಪ್ರೆಸ್ಟೀಜ್ ಶೆಲ್ಟರ್ ಲಿಮಿಟೆಡ್ಗೆ 55 ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಈ ಹಣವನ್ನು ಅರ್ಜಿದಾರರಾಗಿರುವ ಟಿ.ಎಸ್.ರಾಣಿ ಅವರಿಗೆ ಪರಿಹಾರದ ರೂಪದಲ್ಲಿ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ವಿಭಾಗೀಯ ಪೀಠ ನಿರ್ದೇಶಿಸಿದೆ.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ದಿಲೀಪ್ ಅವರ ವಿರುದ್ಧ ರಾಣಿ ದೂರು ದಾಖಲು ಮಾಡಿದ್ದರು. ಸರ್ಜಾಪುರ ರಸ್ತೆಯಲ್ಲಿ `ಪ್ರೆಸ್ಟೀಜ್ ಲೇಕ್ ವ್ಯೆ~ ಹೆಸರಿನ ಬಡಾವಣೆ ನಿರ್ಮಾಣ ಆಗುತ್ತಿದ್ದು, 1.5 ಲಕ್ಷ ರೂಪಾಯಿಗೆ ನಿವೇಶನ ನೀಡುವುದಾಗಿ ಸಂಸ್ಥೆ 2005ರಲ್ಲಿ ಜಾಹೀರಾತು ನೀಡಿತ್ತು. ರಾಣಿ ಅದನ್ನು ನಂಬಿ ಅದೇ ಸಾಲಿನಲ್ಲಿ ಸಂಪೂರ್ಣ ಹಣ ನೀಡಿದ್ದರು.

ಆದರೆ ಹಲವು ವರ್ಷ ಕಳೆದರೂ ನಿವೇಶನ ಅವರ ಕೈ ಸೇರಲಿಲ್ಲ. ಈ ಬಗ್ಗೆ ಸಂಸ್ಥೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ವೇದಿಕೆ ಮೊರೆ ಹೋದರು. ಸಂಸ್ಥೆ ಕರ್ತವ್ಯಲೋಪ ಎಸಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಅರ್ಜಿದಾರರು ನೀಡಿರುವ ಸಂಪೂರ್ಣ ಹಣವನ್ನು (1.5 ಲಕ್ಷ ರೂಪಾಯಿ) ವಾರ್ಷಿಕ ಶೇ 12ರ ಬಡ್ಡಿ ದರದಂತೆ ಅವರಿಗೆ ವಾಪಸು ನೀಡುವಂತೆ ವೇದಿಕೆ ಆದೇಶಿಸಿದೆ. ಅರ್ಜಿದಾರರಿಗೆ ಮಾನಸಿಕವಾಗಿ ಹಿಂಸೆ ನೀಡಿದುದಕ್ಕೆ 50 ಸಾವಿರ ರೂಪಾಯಿ ಪರಿಹಾರ ಹಾಗೂ 5 ಸಾವಿರ ರೂ. ನ್ಯಾಯಾಲಯದ ವೆಚ್ಚವನ್ನೂ ಪರಿಹಾರದ ರೂಪದಲ್ಲಿ ನೀಡಬೇಕು ಎಂದು ಆದೇಶಿಸಲಾಗಿದೆ.

ಚಿನ್ನ: ಪರಿಹಾರಕ್ಕೆ ಆದೇಶ
ನಿವೇಶನ ಖರೀದಿ ಮಾಡಿದರೆ ಉಚಿತವಾಗಿ ಚಿನ್ನದ ನಾಣ್ಯ ಕೂಡ ನೀಡುವುದಾಗಿ ಜಾಹೀರಾತು ನೀಡಿ ಅವಧಿ ಮುಗಿದರೂ ನಿವೇಶನ ನೀಡದ ಬಿ.ಟಿ.ಎಂ ಲೇಔಟ್ 2ನೇ ಹಂತದಲ್ಲಿನ `ಸೂರ್ಯ ಶೈನ್ ಬಿಲ್ಡರ್ಸ್ ಅಂಡ್ ಡೆವಲಪರ್ಸ್~ಗೆ 25 ಸಾವಿರ ರೂಪಾಯಿ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.
ಈ ದಂಡದ ಹಣವನ್ನು ಪರಿಹಾರದ ರೂಪದಲ್ಲಿ ವಸಂತನಗರದ ನಿವಾಸಿ ಆರ್.ಬಾಲಚಂದ್ರ ಅವರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ವಿಭಾಗೀಯ ಪೀಠ ನಿರ್ದೇಶಿಸಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 30/40 ಅಡಿ ನಿವೇಶನ ನೀಡುವುದಾಗಿ ನಂಬಿಸಿರುವ ಪ್ರಕರಣ ಇದಾಗಿದೆ. ರಸ್ತೆ, ಉದ್ಯಾನ, ವಿದ್ಯುತ್ ಸೇರಿದಂತೆ ಸಕಲ ಸೌಲಭ್ಯಗಳುಳ್ಳ ಸುಸಜ್ಜಿತ ಬಡಾವಣೆಯಲ್ಲಿ ಕೂಡಲೇ ನಿವೇಶನ ನೀಡುವುದಾಗಿ ಜಾಹೀರಾತು ನೀಡಲಾಗಿತ್ತು.

ನೋಂದಣಿಗೆ ನಿವೇಶನ ಸಿದ್ಧವಿದ್ದು, ಹಣ ನೀಡಿ ಎಂಬ ಈ ಜಾಹೀರಾತಿಗೆ ಮರುಳಾಗಿ ಅರ್ಜಿದಾರರು 1.41 ಲಕ್ಷ ರೂಪಾಯಿ ನೀಡಿದರು. 2008 ಡಿಸೆಂಬರ್ ತಿಂಗಳ 3ನೇ ವಾರದಲ್ಲಿ ನೋಂದಣಿ ಭರವಸೆ ನೀಡಲಾಯಿತು. ಆದರೆ ಇದುವರೆಗೂ ನಿವೇಶನ ಅರ್ಜಿದಾರರಿಗೆ ಸಿಗಲಿಲ್ಲ. ಅವರು ಸಲ್ಲಿಸಿದ ಮನವಿಗೆ ಸಂಸ್ಥೆಯಿಂದ ಸೂಕ್ತ ಉತ್ತರ ಬಾರದ ಕಾರಣ, ವೇದಿಕೆಯಲ್ಲಿ ದೂರು ದಾಖಲು ಮಾಡಿದರು.

ಸಂಸ್ಥೆ ಕರ್ತವ್ಯಲೋಪ ಎಸಗಿದೆ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ. ಅರ್ಜಿದಾರರು ನೀಡಿರುವ ಸಂಪೂರ್ಣ ಹಣವನ್ನು ಶೇ 12ರ ಬಡ್ಡಿ ದರದಲ್ಲಿ ವಾಪಸ್ ಮಾಡುವಂತೆ, ಜೊತೆಗೆ ಪರಿಹಾರದ ಹಣವನ್ನೂ ನೀಡುವಂತೆ ಅದು ಆದೇಶಿಸಿದೆ.

ಈಡೇರದ ಹಜ್ ಯಾತ್ರೆ ಬಯಕೆ
ಹಜ್ ಯಾತ್ರೆಗೆ ಕರೆದುಕೊಂಡು ಹೋಗುವ ಸಂಬಂಧ ಹಣ ಪಡೆದುಕೊಂಡರೂ ಯಾತ್ರೆಗೆ ಕರೆದುಕೊಂಡು ಹೋಗಲು ವಿಫಲವಾದ ಅಹಮದಾಬಾದ್ ಮೂಲದ `ಮುಸ್ಲಿಂ ಟೂರ್ಸ್ ಅಂಡ್ ಟ್ರಾವಲ್ಸ್~ ಸಂಸ್ಥೆಗೆ 30 ಸಾವಿರ ರೂಪಾಯಿಗಳ ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.

ಈ ದಂಡದ ಹಣವನ್ನು ಅರ್ಜಿದಾರರಾಗಿರುವ ಗುಲ್ಬರ್ಗದ ನಿವಾಸಿ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮೆಹಬೂಬ್ ಅಲಿ ಅವರಿಗೆ ಪರಿಹಾರದ ರೂಪದಲ್ಲಿ ನೀಡುವಂತೆ ವೇದಿಕೆ ನಿರ್ದೇಶಿಸಿದೆ. ಅಲಿ ಅವರು ಹಜ್ ಯಾತ್ರೆಗೆ ಹೋಗುವ ಸಂಬಂಧ 2010ರಲ್ಲಿ 2 ಲಕ್ಷ ರೂಪಾಯಿ ನೀಡಿದ್ದರು. ಬೆಂಗಳೂರಿನಲ್ಲಿ ಇರುವ ಟ್ರಾವಲ್ಸ್ನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದರು.

ಆದರೆ ಆ ವರ್ಷ ಅರ್ಜಿದಾರರನ್ನು ಯಾತ್ರೆಗೆ ಕರೆದುಕೊಂಡು ಹೋಗಲು ಸಂಸ್ಥೆ ವಿಫಲವಾಯಿತು. 2011ರಲ್ಲಿಯೂ ಕರೆದುಕೊಂಡು ಹೋಗಲಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಹಣವನ್ನು ವಾಪಸು ನೀಡುವಂತೆ ಸಂಸ್ಥೆಗೆ ಅರ್ಜಿದಾರರು ಕೋರಿಕೊಂಡರು. ಆದರೆ ಸಂಸ್ಥೆಯಿಂದ ಯಾವುದೇ ಉತ್ತರ ಬರಲಿಲ್ಲ. ಆದುದರಿಂದ ಅವರು ವೇದಿಕೆ ಮೊರೆ ಹೊಗಿದ್ದರು. ಅರ್ಜಿದಾರರು ನೀಡಿರುವ ಹಣವನ್ನು ಬಡ್ಡಿ ಸಹಿತವಾಗಿ ( 2.4 ಲಕ್ಷ ರೂಪಾಯಿ) ಪರಿಹಾರದ ಜೊತೆಯಲ್ಲಿ ನೀಡುವಂತೆ ವೇದಿಕೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.