ಭಾನುವಾರ, ಏಪ್ರಿಲ್ 11, 2021
21 °C

ನೀಲ್ ವ್ಯಾಗ್ನರ್ ಸಾಧನೆ: ಒಂದೇ ಐವರ್‌ನಲ್ಲಿ ಐದು ವಿಕೆಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವೀನ್ಸ್‌ಟೌನ್, ನ್ಯೂಜಿಲೆಂಡ್ (ಎಪಿ): ದಕ್ಷಿಣ ಆಫ್ರಿಕಾ ಮೂಲದ ಬೌಲರ್ ನೀಲ್ ವ್ಯಾಗ್ನರ್ ಅವರು ಇಲ್ಲಿ ನಡೆದ ಪ್ರಥಮ ದರ್ಜೆ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್‌ನ ಒಟಾಗೊ ತಂಡವನ್ನು ಪ್ರತಿನಿಧಿಸುತ್ತಿರುವ 25ರ ಹರೆಯದ ಈ ಎಡಗೈ ವೇಗಿ ಪ್ಲಂಕೆಟ್ ಶೀಲ್ಡ್ ಟೂರ್ನಿಯಲ್ಲಿ ವೆಲಿಂಗ್ಟನ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದರು.ವ್ಯಾಗ್ನರ್ ಅವರು ಓವರ್‌ನ ಮೊದಲ ಎಸೆತದಲ್ಲಿ 77 ರನ್ ಗಳಿಸಿದ್ದ ಸ್ಟಿವರ್ಟ್ ರೋಡ್ಸ್ ಅವರನ್ನು ಔಟ್ ಮಾಡಿದರು. ಮುಂದಿನ ಎಸೆತಗಳಲ್ಲಿ ಕ್ರಮವಾಗಿ ಜಸ್ಟಿನ್ ಆಸ್ಟಿನ್, ಜೀತನ್ ಪಟೇಲ್ ಹಾಗೂ ಎಲಿ ಟುಗಾಗ ಅವರನ್ನು ಪೆವಿಲಿಯನ್‌ಗಟ್ಟಿದರು. ಮಾರ್ಕ್ ಗಿಲೆಸ್ಪಿ ಐದನೇ ಎಸೆತವನ್ನು ಯಶಸ್ವಿಯಾಗಿ ಎದುರಿಸಿ ನಿಂತರಾದರೂ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ವ್ಯಾಗ್ನರ್ ಒಟ್ಟು 36 ರನ್‌ಗಳಿಗೆ ಆರು ವಿಕೆಟ್ ಪಡೆದು ಮಿಂಚಿದರು. ಒಟಾಗೊ ತಂಡದ ಮೊದಲ ಇನಿಂಗ್ಸ್ ಮೊತ್ತವಾದ 441ಕ್ಕೆ ಉತ್ತರವಾಗಿ ವೆಲಿಂಗ್ಟನ್ ತಂಡ 148 ರನ್‌ಗಳಿಗೆ ಆಲೌಟಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.