ಸುದೀರ್ಘ ನಿರೀಕ್ಷೆಯ ನಂತರ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಪ್ರೇಮಿಗಳಿಗೆ `ಶತಕಗಳ ಶತಕ~ದ ಸಂತಸ ನೀಡಿದ್ದಾರೆ. ಆದರೆ ದುರ್ಬಲ ಬಾಂಗ್ಲಾದೇಶ ವಿರುದ್ಧ ಈ ಮೈಲಿಗಲ್ಲು ಮುಟ್ಟಿದ್ದು ಮಾತ್ರ ಬೇಸರಕ್ಕೆ ಕಾರಣ. ದೊಡ್ಡದೊಂದು ಸಂಭ್ರಮದ ನಿರೀಕ್ಷೆಯಲ್ಲಿಯೇ 33 ಇನಿಂಗ್ಸ್ಗಳು ಕಳೆದು ಹೋಗಿದ್ದವು. ಒಂದು ವರ್ಷ ಚಡಪಡಿಸಿದ್ದ ಅವರ ಅಭಿಮಾನಿ ಬಳಗವು ಕೊನೆಗೂ ಸಮಾಧಾನದ ನಿಟ್ಟುಸಿರು ಬಿಟ್ಟಿದೆ. ಕ್ರಿಕೆಟ್ ಜಗತ್ತೇ ಅಸಾಧ್ಯ ಎಂದುಕೊಂಡಿದ್ದಂಥ ಸಾಧನೆಯ ಶ್ರೇಯವನ್ನು ಅವರು ಪಡೆದಿದ್ದಾರೆ. ಶತಕ ಗಳಿಸುವುದು ಎಷ್ಟೊಂದು ಸುಲಭ ಎಂದು ವಿಶ್ವಕ್ಕೆ ತೋರಿಸಿಕೊಟ್ಟಿದ್ದೇ ತೆಂಡೂಲ್ಕರ್. ಭಾರತದ ಕ್ರಿಕೆಟ್ನ ಈ ಮಹಾತಾರೆ ಏರಿದ ಎತ್ತರವನ್ನು ಮತ್ತೊಬ್ಬ ಆಟಗಾರ ಮುಟ್ಟುವುದನ್ನು ನೋಡಲು ಇನ್ನೆಷ್ಟು ಕಾಲ ಕಾಯಬೇಕೋ ಹೇಳಲಾಗದು. ಸರಿಸಾಟಿಯೇ ಇಲ್ಲದಂಥ ಈ ಆಟಗಾರ ಬರೆದಿರುವ ದಾಖಲೆಗಳು ಅಪಾರ. ಆದ್ದರಿಂದಲೇ `ದೇವರು ಕ್ರಿಕೆಟ್ ಆಡಲು ಬಯಸಿ ಸಚಿನ್ ಅವರನ್ನು ಭೂಮಿಗೆ ಕಳುಹಿಸಿಕೊಟ್ಟ~ ಎಂದು ಹೇಳಲಾಗುತ್ತದೆ. ಇದು ನಿಜವೆನ್ನುವ ರೀತಿಯಲ್ಲಿಯೇ ಅವರು ಮತ್ತೊಂದು ವಿಶ್ವದಾಖಲೆ ಮಾಡಿದ್ದಾರೆ. ನೂರು ಶತಕ ಗಳಿಸಿರುವುದು ಅದ್ಭುತವೇ ಸರಿ. ಕ್ರಿಕೆಟ್ ಇತಿಹಾಸ ಕಂಡರಿಯದಿದ್ದ ಸಾಧನೆ ಇದು. ಇಪ್ಪತ್ಮೂರು ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ನಿರಂತರವಾಗಿ ರನ್ ಗಳಿಸುವ ಕಾಯಕದಲ್ಲಿ ತೊಡಗಿಕೊಂಡವರು ಸಚಿನ್. ದೇಶದ ತಂಡವು ಗೆಲ್ಲಲು ಸಹಕಾರಿಯಾದ ಶತಕಗಳ ಸಂಖ್ಯೆಯೂ ಇವುಗಳಲ್ಲಿ ಕಡಿಮೆ ಇಲ್ಲ. ಆದ್ದರಿಂದ ಅವರು ಶತಕಗಳ ದಾಖಲೆಗಾಗಿ ಮಾತ್ರ ಆಡುವಂಥ ಆಟಗಾರ ಎನ್ನಲಾಗದು. ತಂಡ ಯಶಸ್ಸು ಪಡೆದ ಪಂದ್ಯಗಳಲ್ಲಿನ ತಮ್ಮ ಇನಿಂಗ್ಸ್ನಲ್ಲಿ ಹೆಚ್ಚು ತೃಪ್ತಿ ಅನುಭವಿಸಿದ್ದನ್ನು ಸ್ವತಃ ಸಚಿನ್ ಹೇಳಿಕೊಂಡವರು. ಭಾರತ ತಂಡ ಗೆದ್ದಾಗ ಮುಗ್ಧ ಮಗುವಿನಂತೆ ಅವರು ಸಂಭ್ರಮಿಸಿ ಕುಣಿದಾಡಿದ ಕ್ಷಣಗಳನ್ನು ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.

ಆಟವನ್ನು ಪ್ರೀತಿಸುವ ಹಾಗೂ `ಆಡುವುದೇ ನನ್ನ ಕಾಯಕ~ ಎಂದು ನಂಬಿರುವ ತೆಂಡೂಲ್ಕರ್ ಮೂವತ್ತು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ಮನ್. ಟೆಸ್ಟ್ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್ನಲ್ಲಿ 49 ಬಾರಿ ಮೂರಂಕಿಯ ಮೊತ್ತ ಗಳಿಸಿದ್ದನ್ನು ವಿಶ್ವದೆಲ್ಲ ಕ್ರಿಕೆಟ್ ಪಂಡಿತರೂ ಮೆಚ್ಚಿಕೊಂಡಿದ್ದಾರೆ. ಪರಿಣತಿಯುಳ್ಳ ಹೊಡೆತಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿರುವ ಇವರ ಆಟವನ್ನು ನೋಡುವುದಕ್ಕಾಗಿಯೇ ಕ್ರೀಡಾಂಗಣಕ್ಕೆ ಬರುವ ಅಪಾರ ಅಭಿಮಾನಿಗಳು ಎಲ್ಲೆಡೆ ಇದ್ದಾರೆ. `ಕ್ರಿಕೆಟ್ ಎಂದರೆ ಸಚಿನ್; ಸಚಿನ್ ಎಂದರೆ ಶತಕ~ ಎನ್ನುವ ವಿಶ್ವಾಸವನ್ನೂ ಗಳಿಸಿದ್ದಾರೆ. ಓಲ್ಡ್ ಟ್ರಾಫೋರ್ಡ್ನಲ್ಲಿ 1990ರಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಪಂದ್ಯದಲ್ಲಿನ ಶತಕದ ಸಿಹಿ ಉಂಡಿದ್ದ ಅವರು ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ತೊಂಬತ್ತರ ಗಡಿಯನ್ನು ದಾಟಿ ಅನೇಕ ಬಾರಿ ತಡಬಡಾಯಿಸಿದ್ದಾರೆ. ಅವೆಲ್ಲವನ್ನೂ ಶತಕಗಳಾಗಿ ಪರಿವರ್ತಿಸಿದ್ದರೆ ಬಹು ಹಿಂದೆಯೇ ನೂರನೇ ನೂರು ಗಳಿಸಿಯಾಗಿರುತ್ತಿತ್ತು. ಅಷ್ಟೇ ಅಲ್ಲ ಅವರು ಅನೇಕ ಬಾರಿ ಗಾಯದ ಸಮಸ್ಯೆ ಎದುರಿಸಿದ್ದು ಕೂಡ ಸಾಧನೆಯ ಓಟಕ್ಕೆ ಅಡ್ಡಿಯಾಗಿತ್ತು. ಆದರೆ ತೊಡಕುಗಳನ್ನು ಮೀರಿ ಬೆಳೆಯುವ ಉತ್ಸಾಹ ಮಾತ್ರ ಕಡಿಮೆ ಆಗಲಿಲ್ಲ. ಕ್ರಿಕೆಟ್ ಬಗೆಗಿನ ಅವರ ಬದ್ಧತೆ ಮತ್ತು ಶಿಸ್ತು ಅನುಕರಣೀಯ. ಅವರು ಇನ್ನಷ್ಟು ದಾಖಲೆಗಳನ್ನು ಬರೆದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.