ಇತ್ತೀಚೆಗೆ ನಡೆದ `ನೃತ್ಯಾಂತರ 2012~ ನೃತ್ಯೋತ್ಸವದಲ್ಲಿ ಯುವ ಕಲಾವಿದರು ತಮ್ಮ ಲವಲವಿಕೆಯ ಪ್ರತಿಭಾ ಪ್ರದರ್ಶನಗಳೊಂದಿಗೆ ರಸಿಕರನ್ನು ಮೆಚ್ಚಿಸಿದರು. ಹಲವಾರು ಉಪಯುಕ್ತ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ `ಮಡಿಲು~ ಮಹಿಳಾ ಸಂಸ್ಥೆಯೂ ನೃತ್ಯೋತ್ಸವದ ಆಯೋಜನೆಯಲ್ಲಿ ಕೈ ಜೋಡಿಸಿದ್ದುದು ಸ್ವಾಗತಾರ್ಹ. ಮಂಗಳವಾರ ಸಂಜೆ ಎಡಿಎ ರಂಗಮಂದಿರದಲ್ಲಿ ಭರತನಾಟ್ಯ ಮತ್ತು ಕಥಕ್ನ ವೈಭವ ದರ್ಶನವಾಯಿತು.

ಕಥಕ್ ಪ್ರವೀಣೆ
ಯುವ ನರ್ತಕಿ ಶ್ವೇತಾ ವೆಂಕಟೇಶ್ ಕಥಕ್ ಮತ್ತು ಭರತನಾಟ್ಯ ಪ್ರವೀಣೆ. ತಾಯಿ ಡಾ.ಸುಪರ್ಣಾ ವೆಂಕಟೇಶ್ ಮತ್ತು ನುರಿತ ಕಥಕ್ ಪಟು ಎಂ. ಬಿ. ನಾಗರಾಜ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಮತ್ತು ಕಥಕ್ ನೃತ್ಯಗಳನ್ನು ಕಲಿತವರು.

ಸರಸ್ವತಿ ವಂದನೆಯೊಂದಿಗೆ ಅವರ ಕಾರ್ಯಕ್ರಮದ ಆರಂಭ. ಶ್ವೇತ ಪದ್ಮಾಸನಸ್ಥಳಾದ ವಿದ್ಯಾದೇವತೆಯ ಸ್ತುತಿ ಮತ್ತು ಆಕೆಯ ರೂಪ ಲಾವಣ್ಯಗಳನ್ನು ಶ್ವೇತಾ ನೃತ್ಯದ ಮೂಲಕ ಚಿತ್ರಿಸಿದರು. ಯಮನ್ ರಾಗಕ್ಕೆ ಅಳವಡಿಸಲಾಗಿದ್ದ `ಶ್ವೇತ ಪದ್ಮಾಸನ~ ಸಂಸ್ಕೃತ ಶ್ಲೋಕ ಸಮರ್ಥವಾಗಿ ಬಿಂಬಿತವಾಯಿತು.

ಪದ್ಧತಿಯಂತೆ ಮುಂದಿನ ರಚನೆಯಲ್ಲಿ ಕಥಕ್ನ ತಾಂತ್ರಿಕ ಸೌಂದರ್ಯ ಮತ್ತು ವಿಶೇಷತೆಗಳನ್ನು ತೋರುವ ಕ್ರಿಯೆ ಮತ್ತು ಪ್ರಕ್ರಿಯೆಗಳು ನಡೆದವು. ಮಾಮೂಲಿನಂತೆ ತೀನ್ತಾಳ್ನ ಆಯ್ಕೆ.

ಆದರೆ ಅದರಲ್ಲಿ ತುಂಬಿದ ಸರಕು ಸಂಕೀರ್ಣವೂ ಕಲಾತ್ಮಕವೂ ಆಗಿತ್ತು. ಸಿತಾರ್ಖಾನೀ ಟುಕುಡಾಗಳು, ಪಖಾವಜ್ ಮತ್ತು ಮೃದಂಗ ಬೋಲ್ಗಳನ್ನು ಯಥೇಚ್ಛವಾಗಿ ಬಳಸಿಕೊಂಡು ತೀನ್ತಾಳನ್ನು ವಿಸ್ತರಿಸಿದುದು ನರ್ತಕಿಯ ಪರಿಣತಿಯ ದ್ಯೋತಕವಾಗಿತ್ತು. ಹಾಗೆಯೇ ಅವರ ನೃತ್ತದಲ್ಲಿ ರೂಪುಗೊಂಡ ಫರನ್, ಚಕ್ಕರ್ ಮತ್ತು ತತ್ಕಾರಗಳು ಓಜಪೂರ್ಣವಾಗಿದ್ದು ಶ್ವೇತಾ ಅವರ ಲಯ ಪ್ರಬುದ್ಧತೆಯನ್ನು ಪ್ರಕಟಿಸಿದವು.

ಜಾನಪದ ಸಂಗೀತದ ವೈವಿಧ್ಯದ ರಚನೆಗಳಲ್ಲಿ ಕಜರಿ ಪ್ರಕಾರವೂ ಒಂದು. ಇದನ್ನು ಶಾಸ್ತ್ರೀಯ ಮತ್ತು ಲಘು ಶಾಸ್ತ್ರೀಯ ಶೈಲಿಗಳಲ್ಲೂ ಹಾಡುವುದುಂಟು. ಕಜರಿ ಶಬ್ದವು ಹಿಂದಿಯ ಕಾಜಲ್ (ಕೋಹ್ಲ್ ಅಂದರೆ ಕಪ್ಪು ಎಂದರ್ಥ) ಎಂಬ ಶಬ್ದದಿಂದ ಮೂಡಿದೆ.

ಸುಡು ಬೇಸಿಗೆ ಕಾಲದಲ್ಲಿ ಮುಂಗಾರಿನ ಕಪ್ಪು ಮೋಡಗಳು ತಂಪನ್ನೆರೆಯುತ್ತವೆ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಅಂತೆಯೇ ವಿರಹದಿಂದ ಬೆಂದು ಹೋಗಿರುವ ನಾಯಕಿಯು ತನ್ನ ನಾಯಕನನ್ನು ಮರಳಿ ಸೇರಲು ಬಯಸುತ್ತಾಳೆ. ನಾಯಕನಿಲ್ಲದೆ ಕೋಗಿಲೆಯೂ ತನ್ನ ಹಾಡನ್ನು ನಿಲ್ಲಿಸಿರುವಂತೆ ಹಾಗೂ ನವಿಲು ತನ್ನ ನರ್ತನವನ್ನು ಸ್ಥಗಿತಗೊಳಿಸಿರುವಂತೆ ನಾಯಕಿಗೆ ಭಾಸವಾಗುತ್ತದೆ.

ಆದ್ದರಿಂದ ದೂರದಲ್ಲಿರುವ ಪ್ರಿಯತಮನಿಗೆ ತನ್ನ ಸಂದೇಶವನ್ನು ತಲುಪಿಸಿ ಅವನನ್ನು ಕೂಡಲೇ ಕರೆತರುವಂತೆ ಆ ಕಪ್ಪು ಮೋಡಗಳನ್ನು ನಾಯಕಿಯು ಕೇಳಿಕೊಳ್ಳುತ್ತಾಳೆ ಮತ್ತು ಕಜಲಿ ಎಂಬ ದೇವಿಯನ್ನೂ ಪ್ರಾರ್ಥಿಸುತ್ತಾಳೆ.

ಇಂತಹ ಕಾವ್ಯ ವಸ್ತುವನ್ನು ಹೊಂದಿರುವ ಮತ್ತು ಮಳೆಗಾಲದ ರಾಗವಾದ ಮಿಯಾ ಕಿ ಮಲ್ಹಾರ್ನಲ್ಲಿ ನಿಬದ್ಧವಾದ ಕಜರಿಯೊಂದನ್ನು (ಜಾ ರೆ ಜಾ ಬದರಾ ಗರಜ್ ಬರಸ್ ಕಹೀಂ ಓರ್) ಶ್ವೇತಾ ಅವರು ಪ್ರೌಢವಾಗಿ ಅಭಿನಯಿಸಿದರು.

ಕೊನೆಯ ಮೇಘಮಲ್ಹಾರ್ ತರಾನಾದಲ್ಲಿ ಪಖಾವಜ್ ಮತ್ತು ಮೃದಂಗ ಬೋಲ್ಗಳನ್ನು ಉತ್ತಮ ಲಯಕಾರಿಯೊಂದಿಗೆ ಪ್ರದರ್ಶಿಸಲಾಯಿತು. ಅವರ ಪಾದಚಲನೆಗಳು, ಭಂಗಿಗಳು ಮತ್ತು ಚಕ್ಕರ್ಗಳು ನೋಡುಗರ ಮನಸೂರೆಗೊಂಡವು.

ತಮ್ಮ ಕಾರ್ಯಕ್ರಮದಾದ್ಯಂತ ನಿರೂಪಿತ ಆಯಾ ವಸ್ತು-ವಿಷಯಕ್ಕೆ ಸಂಬಂಧಿಸಿದ ಸ್ಲೈಡುಗಳನ್ನು ಹಿನ್ನೆಲೆಯಲ್ಲಿ ಬಳಸಿಕೊಂಡಿದ್ದು ಶ್ವೇತಾ ಅವರ ನೃತ್ಯವನ್ನು ಹೆಚ್ಚು ಅಂದಗಾಣಿಸಿತು. ಒಂದೆರಡು ಬಾರಿ ಧ್ವನಿಮುದ್ರಿತ ಸಂಗೀತ ಕೈಕೊಟ್ಟಿತಾದರೂ ಒಟ್ಟಾರೆ ಪ್ರಭಾವಕಾರಿಯಾಗಿತ್ತು. ನಿರೂಪಿಸಲಾದ ರಚನೆಗಳ ಬಗೆಗೆ ನಾಗರಾಜ್ ಅವರ ಟಿಪ್ಪಣಿಗಳು ಮಾಹಿತಿಪೂರ್ಣವಾಗಿದ್ದವು.

ಸಮೂಹ ನೃತ್ಯಗಳ ಸೌಂದರ್ಯ
ಅನುಭವೀ ಮತ್ತು ಪ್ರಶಂಸಾರ್ಹ ಪ್ರತಿಭಾನ್ವಿತರಾದ ಕಿರಣ್ ಸುಬ್ರಹ್ಮಣ್ಯ ಮತ್ತು ಅವರ ಪತ್ನಿ ಸಂಧ್ಯಾ ಕಿರಣ್ ಅವರ ಶಿಷ್ಯೆಯರು ಸಮೂಹ ಭರತನಾಟ್ಯದ ಸೌಂದರ್ಯ ಮತ್ತು ಹಿರಿಮೆಯನ್ನು ಸಾಬೀತುಗೊಳಿಸಿದರು. ಕಿರಣ್ (ನಟುವಾಂಗ), ಶ್ರೀವತ್ಸ(ಗಾಯನ), ಡಾ. ನಟರಾಜಮೂರ್ತಿ (ಪಿಟೀಲು), ಮಹೇಶಸ್ವಾಮಿ (ಕೊಳಲು), ಮಂಜುನಾಥ್ (ರಿದಂ) ಮತ್ತು ಲಿಂಗರಾಜು (ಮೃದಂಗ) ಅವರ ಸೂಕ್ತ ಸ್ಪಂದನೆಯೊಂದಿಗೆ ನರ್ತಕಿಯರು ಭಾವಜ್ಞರನ್ನು ಪರವಶಗೊಳಿಸಿದರು.

ಪುಷ್ಪಾಂಜಲಿಯ ನಂತರ ಶಿವನ ಆಯುಧಗಳು, ಅಲಂಕರಣಗಳು ಹಾಗೂ ಮಹತ್ವವನ್ನು ಶಾಂತಂ ಪದ್ಮಾಸನಸ್ಥಂ ಶಶಿಧರ ಶ್ಲೋಕದ ಆಧಾರದ ಮೇಲೆ ವಿಶದಪಡಿಸಿ ರುದ್ರನಾಮಾವಳಿ (ಓಂ ನಮಸ್ತೆ ಅಸ್ತು ಭಗವನ್)ಯಂತೆ ಅವನ ರೂಪಗುಣಗಳನ್ನು ಅಭಿನಯಿಸಲಾಯಿತು. ಅದರಲ್ಲಿ ಒಡಮೂಡಿದ ನೃತ್ತ ನಯನ ಮನೋಹರವಾಗಿದ್ದವು.

ಪಾರ್ವತಿಯ ಮೃದು ಮತ್ತು ನವಿರಾದ ಗುಣವಿಶೇಷತೆಗಳನ್ನು ತಂಜಾವೂರು ಶಂಕರಯ್ಯರ್ ಅವರ `ರಂಜಿನಿ ಮೃದು ಪಂಕಜ ಲೋಚನಿ~ ಕೃತಿಯ ಸಾಹಿತ್ಯವನ್ನನುಸರಿಸಿ ಚಿತ್ರಿಸಲಾಯಿತು.

ರಂಜಿನಿ, ಶ್ರೀ ರಂಜಿನಿ, ಮೇಘರಂಜಿನಿ ಮತ್ತು ಜನರಂಜಿನಿ- ರಂಜಿನಿ ಎಂಬ ಶಬ್ದದೊಂದಿಗಿರುವ ರಾಗಗಳ ರಂಜಿನಿಮಾಲಾದಲ್ಲಿ ಭರತನಾಟ್ಯದ ಸೌಂದರ್ಯ, ಕಲೆ ಮತ್ತು ಭಾವಗಳು ಮುಪ್ಪರಿಗೊಂಡವು.

ದೇವಿಯ ನಾನಾ ರೂಪ ದರ್ಶನ ಕಣ್ತುಂಬಿತು. ಸೂರದಾಸರ ಮೈಯಾ ಮೋರಿ ಕಸಮ ತೇರೀ (ಮಿಶ್ರ ಖಮಾಚ್ ರಾಗ) ಪದಾಭಿನಯ ಕಛೇರಿಗೆ ಕೀರೀಟಪ್ರಾಯವಾಗಿತ್ತೆನ್ನಬಹುದು. ಸೂರದಾಸರು ಈ ಪದದಲ್ಲಿ ತುಂಟ ಕೃಷ್ಣನು ತನ್ನ ತಾಯಿ ಯಶೋದೆಯೊಡನೆ ಮಾಡುವ ತುಂಟಾಟದ ವರ್ಣನೆಯನ್ನು ಬಹು ಸೊಗಸಾಗಿ ಮಾಡಿದ್ದಾರೆ.

ನಾನು ನಿನ್ನಾಣೆಗೂ ಬೆಣ್ಣೆಯನ್ನು ಕದ್ದು ತಿನ್ನಲಿಲ್ಲ. ನನ್ನ ಮಾತುಗಳಲ್ಲಿ ನಿನಗೆ ನಂಬಿಕೆಯೇ ಇಲ್ಲ. ನನ್ನ ಗೆಳೆಯರೆಲ್ಲರೂ ನನ್ನನ್ನು ವಿಧವಿಧವಾಗಿ ಹಂಗಿಸುತ್ತಾರೆ ಮುಂತಾಗಿ ಯಶೋದೆಯನ್ನು ಮರುಳು ಮಾಡಲೆತ್ನಿಸುತ್ತಾನೆ. ಆ ಪದಾಭಿನಯದ ಕೊನೆಯಂತೂ ರೋಚಕವಾಗಿತ್ತು.

ಬಾಲಕೃಷ್ಣನು ತನ್ನ ತಾಯಿಯಿಂದ ಕೊಂಚ ದೂರ ಸರಿದು ಮೇ ನೆ ಹೀ ಮಾಖನ್ ಖಾಯೋ (ನಾನೇ ಬೆಣ್ಣೆಯನ್ನು ತಿಂದೆ) ಎಂದು ಹೇಳಿ ಪರಾರಿಯಾಗುತ್ತಾನೆ.

ಆ ವಾಕ್ಯವನ್ನು ಗಾಯಕರು ಎರಡು ಮೂರು ಬಾರಿ ಹಾಡಿ ಭಾವೋತ್ಕಟತೆಗೆ ಇಂಬು ನೀಡಿದರು. ಗುರುಕಿರಣ್ ಅವರು ಅಳವಡಿಸಿದ್ದ ನಾಟ್ಯ ಮತ್ತು ಲೋಕ ಧರ್ಮಿಕ್ರಮ ಹಾಗೂ ಚರಿತ್ರ ಚಿತ್ರಣ ತಂತ್ರ ಪರಿಣಾಮಕಾರಿಯಾಗಿ ವಿಶೇಷ ಖುಷಿಯನ್ನು ನೀಡಿತು.

ಆದಿತಾಳ ಆಧರಿತ ತನಿ ಆವರ್ತನ ಗಣಿತದ ಲೆಕ್ಕಾಚಾರದ ಮೋಡಿಯನ್ನು ಮಾಡಿತು. ನರ್ತಕಿಯರು ಆನಂದತುಂದಿಲರಾಗಿ 8 ಅಕ್ಷರಗಳ ಆದಿತಾಳದ ಚೌಕಟ್ಟಿನಲ್ಲಿ 7-5-4-3 ಗತಿಗಳ ಮಾದರಿಯಲ್ಲಿ ಲಯ ವೈವಿಧ್ಯವನ್ನು ತೋರಿ ಅದಕ್ಕೆ ಸರಿ ಹೊಂದುವಂತಹ ಭರತನಾಟ್ಯಾಂಶಗಳನ್ನು ಸೊಗಸಾಗಿ ನಮೂದಿಸಿದರು.

ಪರಸ್ಪರ ಹೊಂದಾಣಿಕೆ, ಗುಂಪುಗಳ ಘಟನೆ ಮತ್ತು ವಿಘಟನೆ, ಆಕರ್ಷಕ ಜಾಮಿತಿಗಳ ನಿರ್ಮಾಣ ಮತ್ತು ಬಿಗಿಯಾದ ಲಯ ಹಂದರ ರಸಿಕರನ್ನು ಬೆರಗುಗೊಳಿಸಿತು. ಅದರಲ್ಲಿ ಭರತನಾಟ್ಯದ ನೃತ್ತದ ವೈಶಿಷ್ಟ್ಯವೆಲ್ಲಾ ಭಟ್ಟಿಯಿಳಿದು ಘನೀಕೃತವಾಗಿತ್ತು. ಗುರು ಸಂಧ್ಯಾಕಿರಣ್ ಅವರ ಪರಿಚಯ ಉಪಯುಕ್ತವಾಗಿತ್ತು.

ಗಮನಾರ್ಹ ಭರತನಾಟ್ಯ
ಅಮೆರಿಕಾದಲ್ಲಿ ಭರತನಾಟ್ಯವನ್ನು ಅಭ್ಯಸಿಸಿ ಇದೀಗ ನಗರಕ್ಕೆ ಆಗಮಿಸಿರುವ ಯುವ ನರ್ತಕ ಭರತ್ರಾಮ್ ಅವರು ತಮ್ಮ ಖಚಿತ ನೃತ್ಯ ರೇಖೆಗಳು, ಲಯದ ಮೇಲಿನ ಅಭಿನಂದನೀಯ ಹಿಡಿತ, ಭಾವ ಪ್ರಕಟಣೆಯಲ್ಲಿ ಸಫಲತೆ ಹೀಗೆ ಅನೇಕ ಲಕ್ಷಣಗಳಿಂದ ಗಮನಾರ್ಹವಾದ ಭರತನಾಟ್ಯ ಪ್ರದರ್ಶನ ನೀಡಿದರು.

ವೇಗದ ಜತಿಗಳು ಮತ್ತು ತತ್ಸಮಾನ ಅಡವು, ಹಸ್ತ ಪಾದ ಚಲನೆಗಳು ತುಂಬಿ ತುಳುಕಾಡಿದ ಕೃಷ್ಣನನ್ನು ಕುರಿತಾದ ಸುಂದರ ಮೋಹನ ಮುರಳೀಧರ ನೀಲಮೇಘ ಶಾಮ (ಕೀರವಾಣಿ) ವರ್ಣದ ಮಂಡನೆಯಂತೂ ಪ್ರೇಕ್ಷಕರ ಮನಸೂರೆಗೊಂಡಿತು. ಗುರು ಡಾ. ಸಂಜಯ್ ಅವರ ನೃತ್ಯ ಸಂಯೋಜನೆ ವಿದ್ವತ್ಪೂರ್ಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.