ಮಂಗಳವಾರ, ಮಾರ್ಚ್ 2, 2021
31 °C
ಜನರಿಗೆ ಅನುಕೂಲ ಮಾಡುವುದೇ ಉದ್ದೇಶ: ಖರ್ಗೆ

ನೆನೆಗುದಿಗೆ ಬಿದ್ದ ರೈಲ್ವೆ ಯೋಜನೆಗಳಿಗೆ ಮರುಜೀವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆನೆಗುದಿಗೆ ಬಿದ್ದ ರೈಲ್ವೆ ಯೋಜನೆಗಳಿಗೆ ಮರುಜೀವ

ಚಿಕ್ಕಮಗಳೂರು: ನೆನೆಗುದಿಗೆ ಬಿದ್ದಿದ್ದ ಚಿಕ್ಕಮಗಳೂರು–ಸಕಲೇಶಪುರ ರೈಲ್ವೆ ಯೋಜನೆಗೆ ಮರುಜೀವ ನೀಡಿ 10 ಕೋಟಿ ಹಣ ನೀಡಿದ್ದೇವೆ. ಈ ಯೋಜನೆಗೆ ಭೂಸ್ವಾಧೀನಕ್ಕೆ ಮೀಸಲಿ ಟ್ಟಿರುವ ₨ 15 ಕೋಟಿ ಸೇರಿ ಇದೇ ವರ್ಷ 25 ಕೋಟಿ ಹಣ ನೀಡಿದ್ದಂ ತಾಗಿದೆ. ಇದು ಯಾರನ್ನೂ ಖುಷಿ ಪಡಿಸಲು ಅಲ್ಲ, ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಯೋಜನೆಗೆ ಶಂಕುಸ್ಥಾಪನೆ ಮಾಡು ತ್ತಿದ್ದೇವೆ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.ನಗರದ ರೈಲ್ವೆ ನಿಲ್ದಾಣದಲ್ಲಿ ಭಾನು ವಾರ ಚಿಕ್ಕಮಗಳೂರು–ಸಕಲೇಶಪುರ ರೈಲ್ವೆ ಯೋಜನೆಯ ನೂತನ ಬ್ರಾಡ್‌ಗೇಜ್‌ ಮಾರ್ಗದ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮುಂದಿನ ವರ್ಷ ₨ 50 ಕೋಟಿ ನೀಡಿದರೆ ಇನ್ನು ಮೂರು, ನಾಲ್ಕು ವರ್ಷಗಳಲ್ಲಿ ಯೋಜನೆ ಪೂರ್ಣ ವಾಗುತ್ತದೆ ಎಂದರು.ಯಾವುದೇ ಕೆಲಸವನ್ನು ಬಡವರ ಬಗ್ಗೆ ಕಾಳಜಿ ವಹಿಸಿ ಮಾಡಬೇಕು. ನಾವು ರಾಜಕೀಯ ಉದ್ದೇಶದಿಂದ ಮಾಡು ತ್ತಿಲ್ಲ. ಕಡೂರು– ಚಿಕ್ಕಮ ಗಳೂರು ನಡುವೆ ರೈಲು ಆರಂಭಿಸಬೇಕಾದರೆ ಸಾಕಷ್ಟು ಅಡಚಣೆಗಳು ಇದ್ದವು. ಸುಮ್ಮನೆ ಕುಳಿತ್ತಿದ್ದರೆ ಇನ್ನೊಂದು ಚುನಾವಣೆ ಬರುತ್ತಿತ್ತು. ನಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕುಂಟು ನೆಪ ಹೇಳಿ ಮುಂದೂಡ ಬಾರದೆಂದು ಆಸಕ್ತಿ ವಹಿಸಿ ಹೊಸ ರೈಲು ಆರಂಭಿಸಿದೆವು ಎಂದು ನೆನಪಿಸಿದರು.ಇದೇ ರೀತಿ ರಾಯಚೂರು– ಗದ್ವಾಲ್‌ ನಡುವಿನ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಬಾಕಿ ಉಳಿದಿದ್ದ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಿ ಹೊಸ ರೈಲಿಗೆ ಚಾಲನೆ ನೀಡಿದೆ. ಕೋಲಾರ– ಚಿಕ್ಕಬಳ್ಳಾಪುರ ರೈಲು ಯೋಜನೆಯೂ ಸಣ್ಣಪುಟ್ಟ ಅಡಚಣೆಗಳಿಂದ ನೆನೆಗುದಿದೆ ಬಿದ್ದಿತ್ತು. ಅಲ್ಲಿನ ಜಿಲ್ಲಾಧಿಕಾರಿ ಮತ್ತು ಅಲ್ಲಿ ದಲಿತ ಸಂಘರ್ಷ ಸಮಿತಿಯವರನ್ನು ಒಟ್ಟಿಗೆ ಸೇರಿಸಿ ಸಭೆ ನಡೆಸಿ, ದಲಿತ ಸಂಘರ್ಷ ಸಮಿತಿಯವರ ಸಂಶಯ ನಿವಾರಿಸಿ, ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿ, ಒಪ್ಪಂದದ ಮೇರೆಗೆ ರೈಲು ಆರಂಭಿಸಲಾಯಿತು. ಈ ಯೋಜನೆಗಳು ಪ್ರಗತಿಯಲ್ಲಿದ್ದರೂ ಮೂರು, ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದವು. ಇದೇ ರೀತಿ ನೆನೆಗುದಿಗೆ ಬಿದ್ದಿದ್ದ ಹರಿಹರ– ಕೊಟ್ಟೂರು ರೈಲ್ವೆ ಯೋಜನೆಯನ್ನು ಮಾರ್ಚ್‌ 3ರಂದು ಉದ್ಘಾಟಿಸ ಲಾಗುತ್ತಿದೆ. ಈ ಯೋಜನೆಯಿಂದ 6 ತಾಲ್ಲೂಕುಗಳ ಜನರಿಗೆ ಅನುಕೂಲ ವಾಗಲಿದೆ. ಅಲ್ಲದೆ ಹೊಸಪೇಟೆ, ಹರಿಹರ, ಹುಬ್ಬಳ್ಳಿ–ಬೆಳಗಾವಿ ಜನರಿಗೆ ಪ್ರಯೋಜನವಾಗಲಿದೆ ಎಂದರು.ಬಜೆಟ್‌ ಓದಿದ ಮೇಲೆ ಇಲ್ಲಿನ ಸಂಸದರು ಚಿಕ್ಕಮಗಳೂರು–ಬೆಂಗಳೂರು ನಡುವೆ ಹೊಸ ರೈಲು ಆರಂಭಿಸಬೇಕು ಎಂದು ಕೇಳಿದಾಗ, ಗಾಡಿ ಬಿಟ್ಟಾಗಿದೆ. ಈಗ ಟಿಕೆಟ್‌ ಕೇಳಿದರೆ ಆಗುವುದಿಲ್ಲ. ಕಷ್ಟದ ಕೆಲಸ ಎಂದಿದ್ದೆ. ರಾಜ್ಯ ಸಭೆಯಲ್ಲಿ ಅವಕಾಶ ಸಿಕ್ಕಿದರೆ ಪ್ರಕಟಿಸುವುದಾಗಿ ಭರವಸೆ ನೀಡಿದ್ದೆ. ಆಗ ಪುನಃ ರಾಜ್ಯಕ್ಕೆ ಎರಡು ಹೊಸ ರೈಲು ಘೋಷಿಸಲಾಯಿತು. ಅದರಲ್ಲಿ ಚಿಕ್ಕಮಗಳೂರು–ಬೆಂಗಳೂರು ರೈಲು ಸೇರಿಸಲಾಯಿತು. ಆದರೆ, ಆ ರೈಲು ನಾಳೆಯೇ ಶುರುವಾಗುತ್ತದೆ ಎಂದು ಹೇಳಲಾರೆ. ನಮ್ಮಲ್ಲಿ ಲಭ್ಯವಿರುವ ಎಂಜಿನ್‌, ಬೋಗಿಗಳನ್ನು ನೋಡಿಕೊಂಡು ಆರಂಭಿಸಬೇಕಿದೆ. ಬಹುಶಃ 2014–15ರ ಅವಧಿಯಲ್ಲಿ ನೂತನ ರೈಲು ಸಂಚಾರ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಂಸದ ಜಯಪ್ರಕಾಶ್‌ ಹೆಗ್ಡೆ ಮಾತ ನಾಡಿ, ಹೊಸ ಮಾರ್ಗಕ್ಕಾಗಿ ಚಿಕ್ಕಮ ಗಳೂರು ವ್ಯಾಪ್ತಿಯಲ್ಲಿ ಜಿಲ್ಲಾಧಿ ಕಾರಿಗಳು ತ್ವರಿತಗತಿಯಲ್ಲಿ ಭೂಸ್ವಾಧೀನ ಮಾಡಿಕೊಟ್ಟಿದ್ದಾರೆ. ಹಾಸನ ಜಿಲ್ಲಾಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ. ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಮರುಜೀವನ ನೀಡುವ ಶಕ್ತಿ ನಮಗಿದೆ ಎಂದ ಮೇಲೆ ಅದನ್ನು ಪೂರ್ಣಗೊಳಿಸುವ ಶಕ್ತಿಯಿದೆ. ಇನ್ನಷ್ಟು ಸಂಪರ್ಕ ರೈಲುಗಳನ್ನು ಜಿಲ್ಲೆಗೆ ತರುವ ಪ್ರಯತ್ನ ಮಾಡುತ್ತೇನೆ. ನಮ್ಮ ಮೇಲೆ ವಿಶ್ವಾಸವಿಡಿ ಎಂದರು.ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಮಾತನಾಡಿ, ಹೊಸ ಮಾರ್ಗಕ್ಕೆ ಶಂಕುಸ್ಥಾಪನೆ ಮಾಡುತ್ತಿರುವುದು ಸುಲಭದ ಕೆಲಸವಲ್ಲ, ಧೀಮಂತಿಕೆಯ ಕೆಲಸ. ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿ ಕುಂಠಿತವಾಗಿತ್ತು. ಇದನ್ನು ನಿವಾರಿಸಲು ಖರ್ಗೆ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಅಭಿನಂದಿಸಿದರು.ಇದೇ ಸಂದರ್ಭ ಸಚಿವ ಖರ್ಗೆ ಅವರು, ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜ ನೆಯಡಿ ಫಲಾನುಭವಿಗಳಿಗೆ ಪ್ರವಾಸಿ ಟ್ಯಾಕ್ಸಿಗಳ ಕೀಲಿಕೈಗಳನ್ನು ಹಸ್ತಾಂ ತರಿಸಿದರು. ಲೋಕಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯ ಕಾಮ ಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್‌ ಶಂಕುಸ್ಥಾಪನೆ ನೆರವೇರಿಸಿದರು.ರೈಲ್ವೆ ಮಂಡಳಿ ಸದಸ್ಯ ಎಂಜಿನಿಯರ್‌ ಸುಬೋದ್‌ಕುಮಾರ್‌ ಜೈನ್‌, ಜಿಲ್ಲಾ ಉಸ್ತುವಾರಿ ಸಚಿವ ಅಭಯಚಂದ್ರ ಜೈನ್‌, ಶಾಸಕರಾದ ಸಿ.ಟಿ.ರವಿ, ಬಿ.ಬಿ.ನಿಂಗಯ್ಯ, ಜಿ.ಎಚ್‌.ಶ್ರೀನಿವಾಸ್‌, ಎಚ್‌.ಕೆ.ಕುಮಾರಸ್ವಾಮಿ, ಮೋಟಮ್ಮ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾಧಿಕಾರಿ ಬಿ.ಎಸ್‌.ಶೇಖರಪ್ಪ, ಎಸ್‌ಪಿ ಆರ್‌.ಚೇತನ್‌, ಜಿ.ಪಂ. ಸಿಇಒ ಕರುಣಾಕರ್‌, ತಾ.ಪಂ. ಅಧ್ಯಕ್ಷೆ ಅಂಬಿಕಾ ಶಿವಕುಮಾರ್‌  ಇದ್ದರು.

ಬಿನ್ನಿಮಿಲ್‌ ಜಾಗಕ್ಕೆ ರೈಲ್ವೆ ಕಾರ್ಯಾಗಾರ ಸ್ಥಳಾಂತರಚಿಕ್ಕಮಗಳೂರು: ಬೆಂಗಳೂರಿನಲ್ಲಿ ಹೊಸ ಜಾಗದಲ್ಲಿ ರೈಲ್ವೆ ಕಾರ್ಯಾಗಾರ ಶುರು ಮಾಡುತ್ತಿದ್ದು, ಇದಕ್ಕಾಗಿ ಬಿನ್ನಿ ಮಿಲ್‌ ಜಾಗವನ್ನು ₨.80 ಕೋಟಿಗೆ ಖರೀದಿ ಮಾಡಲಾಗಿದೆ. ಅಲ್ಲಿ ಇನ್ನು ಒಂದು ವಾರದಲ್ಲಿ ಅಡಿಗಲ್ಲು ಹಾಕಿ, ಕೆಲಸ ಪ್ರಾರಂಭಿಸಲಾಗುತ್ತದೆ ಎಂದು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ದೇಶದ ವಿವಿಧ ಸ್ಥಳಗಳಿಂದ ಬೆಂಗಳೂರು ಸಂಪರ್ಕಿಸಲು ಹೊಸ ರೈಲುಗಳಿಗೆ ಬೇಡಿಕೆ ಇದೆ. ಆದರೆ, ಈಗ ಬೆಂಗಳೂರು ನಿಲ್ದಾಣದಲ್ಲಿ ರೈಲುಗಳನ್ನು ನಿಲ್ಲಿಸಲು ಸ್ಥಳದ ಕೊರತೆ ಇದೆ. ನಿಲ್ದಾಣದಲ್ಲಿರುವ ಕಾರ್ಯಾಗಾರವನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಪ್ಲಾಟ್‌ಫಾರಂ ಹೆಚ್ಚಿಸಬಹುದು. ಇದರಿಂದ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಹೆಚ್ಚು ರೈಲುಗಳು ನಿಲ್ಲಲು ಸಾಧ್ಯವಾಗಲಿದೆ ಎಂದರು.ರಾಜ್ಯದಲ್ಲಿ ಈಗ ನಡೆಯುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಸುಮಾರು ₨ 23ರಿಂದ 24 ಸಾವಿರ ಕೋಟಿ ಅಗತ್ಯವಿದೆ. ಇದನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸದಿದ್ದರೆ ವೆಚ್ಚ ₨ 50ರಿಂದ  60 ಸಾವಿರ ಕೋಟಿಗೆ ಏರಿಕೆಯಾಗಲಿದೆ. ಕಾಲಮಿತಿಯಲ್ಲಿ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಸೇರಿ ಚರ್ಚಿಸಿ, ರಾಜ್ಯ ಸರ್ಕಾರ ತನ್ನ ಪಾಲಿನದಾಗಿ ಇಷ್ಟು ಹಣ ಕೊಡುತ್ತೇನೆ ಎಂದರೆ, ಸುಮಾರು 6ರಿಂದ 7 ವರ್ಷದೊಳಗೆ ಕೈಗೆತ್ತಿಕೊಂಡಿರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಬಹುದು ಎಂದರು.ಹೈ ಸ್ಪೀಡ್‌ ಟ್ರೈನ್‌: ಖರ್ಗೆ

ದೇಶಕ್ಕೆ ಅತಿ ವೇಗದ ರೈಲು ಸಂಚಾರ ಸೇವೆ ಪರಿಚಯಿಸುವ ಯೋಜನೆ ಇದ್ದು, ಜಪಾನಿನ  ಜೈಕಾ ಕಂಪೆನಿ ಜತೆಗೆ ಮಾತುಕತೆ ನಡೆಸಿದ್ದೇವೆ. ಆರಂಭದಲ್ಲಿ ಮುಂಬೈ ಮತ್ತು ಅಹಮದಾಬಾದ್‌ ನಡುವೆ ಅತಿ ವೇಗದ ರೈಲು ಸಂಚಾರ ಆರಂಭಿಸುವ ಉದ್ದೇಶವಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ. ಈಗಾಗಲೇ ಜಂಟಿ ಸರ್ವೆ ನಡೆಯುತ್ತಿದ್ದು, ಆರ್ಥಿಕವಾಗಿ ಸಾಧಕವೆನಿಸಿದರೆ ದೆಹಲಿವರೆಗೆ ವಿಸ್ತರಿಸುವ ಚಿಂತನೆ ಇದೆ. ಈ ಯೋಜನೆ ಅನುಷ್ಠಾನಕ್ಕೆ ಸುಮಾರು ₨.67 ಸಾವಿರ ಕೋಟಿ ರೂಪಾಯಿ ಅಗತ್ಯವಿದ್ದು, ಜಂಟಿ ಸಮೀಕ್ಷೆಯ ವರದಿ ಬಂದ ಮೇಲೆ ಯೋಜನೆಗೆ ಅಂತಿಮ ರೂಪರೇಷೆ ನೀಡಲಾ ಗುವುದು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸಚಿವ ಖರ್ಗೆ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.