ಸಿದ್ದಾಪುರ: ಪಟ್ಟಣದ ನೆಮ್ಮದಿ ಕೇಂದ್ರವನ್ನು ತಾಲ್ಲೂಕು ಕಚೇರಿಯ ಸಮೀಪಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಸ್ಥಳೀಯ ತಹಸೀಲ್ದಾರ ಕಾರ್ಯಾಲಯದ ಎದುರು ಧರಣಿ ನಡೆಸಿದರು.

`ಪಟ್ಟಣದ ನೆಮ್ಮದಿ ಕೇಂದ್ರವನ್ನು ಸ್ಥಳಾಂತರ ಮಾಡುವಂತೆ ಕೋರಿ ಈ ಹಿಂದೆ ಮನವಿ ನೀಡ ಲಾಗಿತ್ತು. ಆದರೆ ಆ ಮನವಿಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ಆದ್ದರಿಂದ ಈಗ ಪ್ರತಿಭಟನೆ ಅನಿವಾರ್ಯ ಎಂದು ಪ್ರತಿಭಟನಾಕಾರರು ಹೇಳಿದರು.

ಇನ್ನು ಮುಂದೆಯೂ ಬೇಡಿಕೆ ಈಡೇರದೇ ಇದ್ದರೆ ನೆಮ್ಮದಿ ಕೇಂದ್ರಕ್ಕೆ ಬೀಗ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯ ದಲ್ಲಿ ನಡೆದ ಪ್ರತಿಭಟನೆಯಲ್ಲಿ ಘಟಕದ ಅಧ್ಯಕ್ಷ ಕೆ.ಜಿ.ನಾಗರಾಜ, ಜಿ.ಪಂ.ಸದಸ್ಯ ಈಶ್ವರ ನಾಯ್ಕ, ತಾ.ಪಂ.ಸದಸ್ಯ ವಸಂತ ನಾಯ್ಕ, ತಾ.ಪಂ.ಮಾಜಿ ಸದಸ್ಯ ಸಿ.ಆರ್.ನಾಯ್ಕ, ಗ್ರಾ.ಪಂ.ಸದಸ್ಯ ರಾಜು ಕಟ್ಟೆಮನೆ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.