ಶುಕ್ರವಾರ, ಮೇ 27, 2022
21 °C

ನೈಸರ್ಗಿಕ ಚಾಪೆ ಮಾಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಾತನ ಕಾಲದಿಂದಲೂ ನಾವು ಚಾಪೆಗಳನ್ನು ಬಳಸುತ್ತಾ ಬಂದಿದ್ದೇವೆ. ಚಾಪೆ ತಯಾರಿಕೆ ಗುಡಿ ಕೈಗಾರಿಕೆಯಷ್ಟೇ ಪ್ರಾಚೀನವಾಗಿದೆ. ಈಚಲು ಎಲೆ, ಓಲೆಗರಿ, ಹುಲ್ಲುಕಡ್ಡಿ, ಬಿದಿರಿನಿಂದ ಸಾಮಾನ್ಯವಾಗಿ ಚಾಪೆಗಳನ್ನು ತಯಾರು ಮಾಡುತ್ತಾರೆ. ಇಂತಹ ಚಾಪೆಗಳು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದ್ದ ಈ ಚಾಪೆಗಳು ಆಧುನೀಕರಣದ ಭರಾಟೆಯಲ್ಲಿ  ಬಳಕೆಯಿಂದ ದೂರವಾಗಿವೆ.

ಹಾಸುವ ಚಾಪೆ, ಪಂಕ್ತಿ ಚಾಪೆ, ಕಿಡಗಿ ಬಾಗಿಲುಗಳಿಗೆ ಹಾಕು ಚಾಪೆ ಹೀಗೆ ಅನೇಕ ತರಹದ ವಿನ್ಯಾಸವುಳ್ಳ ಚಾಪೆಗಳು ಈಗ ಮಾರುಕಟ್ಟೆಗೆ ಬರುತ್ತಿಲ್ಲ. ಕಡವಾಡ, ನಂದನಗದ್ದಾ, ಹಣಕೋಣ, ಅಂಗಡಿ ಗ್ರಾಮಗಳಿಂದ ಈಚಲು ಮರದಿಂದ ತಯಾರಿಸಿದ ಚಾಪೆಗಳನ್ನು ಮಾರಾಟ ಮಾಡಲು ಬರುತ್ತಿದ್ದರು. ಚಾಪೆ ಮಾರಾಟಗಾರರು ಚಾಪೆಗಳನ್ನು ತಲೆಮೇಲೆ ಹೊತ್ತು ಊರಿಂದ ಊರಿಗೆ ತಿರುಗುತ್ತ ಮಾರಾಟ ಮಾಡುತ್ತಿದ್ದರು. ಕೆಲ ಸಮುದಾಯದ ಜೀವನ ನಿರ್ವಹಣೆಯ ಆದಾಯದ ಮೂಲವೂ ಇದಾಗಿತ್ತು.

ವರ್ಷಗತಿಸಿದಂತೆ ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ಚಾಪೆ ಬರಲಾರಂಭಿಸಿದ್ದರಿಂದ ಈಚಲು ಎಲೆ, ಓಲೆಗರಿ, ಹುಲ್ಲುಕಡ್ಡಿ, ಬಿದಿರಿನಿಂದ ತಯಾರು ಮಾಡಿದ ಚಾಪೆ ಬಳಕೆ ಮಾಡುವುದರಿಂದ ಜನರು ದೂರ ಸರಿದಿದ್ದಾರೆ. ಇನ್ನೊಂದೆಡೆ ಕಾಡು ನಾಶವಾಗಿ ಈಚಲು ಮರಗಳು ಕಡಿಮೆ ಆಗಿದ್ದರಿಂದ ಚಾಪೆ ತಯಾರಿಕೆಗೆ ಈಚಲ ಮರಗಳ ಎಲೆಗಳು ಸಿಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಈಚಲು ಮರದ ಚಾಪೆಗಳೇ ಸಿಗುತ್ತಿಲ್ಲ.

ಪ್ಲಾಸ್ಟಿಕ್ ಚಾಪೆಗಳ ಆಕರ್ಷಣೆ ಹೆಚ್ಚಾಗಿ ಪರಂಪರಾಗತವಾಗಿರುವ ಹುಲ್ಲಿನ, ಎಲೆಗಳ ಚಾಪೆಗಳಿಗೆ ಬೇಡಿಕೆ ಕಡಿಮೆ ಆಗಿದ್ದರಿಂದ ಗುಡಿ ಕೈಗಾರಿಕೆಗಳು ನಶಿಸಿ ಹೋಗುತ್ತಿವೆ. ಭಾರತದಲ್ಲಿ ವಿಶೇಷವಾಗಿ ಕೇರಳ, ತಮಿಳುನಾಡು, ಪಾಂಡಿಚೇರಿ ಆಸ್ಸಾಂ ಹಾಗೂ ಪಶ್ಚಿಮ ಬಂಗಾಲ ರಾಜ್ಯದಲ್ಲಿ ಚಾಪೆಗಳು ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುತ್ತವೆ.

ಆರೋಗ್ಯದಾಯಕ ಕರಕುಶಲ ಕಲೆಯನ್ನು ಬಿಂಬಿಸುವ ಹುಲ್ಲಿನ ಚಾಪೆಗಳ ಬಳಕೆ ಹೆಚ್ಚಾದರೆ ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.