ದಾಂಡೇಲಿ: ಇಲ್ಲಿಗೆ ಸಮೀಪದ ಗಣೇಶಗುಡಿ ರಸ್ತೆಯ ಹರೇಗಾಳಿ ಬಳಿ ನ್ಯಾನೋ ಕಾರೊಂದಕ್ಕೆ ಬೆಂಕಿ ಹತ್ತಿಕೊಂಡು ಅಪಘಾತಕ್ಕೀಡಾದ ಘಟನೆ ಜರುಗಿದೆ.

ಧಾರವಾಡದಿಂದ ಗಣೇಶಗುಡಿಯತ್ತ ಸಾಗುತ್ತಿದ್ದ ನ್ಯಾನೋ ಕಾರು ದಾಂಡೇಲಿ ಸಮೀಪದ ಬರ್ಚಿ ಕ್ರಾಸಿನಿಂದ ಮುಂದೆ ಸಾಗಿ ಹರೇಗಾಳಿ ಸಮೀಪ ಇರುವಾಗ ಕಾರಿನ ಹಿಂಭಾಗದಲ್ಲಿ ಹೊಗೆಯಾಡಿ ಬೆಂಕಿ ತಗುಲಿದ್ದನ್ನು ಕಂಡ ಚಾಲಕನಿಗೆ ನಿಯಂತ್ರಣ ತಪ್ಪಿದ್ದರಿಂದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಕಾರು ಸಂಪೂರ್ಣ ಭಸ್ಮವಾಗಿದೆ. ಆದರೆ ಚಾಲಕ ಧಾರವಾಡದ ವೆಂಕಟೇಶ ತೀವ್ರವಾಗಿ ಗಾಯಗೊಂಡಿದ್ದರಿಂದ ಆತನನ್ನು ಹುಬ್ಬಳ್ಳಿಯ ಕೆಎಂಸಿಗೆ ದಾಖಲಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಧಾರವಾಡದ ಸಂತೋಷ ಹೆಗಡೆ ಹಾಗೂ ಅಪ್ಪಣ್ಣ ನಾಯ್ಕ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ತಾಂತ್ರಿಕ ದೋಷವೇ ಬೆಂಕಿ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ದಾಂಡೇಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.