ಬೆಂಗಳೂರು: ಪರವಾನಗಿ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದ ಮಹಾತ್ಮ ಗಾಂಧಿ ರಸ್ತೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ವಾಣಿಜ್ಯ ಸಂಕೀರ್ಣದಲ್ಲಿರುವ (ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಅಪೆಕ್ಸ್ ಬ್ಯಾಂಕ್, ವಿಜಯ ಬ್ಯಾಂಕ್ ಮತ್ತು ಅಂಚೆ ಕಚೇರಿಯ ಶಾಖೆಗಳಿಗೆ ಬಿಬಿಎಂಪಿ ಅಧಿಕಾರಿಗಳು ಸೋಮವಾರ ಬೀಗಮುದ್ರೆ ಹಾಕಿದರು.

ಮಳಿಗೆ ಸಂಖ್ಯೆ 14 ಹಾಗೂ 15ರಲ್ಲಿರುವ ವಿಜಯ ಬ್ಯಾಂಕ್ ಶಾಖೆಯ ರೂ 3.24 ಕೋಟಿ, ಮಳಿಗೆ ಸಂಖ್ಯೆ ಒಂದರ ಅಪೆಕ್ಸ್ ಬ್ಯಾಂಕ್ ಶಾಖೆಯ ರೂ 33.09 ಲಕ್ಷ, ಮಳಿಗೆ ಸಂಖ್ಯೆ 16ರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ರೂ 63.56 ಲಕ್ಷ ಮತ್ತು ಮಳಿಗೆ ಸಂಖ್ಯೆ 17ರ ಅಂಚೆ ಕಚೇರಿಯ ರೂ 33.54 ಲಕ್ಷ ಪರವಾನಗಿ ಶುಲ್ಕ ಬಾಕಿ ಇತ್ತು.

ಬೀಗಮುದ್ರೆಯ ನಂತರ ಅಪೆಕ್ಸ್ ಬಾಂಕ್ ಅಧಿಕಾರಿಗಳು ಬಾಕಿ ಇದ್ದ ಪೂರ್ಣ ಹಣವನ್ನು ಪಾವತಿಸಿದರು. ವಿಜಯ ಬ್ಯಾಂಕ್ ಅಧಿಕಾರಿಗಳು ರೂ 2 ಕೋಟಿ ಪಾವತಿಸಿ, ಉಳಿದ ಮೊತ್ತ ಪಾವತಿಸಲು ಕಾಲಾವಕಾಶ ಕೋರಿದರು. ನಂತರ ಈ ಎರಡು ಬ್ಯಾಂಕ್ ಬೀಗಮುದ್ರೆ ತೆಗೆಯಲಾಯಿತು. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಅಂಚೆ ಕಚೇರಿಯ ಅಧಿಕಾರಿಗಳು ಬಾಕಿ ಮೊತ್ತ ಪಾವತಿಸಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪರವಾನಗಿ ಶುಲ್ಕ ಬಾಕಿ ಪಾವತಿಸುವಂತೆ ಮೇ 22 ರಂದು ನೋಟಿಸ್ ನೀಡಿ, ಏಳು ದಿನಗಳೊಳಗೆ ಬಾಕಿ ಪಾವತಿಸುವಂತೆ ಸೂಚಿಸಲಾಗಿತ್ತು. ಆದರೂ ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಅಧಿಕಾರಿಗಳು ಬಾಕಿ ಪಾವತಿ ಮಾಡದೇ ಇದ್ದುದರಿಂದ ಬೀಗಮುದ್ರೆಗೆ ಆದೇಶ ನೀಡಲಾಗಿತ್ತು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.