ಗುರುವಾರ , ಮೇ 13, 2021
16 °C

ಪಾಕಿಸ್ತಾನದಿಂದ ಸುಧಾರಿತ ಮಧ್ಯಂತರಗಾಮೀ ಕ್ಷಿಪಣಿ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್ಎಸ್): ಭಾರತವು 5000 ಕಿ.ಮೀ. ದೂರ ಸಾಗಿ ಚೀನಾದ ಮಧ್ಯಭಾಗಕ್ಕೆ ಅಪ್ಪಳಿಸಬಲ್ಲ ಸಾಮರ್ಥ್ಯದ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಒಂದು ವಾರಕ್ಕೂ ಕಡಿಮೆ ಅವಧಿಯೊಳಗೆಯೇ ಬುಧವಾರ ಪಾಕಿಸ್ತಾನವು ಮಧ್ಯಂತರಗಾಮೀ ಪರಮಾಣು ವಾಹಕ ಸಾಮರ್ಥ್ಯದ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿತು.~ಪಾಕಿಸ್ತಾನವು ಈದಿನ ಯಶಸ್ವಿಯಾಗಿ ಮಧ್ಯಂತರಗಾಮೀ ಕ್ಷಿಪ್ತ ಕ್ಷಿಪಣಿ ಹತ್ಫ್-4 ಶಹೀನ್-1ಎ ಯನ್ನು ಪರೀಕ್ಷಿಸಿತು ಎಂದು ಸೇನಾ ಹೇಳಿಕೆಯೊಂದು ತಿಳಿಸಿತು.ಈ ಕ್ಷಿಪಣಿಯು ಶಹೀನ್ -1 ಕ್ಷಿಪಣಿಯ ಸುಧಾರಿತ ಆವೃತ್ತಿ~ ಎಂದು ಹೇಳಿಕೆ ತಿಳಿಸಿದೆ.ಕ್ಷಿಪಣಿಯು ಪರಮಾಣು ಹಾಗೂ ಸಾಂಪ್ರದಾಯಿಕ ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಅಂತರ್ ಸೇವೆಗಳು  ಸಾರ್ವಜನಿಕ ಬಾಂಧವ್ಯಗಳು (ಐಎಸ್ ಪಿಆರ್) ಸಂಸ್ಥೆಯ ಹೇಳಿಕೆ ತಿಳಿಸಿದೆ.ಭಾರತವು ಏಪ್ರಿಲ್ 19ರಂದು ದೂರಗಾಮೀ ಪರಮಾಣು ಸಾಮರ್ಥ್ಯದ ~~ಅಗ್ನಿ-5 ಕ್ಷಿಪಣಿ ಪರೀಕ್ಷೆ ನಡೆಸಿದ ಬಳಿಕ ಪಾಕಿಸ್ತಾನ ಈ ಪರೀಕ್ಷೆ ನಡೆಸಿದೆ.

 

ಅಗ್ನಿ-5 ಕ್ಷಿಪಣಿ ಪರೀಕ್ಷೆಯೊಂದಿಗೆ ಭಾರತವು ಈ ಸಾಮರ್ಥ್ಯ ಹೊಂದಿದ ವಿಶ್ವದ ಪ್ರಮುಖ ಶಕ್ತ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿತ್ತು. ಅಮೆರಿಕ, ರಷ್ಯ, ಚೀನಾ, ಫ್ರಾನ್ಸ್ ಮತ್ತು ಬ್ರಿಟನ್ ಮಾತ್ರ 5000 ಕಿ.ಮೀ. ಹಾಗೂ ಅದರಾಚೆಗೆ ಅಪ್ಪಳಿಸಬಲ್ಲ ಸಾಮರ್ಥ್ಯದ ಕ್ಷಿಪಣಿಗಳನ್ನು ಈವರೆಗೆ ಹೊಂದಿದ್ದವು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.