ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 2011-12ನೇ ಹಣಕಾಸು ವರ್ಷದ ಆಸ್ತಿ ತೆರಿಗೆ ಸಂಗ್ರಹ ಪ್ರಕ್ರಿಯೆ ಆರಂಭವಾಗಿದ್ದು, ಈವರೆಗೆ ಸುಮಾರು ಏಳು ಕೋಟಿ ರೂಪಾಯಿ ಸಂಗ್ರಹವಾಗಿದೆ. ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಆನ್ಲೈನ್ ಮೂಲಕ ತೆರಿಗೆ ಪಾವತಿಗೆ ಅವಕಾಶವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ನಗರದಲ್ಲಿರುವ ಎಲ್ಲ ಆಸ್ತಿದಾರರರನ್ನು ತೆರಿಗೆ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಪಾಲಿಕೆ ಆಡಳಿತ ಈವರೆಗೆ ಸುಮಾರು 15 ಲಕ್ಷ ಆಸ್ತಿದಾರರನ್ನು ಗುರುತಿಸಿದೆ. ಇಷ್ಟು ದೊಡ್ಡ ಸಂಖ್ಯೆಯ ಆಸ್ತಿದಾರರು ಸುಲಭವಾಗಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಆನ್ಲೈನ್ ಮೂಲಕ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಿದೆ.

ಬಿಬಿಎಂಪಿ ವೆಬ್ಸೈಟ್ನಲ್ಲಿ ಆಸ್ತಿ ತೆರಿಗೆಗೆ ಸಂಬಂಧಪಟ್ಟ ವಿಭಾಗದಲ್ಲಿ ಅಗತ್ಯ ಮಾಹಿತಿಯನ್ನು ದಾಖಲಿಸಿದರೆ ಆಸ್ತಿದಾರರು ಪಾವತಿಸಬೇಕಾದ ತೆರಿಗೆ ಮೊತ್ತದ ಸಂಪೂರ್ಣ ವಿವರ ಕಂಪ್ಯೂಟರ್ನ ಪರದೆಯ ಮೇಲೆ ಮೂಡಲಿದೆ. ಜತೆಗೆ ಈ ವರ್ಷದಿಂದ ಜಾರಿಗೆ ಬಂದಿರುವ ತ್ಯಾಜ್ಯ ಕರವನ್ನು ತೆರಿಗೆ ಶುಲ್ಕದೊಂದಿಗೆ ಪಾವತಿಸಬೇಕಾಗುತ್ತದೆ.

ತ್ಯಾಜ್ಯ ಕರವನ್ನು ಆಸ್ತಿ ತೆರಿಗೆ ಜತೆಯಲ್ಲೇ ಪಾವತಿಸಬೇಕಿದ್ದು, ಅರ್ಧ ವಾರ್ಷಿಕ ಇಲ್ಲವೇ ವಾರ್ಷಿಕವಾಗಿ ಕರ ತೆರಬೇಕಾಗುತ್ತದೆ. ಖಾಲಿ ನಿವೇಶನಗಳಿಗೆ ತ್ಯಾಜ್ಯ ಕರ ಪಾವತಿಸುವ ಅಗತ್ಯವಿಲ್ಲ.

‘ಆಸ್ತಿದಾರರು ಸುಲಭವಾಗಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಆನ್ಲೈನ್ ಸೌಲಭ್ಯ ಕಲ್ಪಿಸಲಾಗಿದೆ. ಬಿಬಿಎಂಪಿ ವೆಬ್ಸೈಟ್ನಲ್ಲಿ ಸರಳ ವಿಧಾನದ ಮೂಲಕ ತೆರಿಗೆ ಪಾವತಿಸಬಹುದಾಗಿದೆ’ ಎಂದು ಪಾಲಿಕೆ ಮಾಹಿತಿ ತಂತ್ರಜ್ಞಾನ ಸಲಹೆಗಾರ ಶೇಷಾದ್ರಿ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ರೆಡಿಟ್-ಡೆಬಿಟ್ ಕಾರ್ಡ್ ಮೂಲಕವೂ ತೆರಿಗೆ ಪಾವತಿಸಬಹುದು. ಇದಕ್ಕೆ ಹೆಚ್ಚುವರಿಯಾಗಿ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಇದರಿಂದ ಪಾಲಿಕೆಗೂ ಹೊರೆಯಾಗಿಲ್ಲ. 270 ಸಹಾಯ ಕೇಂದ್ರಗಳು ಸೇರಿದಂತೆ 351 ಕೇಂದ್ರಗಳಿಗೆ ಈಗಾಗಲೇ ಕ್ರೆಡಿಟ್/ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಬಹುದಾದ ಯಂತ್ರಗಳನ್ನು ವಿತರಿಸಲಾಗಿದೆ’ ಎಂದು ಅವರು ಹೇಳಿದರು.

‘ಆನ್ಲೈನ್ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗಿದೆ. ಈವರೆಗೆ ಆನ್ಲೈನ್ ಮೂಲಕ ತೆರಿಗೆ ಪಾವತಿಗೆ ಕೇವಲ ರಸೀದಿಯನ್ನು ನೀಡಲಾಗುತ್ತಿತ್ತು.

ಇದೀಗ ತೆರಿಗೆ ಪಾವತಿಯ ಅರ್ಜಿ ಹಾಗೂ ಇತರೆ ಮಾಹಿತಿಯ ನಕಲು ಪ್ರತಿಯನ್ನು ಪಡೆಯಬಹುದಾಗಿದೆ. ಇದರಿಂದ ಆಸ್ತಿದಾರರಿಗೆ ಸಂಪೂರ್ಣ ಮಾಹಿತಿ ದೊರೆಯಲಿದೆ. ಅಲ್ಲದೇ ತೆರಿಗೆ ಪಾವತಿಗೆ ಖಾತ್ರಿ ಪಡೆದಂತಾಗುತ್ತದೆ’ ಎಂದರು.

‘ಆಸ್ತಿ ತೆರಿಗೆ ಪ್ರಮಾಣ ಏರಿಕೆ ಮಾಡದಿರುವ ಕುರಿತು ಮಾರ್ಚ್ 18ರ ಪಾಲಿಕೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಆ ನಂತರವಷ್ಟೇ ಆನ್ಲೈನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕಾಯಿತು. ಏಪ್ರಿಲ್ 5ರಿಂದ ಆನ್ಲೈನ್ ಪಾವತಿಗೆ ಚಾಲನೆ ನೀಡಲಾಗಿದೆ. ಸದ್ಯ ನೂರಾರು ಮಂದಿ ಈ ವ್ಯವಸ್ಥೆಯಡಿ ತೆರಿಗೆ ಪಾವತಿಸುತ್ತಿದ್ದಾರೆ’ ಎಂದು ವಿವರಿಸಿದರು.

ಏಳು ಕೋಟಿ ಸಂಗ್ರಹ: ‘2011-12ನೇ ಸಾಲಿನಲ್ಲಿ ಈವರೆಗೆ 4,000ಕ್ಕೂ ಹೆಚ್ಚು ಆಸ್ತಿದಾರರು ತೆರಿಗೆ ಪಾವತಿಸಿದ್ದು, ಸುಮಾರು ಏಳು ಕೋಟಿ ರೂಪಾಯಿ ಸಂಗ್ರಹವಾಗಿದೆ. 743 ಮಂದಿ ಆನ್ಲೈನ್ ಮೂಲಕ 37 ಲಕ್ಷ ರೂಪಾಯಿ ತೆರಿಗೆ ಕಟ್ಟಿದ್ದಾರೆ. ಕ್ರೆಡಿಟ್ ಕಾರ್ಡ್ ಮೂಲಕ 543 ಮಂದಿ ರೂ 27 ಲಕ್ಷ ಪಾವತಿಸಿದ್ದಾರೆ. ಏಪ್ರಿಲ್ 30ರೊಳಗೆ ಪೂರ್ಣ ತೆರಿಗೆ ಪಾವತಿಸುವವರಿಗೆ ಶೇ 5ರಷ್ಟು ರಿಯಾಯಿತಿ ನೀಡಲಾಗುವುದು’ ಎಂದು ಕಂದಾಯ ವಿಭಾಗದ ಸಲಹೆಗಾರ ಡಿ.ಎಲ್.ಚಂದ್ರಶೇಖರ್ ಹೇಳಿದರು.

ಆನ್ಲೈನ್ಗೆ ಸಂಬಂಧಪಟ್ಟ ಮಾಹಿತಿ/ ದೂರುಗಳಿಗೆ ಸಂಪರ್ಕ ದೂರವಾಣಿ ಸಂಖ್ಯೆ - 2224 7627/ 6568 3804/ 05 (ಸಮಯ- ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30 ಹಾಗೂ 2.30ರಿಂದ ಸಂಜೆ 6/ ಕಚೇರಿ ದಿನಗಳಲ್ಲಿ ಮಾತ್ರ). ಬಿಬಿಎಂಪಿ ವೆಬ್ಸೈಟ್ ವಿಳಾಸ: www.bbmp.gov.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.