ಭಾನುವಾರ, ಮೇ 16, 2021
22 °C

ಪಿಪಿಎಫ್ಗೆ ಗರಿಷ್ಠ ಬಡ್ಡಿ ದರ: ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ (ಎಸ್‌ಸಿಎಸ್‌ಎಸ್) ಏಪ್ರಿಲ್ 1ರಿಂದಲೇ ಗರಿಷ್ಠ ಬಡ್ಡಿ ದರ ಒದಗಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್, ಎಲ್ಲ ಬ್ಯಾಂಕ್‌ಗಳಿಗೆ ಸುತ್ತೋಲೆ ಕಳಿಸಿದೆ.ಸರ್ಕಾರ ಈ ಮೊದಲೇ ಪ್ರಕಟಿಸಿದಂತೆ `ಪಿಪಿಎಫ್~ ಮತ್ತು `ಎಸ್‌ಸಿಎಸ್‌ಎಸ್~ಗಳಿಗೆ ಕ್ರಮವಾಗಿ ಶೇ 8.8 ಮತ್ತು ಶೇ 9.3ರಂತೆ ಏಪ್ರಿಲ್ 1ರಿಂದ ಬಡ್ಡಿ ದರ ನೀಡಬೇಕು ಎಂದು ಕೇಂದ್ರೀಯ ಬ್ಯಾಂಕ್ ತಿಳಿಸಿದೆ.

ಕಳೆದ ತಿಂಗಳು ಕೇಂದ್ರ ಸರ್ಕಾರವು `ಪಿಪಿಎಫ್~ಗಳ ಮೇಲಿನ ಬಡ್ಡಿ ದರವನ್ನು ಶೇ 0.2ರಷ್ಟು (ಶೇ 8.8ಕ್ಕೆ) ಮತ್ತು `ಎಸ್‌ಸಿಎಸ್‌ಎಸ್~ ಬಡ್ಡಿ ದರವನ್ನು ಶೇ 9ರಿಂದ ಶೇ 9.3ಕ್ಕೆ ಹೆಚ್ಚಿಸಿತ್ತು.ಈ ಎರಡೂ ಸಣ್ಣ ಉಳಿತಾಯ ಯೋಜನೆಗಳಿಗೆ ಸಂಬಂಧಿಸಿದ ಹೊಸ ಬಡ್ಡಿ ದರಗಳನ್ನು ಈ ಯೋಜನೆಗಳ ಚಂದಾದಾರರ ಗಮನಕ್ಕೆ ತರಲು ಬ್ಯಾಂಕ್‌ಗಳು ತಮ್ಮ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು ಎಂದೂ `ಆರ್‌ಬಿಐ~ ಸೂಚಿಸಿದೆ. ಇದಕ್ಕೂ ಮೊದಲು ಸರ್ಕಾರ `ಪಿಪಿಎಫ್~ ಉಳಿತಾಯದ ವಾರ್ಷಿಕ ಗರಿಷ್ಠ ಮಿತಿಯನ್ನು ರೂ 70 ಸಾವಿರದಿಂದ ರೂ 1 ಲಕ್ಷಕ್ಕೆ ಹೆಚ್ಚಿಸಿತ್ತು.ಸಣ್ಣ ಉಳಿತಾಯ ಯೋಜನೆಗಳಿಗೆ ಮಾರುಕಟ್ಟೆ ದರದಲ್ಲಿ ಬಡ್ಡಿ ದರ ನಿಗದಿಪಡಿಸಬೇಕು. ವರ್ಷಕ್ಕೊಮ್ಮೆ ಈ ಬಡ್ಡಿ ದರಗಳನ್ನು ಪರಿಷ್ಕರಿಸಬೇಕು ಎಂದು ಶ್ಯಾಮಲಾ ಗೋಪಿನಾಥ್ ಸಮಿತಿಯು ಶಿಫಾರಸು ಮಾಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.