ಭಾನುವಾರ, ಸೆಪ್ಟೆಂಬರ್ 22, 2019
22 °C

ಪುರಸಭೆಯಿಂದ ಚರಂಡಿ ತ್ಯಾಜ್ಯ ತೆರವು ಕಾಮಗಾರಿ

Published:
Updated:

ಪ್ರಜಾವಾಣಿ ಫಲಶ್ರುತಿದೇವನಹಳ್ಳಿ:
ಪಟ್ಟಣದ ರಾಷ್ಟ್ರೀಯ ಹೆದ್ದಾರಿ 7ರ ಟಿ.ಎ.ಪಿ.ಎಂ.ಸಿ.ಎಸ್ ಮುಂಭಾಗದಿಂದ ಹಳೆ ಬಸ್ ನಿಲ್ದಾಣದವರೆಗೂ ಚರಂಡಿ ನೀರು ಸುಗಮವಾಗಿ ಹರಿದು ಹೋಗಲು ಪುರಸಭೆ ಶುಕ್ರವಾರ ಕಾಮಗಾರಿಕೆ ಚಾಲನೆ ನೀಡಿತು.ಪುರಸಭೆ ಹಾಗೂ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದ ಬಗ್ಗೆ ಹಾಗೂ ಸಾರ್ವಜನಿಕರ ಸಾಂಕ್ರಾಮಿಕ ರೋಗದ ಆತಂಕದ ಬಗ್ಗೆ ಈ ಕುರಿತು ಪತ್ರಿಕೆಯಲ್ಲಿ ಫೆಬ್ರವರಿ 10, 2011 ರಂದು “ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಾಗರೀಕರು, ದೇವನಹಳ್ಳಿ `ಹೆದ್ದಾರಿ ಬದಿ ಕೊಳಕಿನ ರಾಶಿ~ ಎಂಬ ಶಿರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.ವರದಿಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು ವಿಳಂಭವಾಗಿಯಾದರೂ ಸ್ಥಗಿತಗೊಳಿಸಲಾಗಿದ್ದ ಚರಂಡಿ ಕಾಮಗಾರಿಯನ್ನು ಮುಂದುವರಿಸಿದ್ದು ಕೊಳಕು ತಾಜ್ಯ ಹರಿಯಲು ಅನುವು ಮಾಡಿಕೊಡುತಿದ್ದಾರೆ, ಸುದ್ದಿ ಪ್ರಕಟಣೆಯಿಂದ ತೆರವುಗೊಳ್ಳುತ್ತಿರುವ ತಾಜ್ಯದ ಬಗ್ಗೆ ರಸ್ತೆ ಬದಿಯ ಅಂಗಡಿಗಳ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.

 

Post Comments (+)