ನವದೆಹಲಿ (ಪಿಟಿಐ): ಗುರುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ದರವನ್ನು ಲೀಟರಿಗೆ ರೂ 3.14ರಷ್ಟು ಹೆಚ್ಚಿಸಲು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ನಿರ್ಧರಿಸಿವೆ.

ಸದ್ಯ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದ ಮೇಲೆ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ರೂ 2.61 ನಷ್ಟ ಅನುಭವಿಸುತ್ತಿವೆ. ಇದರಿಂದ ಪ್ರತಿ ದಿನ ಕಂಪೆನಿಗಳಿಗೆ ರೂ15 ಕೋಟಿ ನಷ್ಟವಾಗುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಿರುವುದರ ಜತೆಗೆ, ಡಾಲರ್ ಎದುರು ರೂಪಾಯಿ ಅಪಮೌಲ್ಯಗೊಂಡಿರುವುದು ಕೂಡ ಪೆಟ್ರೋಲ್ ಬೆಲೆ ಏರಿಕೆಗೆ ಪ್ರಮುಖ ಕಾರಣ. ಡಾಲರ್ ಎದುರು ರೂಪಾಯಿ ಮೌಲ್ಯ ಸೆಪ್ಟೆಂಬರ್ 2009ರ ನಂತರ ಇದೇ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದ ಕಚ್ಚಾ ತೈಲ ಆಮದು ದರ ಗಣನೀಯವಾಗಿ ಹೆಚ್ಚಲಿದ್ದು, ವಾರ್ಷಿಕ ರೂ9 ಸಾವಿರ ಕೋಟಿಗಳಷ್ಟು ಹೆಚ್ಚುವರಿ ನಷ್ಟ ಅಂದಾಜಿಸಲಾಗಿದೆ.

ಕಳೆದ ಮೇ 15ರಂದು ಪೆಟ್ರೋಲ್ ದರವನ್ನು ಲೀಟರಿಗೆ ರೂ5 ಹೆಚ್ಚಿಸಲಾಗಿತ್ತು. ಸದ್ಯ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ರೂ63.70 ಇದೆ. ಪರಿಷ್ಕೃತ ದರದಂತೆ ಇದು ರೂ66.84ರಷ್ಟಾಗಲಿದೆ. ವ್ಯಾಟ್ ಮತ್ತು ಇತರೆ ಸ್ಥಳೀಯ ತೆರಿಗೆಗಳನ್ನು ಸೇರಿಸಿ, ಉಳಿದ ನಗರಗಳ ಧಾರಣೆಗಳು ಶೀಘ್ರದಲ್ಲಿಯೇ ಪ್ರಕಟವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕಳೆದ ವರ್ಷದ ಜೂನ್ ತಿಂಗಳಲ್ಲಿ ಪೆಟ್ರೋಲ್ ದರವನ್ನು ಸರ್ಕಾರಿ ನಿಯಂತ್ರಣದಿಂದ ಮುಕ್ತಗೊಳಿಸಲಾಗಿತ್ತು. ಮಾರಾಟದ ಮೇಲೆ ನಷ್ಟ ಅನುಭವಿಸುತ್ತಿದ್ದರೂ, ಹಣದುಬ್ಬರ ದರ ಗರಿಷ್ಠ ಮಟ್ಟದಲ್ಲಿದ್ದ ಹಿನ್ನೆಲೆಯಲ್ಲಿ ಕಂಪೆನಿಗಳು ಕಳೆದ 4 ತಿಂಗಳಿಂದ ತೈಲ ಬೆಲೆ ಏರಿಕೆ ಮಾಡಿರಲಿಲ್ಲ.

`ಕಡಿಮೆ ದರದಲ್ಲಿ ಪೆಟ್ರೋಲ್ ಮಾರಾಟ ಮಾಡುವುದರಿಂದ ಐಒಸಿ, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಕಂಪೆನಿಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ರೂ2,450 ಕೋಟಿ ನಷ್ಟ ಅನುಭವಿಸಲಿವೆ ಎಂದು ತೈಲ ಸಚಿವಾಲಯ ಹೇಳಿದೆ. ಪೆಟ್ರೋಲ್ ಹೊರತುಪಡಿಸಿದರೆ ಈ ಮೂರು ಕಂಪೆನಿಗಳು ಡೀಸೆಲ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಮಾರಾಟ ಮೇಲೆ ಪ್ರತಿ ದಿನ ರೂ263 ಕೋಟಿ ನಷ್ಟ ಅನುಭವಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.