ಬೆಂಗಳೂರು: ನಗರದಲ್ಲಿ ಕಾವೇರಿ 4ನೇ ಹಂತ 2ನೇ ಘಟ್ಟದ ನೀರು ಪೂರೈಕೆ ಯೋಜನೆಯ ಪೈಪ್ಲೈನ್ ಅಳವಡಿಕೆ ಕಾರ್ಯ ಮುಗಿದಿದ್ದು, ಹೊಸದಾಗಿ ನೀರಿನ ಸಂಪರ್ಕ ಪಡೆಯಬಯಸುವ ಸಾರ್ವಜನಿಕರು ಬೆಂಗಳೂರು ಜಲಮಂಡಳಿಗೆ ಅರ್ಜಿ ಸಲ್ಲಿಸಬಹುದು. ಸಂಬಂಧಿಸಿದ ಉಪವಿಭಾಗಗಳ ಕಚೇರಿಗಳಿಂದ `ಸಜಲ' ಅರ್ಜಿ ನಮೂನೆಯನ್ನು ಪಡೆದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ನಗರದಲ್ಲಿನ ಭೂಮಟ್ಟದ ಜಲಾಗಾರಗಳಿಂದ ವಿವಿಧ ಬಡಾವಣೆಗಳಿಗೆ ಹೊಸ ಯೋಜನೆಯ ನೀರನ್ನು ವಿತರಣೆ ಮಾಡುವ ಪೈಪ್ಲೈನ್ಗಳ ಅಳವಡಿಕೆ ಕಾರ್ಯ ಮುಗಿದಿದ್ದು, ಹೊಸ ಮಾರ್ಗಗಳನ್ನು ಚಾಲನೆಗೊಳಿಸಲಾಗಿದೆ.

ನಗರದ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಭಾಗಗಳಲ್ಲಿ ಹೊಸ ಮಾರ್ಗಗಳ ಕೆಲಸ ಬಹುತೇಕ ಮುಕ್ತಾಯಗೊಂಡಿದೆ. ಪೂರ್ವ ಭಾಗದಲ್ಲಿ ಪೈಪ್ಲೈನ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರ್ಪಡೆಯಾಗಿರುವ ಪ್ರದೇಶಗಳಲ್ಲಿ ಬೃಹತ್ ಪೈಪ್ಲೈನ್ಗಳನ್ನು ಅಳವಡಿಸಲಾಗಿದೆ. ಹೆಗ್ಗನಹಳ್ಳಿಯ ಭೂಮಟ್ಟದ ಜಲಾಗಾರದಿಂದ ಸದ್ಯದಲ್ಲೇ ನೀರು ಪೂರೈಕೆಯಾಗಲಿದೆ.

ಯೋಜನೆಯಡಿ ಪಟ್ಟಣಗೆರೆ, ಕೆಂಚನಹಳ್ಳಿ, ಜವರೇಗೌಡನ ದೊಡ್ಡಿ, ಕೃಷ್ಣ ಗಾರ್ಡನ್, ಮಲ್ಲಸಂದ್ರ, ಓಂಕಾರ ಲೇಔಟ್, ಚನ್ನಸಂದ್ರ, ಹಲಗೆ ವಡೇರಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಕೆಯಾಗಲಿದೆ.

ಮರಿಯಪ್ಪನ ಪಾಳ್ಯ, ಜ್ಞಾನಭಾರತಿ ಲೇಔಟ್, ನಾಗದೇವನ ಹಳ್ಳಿ, ಜಗಜ್ಯೋತಿ ನಗರ ಲೇಔಟ್, ಉಪಾಧ್ಯಾಯ ಲೇಔಟ್, ಗಜಾನನ ನಗರ, ಹೆಗ್ಗನಹಳ್ಳಿ ಕ್ರಾಸ್ ರಸ್ತೆ, ಶ್ರಿನಿವಾಸ ನಗರದ ಸುತ್ತಮುತ್ತಲಿನ ಪ್ರದೇಶಗಳು, ಕರೀಂಸಾಬ್ ಲೇಔಟ್, ರಾಮಯ್ಯ ಲೇಔಟ್, ರಾಜರಾಜೇಶ್ವರಿ ನಗರ, ಗಣಪತಿನಗರ, ಪಾರ್ವತಿನಗರ, ಶಿವಪುರ, ಲಗ್ಗೆರೆ, ಪೀಣ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಪೂರೈಸಲಾಗುವುದು.

ಮಾಹಿತಿಗೆ ರಾಜರಾಜೇಶ್ವರಿ ನಗರ ಉಪವಿಭಾಗದ ದೂರವಾಣಿ ಸಂಖ್ಯೆ : 2861 1826 / 97409 84165 ಮತ್ತು ಪೀಣ್ಯ ಉಪವಿಭಾಗದ ದೂರವಾಣಿ ಸಂಖ್ಯೆ : 2837 2030 / 97409 84166 ಸಂಪರ್ಕಿಸಬಹುದು ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.