ಬೆಂಗಳೂರು: `ಆಡಳಿತ ನಡೆಸುವವರಿಗೆ ಪ್ರತಿ ಕ್ಷಣವೂ ಚುನಾವಣಾ ಸಿದ್ಧತೆಯೇ. ಮುಖ್ಯಮಂತ್ರಿಯಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಸಂದರ್ಭದಲ್ಲೆಲ್ಲ ಚುನಾವಣಾ ಸಿದ್ಧತೆಗಳನ್ನು ನಡೆಸುತ್ತೇನೆ~.
ಗೃಹ ಕಚೇರಿ `ಕೃಷ್ಣಾ~ದಲ್ಲಿ ಗುರುವಾರ ಹೆರಿಟೇಜ್ ಅಕಾಡೆಮಿ ಏರ್ಪಡಿಸಿದ್ದ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪುಟ್ಟ ಬಾಲಕನೊಬ್ಬನ ಪ್ರಶ್ನೆಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೀಡಿದ ಉತ್ತರವಿದು.

ಚುನಾವಣಾ ಸಿದ್ಧತೆ ಹೇಗಿದೆ ಎಂದು ಪುಟ್ಟ ಬಾಲಕ ಕೇಳಿದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, `ಚುನಾವಣೆ ಬಂದಾಗ ಸಿದ್ಧತೆ ಮಾಡಿಕೊಳ್ಳುವುದಿಲ್ಲ. ನಾವು ಯಾವಾಗಲೂ ಚುನಾವಣೆಗೆ ಸಿದ್ಧರಾಗಿಯೇ ಕೆಲಸ ಮಾಡುತ್ತೇವೆ~ ಎಂದು ತಿಳಿಸಿದರು.

`ನನಗೆ ಧಾರವಾಡ ಪೇಡಾ ಇಷ್ಟ, ನಿನಗೂ ಇಷ್ಟನಾ~ ಎಂದು ಶೆಟ್ಟರ್ ಬಾಲಕನೊಬ್ಬನನ್ನು ಪ್ರಶ್ನಿಸಿದರು. ಹುಡುಗ `ಇಷ್ಟ ಇಲ್ಲ ಸಾರ್~ ಎಂದರೂ, `ಒಮ್ಮೆ ಟೇಸ್ಟ್ ನೋಡು, ಪೇಡಾ ಕಳುಹಿಸಿಕೊಡುತ್ತೇನೆ~ ಎಂದರು.

ಸಂವಾದದಲ್ಲಿ ಮಕ್ಕಳಿಂದ ತೂರಿ ಬಂದ ಪ್ರಶ್ನೆಗಳಿಗೆ ಶೆಟ್ಟರ್ ನಗುನಗುತ್ತ ಉತ್ತರಿಸಿದರು. ಸಂವಾದದ ಪ್ರಶ್ನೋತ್ತರ ರೂಪ ಹೀಗಿದೆ.

ವಿದ್ಯಾರ್ಥಿ: ನಿಮ್ಮ ಬರ್ತ್ ಡೇ ಯಾವಾಗ? ಹೇಗೆ ಆಚರಿಸಿಕೊಳ್ಳುತ್ತೀರಿ?
ಶೆಟ್ಟರ್: ಡಿಸೆಂಬರ್ 17ರಂದು ನನ್ನ ಬರ್ತ್ ಡೇ. ಸಾರ್ವಜನಿಕವಾಗಿ ಬರ್ತ್ ಡೇ ಆಚರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಕುಟುಂಬದವರೊಂದಿಗೆ ಸರಳವಾಗಿ ಆಚರಿಸಿಕೊಳ್ಳುತ್ತೇನೆ.

ವಿದ್ಯಾರ್ಥಿ: ನಿಮಗೆ ಮಾದರಿಯಾದ ವ್ಯಕ್ತಿಗಳು?
ಶೆಟ್ಟರ್: ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ

ವಿದ್ಯಾರ್ಥಿ: ಬನ್ನೇರುಘಟ್ಟ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ, ನಿಯಂತ್ರಣಕ್ಕೆ ಏನು ಕ್ರಮ ಕೈಗೊಂಡಿದ್ದೀರಿ? ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆಗಳು ಹಾಳಾಗಿವೆಯಲ್ಲಾ?
ಶೆಟ್ಟರ್: ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲ ಕಡೆ ಗುಂಡಿಗಳನ್ನು ಮುಚ್ಚುವಂತೆ ಆಯುಕ್ತರಿಗೆ ಸೂಚಿಸಲಾಗಿದೆ. ಮೆಟ್ರೊ ಕಾಮಗಾರಿ ಮುಗಿದಿರುವ ಕಡೆ ಕೂಡಲೇ ಗುಂಡಿ ಮುಚ್ಚಲು ಆದೇಶಿಸಲಾಗಿದೆ.

ವಿದ್ಯಾರ್ಥಿ: ನಿಮ್ಮ ಶಾಲಾ - ಕಾಲೇಜು ಜೀವನದ ಅನುಭವ ಹೇಳುತ್ತೀರಾ?
ಶೆಟ್ಟರ್: ಶಾಲಾ ದಿನಗಳಲ್ಲಿ ಕಷ್ಟಪಟ್ಟು ಓದುತ್ತಿದ್ದೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದೆ.

ವಿದ್ಯಾರ್ಥಿ: ನಿಮ್ಮ ನೆಚ್ಚಿನ ತಾಣ?
ಶೆಟ್ಟರ್: ಮಡಿಕೇರಿ.

ವಿದ್ಯಾರ್ಥಿ: ನನಗೆ ಬರ್ಗರ್ ಇಷ್ಟ, ಅಮ್ಮ ಬೇಡ ಎನ್ನುತ್ತಾರೆ. ಏನು ಮಾಡಲಿ?
ಶೆಟ್ಟರ್: ಅಮ್ಮ ಹೇಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅವರು ಹೇಳಿದ ಹಾಗೆ ಕೇಳು.

ವಿದ್ಯಾರ್ಥಿ: ಬೆಂಗಳೂರಿನ ಬಗ್ಗೆ ನಿಮ್ಮ ಕನಸು?
ಶೆಟ್ಟರ್: ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ರಾಜಧಾನಿಯನ್ನು ಮಾದರಿ ನಗರವನ್ನಾಗಿ ಮಾಡುವುದು ನನ್ನ ಕನಸು. ಕಸದ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.