ಸೋಮವಾರ, ಮೇ 17, 2021
31 °C

ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ತಾಲ್ಲೂಕಿನ ನಾಲ್ವರು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಲಾಗಿದೆ.

ನಂದಗುಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಅಂಗಡಿ ಮಲ್ಲಿಕಾರ್ಜುನ, ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯ ಡಿ.ಲಕ್ಷ್ಮೀನಾರಾಯಣ, ತಿರುವರಂಗ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಗಂಗರಾಜು ಹಾಗೂ ಸಾದಪ್ಪನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಆರ್.ಮಂಜುಳಾ ಪ್ರಶಸ್ತಿ ಪಡೆದವರು.ದೇವನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಬಿ.ಎನ್.ಬಚ್ಚೇಗೌಡ ಈ ಶಿಕ್ಷಕರನ್ನು ಸನ್ಮಾನಿಸಿದರು.ನೇತ್ರದಾನ ಶ್ರೇಷ್ಠ ದಾನ: `ನೇತ್ರದಾನ ಅತಿ ಶ್ರೇಷ್ಠ ದಾನ. ನೇತ್ರದಾನ ಮಾಡುವ ಮೂಲಕ ಇನ್ನೊಬ್ಬರಿಗೆ ದೃಷ್ಟಿ ನೀಡಿ ಅವರ ಬಾಳಿನ ಅಂಧಕಾರ ಹೋಗಲಾಡಿಸಬೇಕು~ ಎಂದು ಗ್ಲೋಬ್ ಐ ಫೌಂಡೇಷನ್‌ನ ಅಧ್ಯಕ್ಷ ಡಾ. ಸುಂದರರಾಮ ಶೆಟ್ಟಿ ಹೇಳಿದರು.ವಿಶ್ವ ನೇತ್ರದಾನ ಪಾಕ್ಷಿಕದ ಅಂಗವಾಗಿ ನೇತ್ರದಾನದ ಮಹತ್ವದ ಬಗ್ಗೆ ಇಲ್ಲಿಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ನಿಯಾ ಅಂಧತ್ವವನ್ನು ನೇತ್ರದಾನದ ಮೂಲಕ ಮಾತ್ರ ಹೋಗಲಾಡಿಸಲು ಸಾಧ್ಯ.

 

ಆದರೆ ನೇತ್ರದಾನಿಗಳ ಕೊರತೆ ಇದ್ದು, ಅಂಧರ ಬಾಳಿಗೆ ಇದು ತೊಡಕಾಗಿದೆ. ನೇತ್ರದಾನವನ್ನು ವ್ಯಕ್ತಿ ಸತ್ತ ಆರು ಗಂಟೆಯ ಒಳಗೆ ಮಾಡಬೇಕು. ಇದಕ್ಕೆ ವ್ಯಕ್ತಿಯ ಸಕ್ಕರೆ ಕಾಯಿಲೆ, ಪೊರೆ ರೋಗ, ಕನ್ನಡಕ ಧಾರಣೆ ಹಾಗೂ ವಯಸ್ಸು ಅಡ್ಡಿಯಾಗುವುದಿಲ್ಲ ಎಂದರು.200 ಎನ್‌ಎಸ್‌ಎಸ್ ವಿದ್ಯಾರ್ಥಿಗಳು ನೇತ್ರದಾನಕ್ಕೆ ಹೆಸರು ನೋಂದಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.