ಬುಧವಾರ, ಮೇ 25, 2022
22 °C

ಪ್ರೇಮಿಗಳ ದಿನ: ಚಿನ್ನ ತುಟ್ಟಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಪ್ರೇಮಿಗಳ ದಿನ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಚಿನಿವಾರ ಪೇಟೆಯಲ್ಲಿ ಮತ್ತೆ ವ್ಯವಹಾರ ಚುರುಕುಗೊಂಡಿದೆ.

ಆರ್ಥಿಕ ಮುಗ್ಗಟ್ಟಿನಿಂದ ದೇಶಗಳು ಚೇತರಿಸಿಕೊಳ್ಳುತ್ತಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಹಳದಿ ಲೋಹ ರಫ್ತು ಮತ್ತು ಚಿಲ್ಲರೆ ವಹಿವಾಟು ಶೇಕಡ 40ರಷ್ಟು ಪ್ರಗತಿ ದಾಖಲಿಸಿದೆ. ಚಿನ್ನದ ಜತೆಗೆ ವಜ್ರ, ಹವಳ ಮತ್ತು ಪ್ಲಾಟಿನಂ ಕೂಡ ಉತ್ತಮ ಮಾರಾಟ ಕಾಣುತ್ತಿದೆ ಎಂದು ಇಲ್ಲಿನ ಆಭರಣಗಳ ವ್ಯಾಪಾರಿ ರಾಹುಲ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.ಪ್ರಮುಖ ಆಭರಣ ವ್ಯಾಪಾರಿಗಳು ‘ಪ್ರೇಮಿಗಳ ದಿನ’ಕ್ಕಾಗಿ ವಿಶೇಷ ವಿನ್ಯಾಸದ ಒಡವೆಗಳನ್ನು ತಯಾರಿಸಿದ್ದು,ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಸೇರಿದಂತೆ ಲಘು ಭಾರದ ಆಭರಣಗಳು ಮತ್ತೆ ದುಬಾರಿಯಾಗುವ ಸಾಧ್ಯತೆ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಪ್ರೇಮಿಗಳ ದಿನದಂದು ಶೇ 20 ರಿಂದ 25ರಷ್ಟು ವ್ಯಾಪಾರ ವೃದ್ಧಿ ನಿರೀಕ್ಷಿಸುತ್ತಿದ್ದೇವೆ ಎಂದು ಇಲ್ಲಿನ ಧನ್‌ಭಾಯ್ ಜುವೆಲರಿಯ ಮಾಲೀಕ ಅಶೋಕ್ ಮೀನಾವಾಲ ಹೇಳಿದ್ದಾರೆ. ಪ್ರೇಮಿಗಳ ದಿನದ ಅಂಗವಾಗಿ ಚಿನ್ನದ ರಫ್ತು ಕೂಡ ಹೆಚ್ಚಿದೆ. ಈ ತಿಂಗಳಲ್ಲಿ ಇದು ಶೇ 15ರಿಂದ ಶೇ 25ರಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ಚಿನ್ನಾಭರಣ ವರ್ತಕರ ಒಕ್ಕೂಟದ ಅಧ್ಯಕ್ಷ ವಿನೋದ್ ಹಯಗ್ರೀವ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.