ಗುರುವಾರ , ಆಗಸ್ಟ್ 5, 2021
21 °C

ಪ್ಲಾಟಿನಂ ಪ್ರಭೆಯಲ್ಲಿ ಜಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೆಲುವು ಎನ್ನುವುದು ಚಿದಂಬರ ರಹಸ್ಯ! ರಾಜಕುಮಾರ್ ಅವರ ಮಾತನ್ನು ನೆನಪಿಸಿಕೊಂಡ ರಾಘವೇಂದ್ರ ರಾಜಕುಮಾರ್ ಆನಂದತುಂದಿಲರಾಗಿದ್ದರು. ಅವರ ಸಂತೋಷಕ್ಕೆ ಕಾರಣ ‘ಜಾಕಿ’ಯ ಅದ್ಭುತ ಯಶಸ್ಸು. ರಾಘವೇಂದ್ರ ಮಾತನಾಡುತ್ತಿದ್ದುದು ‘ಜಾಕಿ’ ಆಡಿಯೊದ ಪ್ಲಾಟಿನಂ ಡಿಸ್ಕ್ ಬಿಡುಗಡೆ ಸಮಾರಂಭದಲ್ಲಿ.ಚಿತ್ರದ ನಾಯಕ ಪುನೀತ್ ರಾಜಕುಮಾರ್ ಅವರಿಗೆ ಕೂಡ ‘ಜಾಕಿ’ಯ ಯಶಸ್ಸು ಖುಷಿ ಹಾಗೂ ಬೆರಗು ತಂದಿದೆ. ಈ ಗೆಲುವನ್ನು ತಂಡದ ಕಠಿಣ ಹಾಗೂ ಪ್ರಾಮಾಣಿಕ ಪ್ರಯತ್ನ ಎಂದು ಬಣ್ಣಿಸಿದ ಪುನೀತ್- ನಿರ್ದೇಶಕ ಸೂರಿ, ಸಂಗೀತ ನಿರ್ದೇಶಕ ಹರಿಕೃಷ್ಣ ಮತ್ತು ಗೀತರಚನೆಕಾರ ಯೋಗರಾಜಭಟ್ ಅವರೊಂದಿಗೆ ತಮ್ಮ ಕುಟುಂಬವನ್ನು ನೆನಪಿಸಿಕೊಂಡರು. ನಿರ್ದೇಶಕ ಸೂರಿ ಅವರ ಪಾಲಿಗೂ ಗೆಲುವೇ ವಿಸ್ಮಯ. ದುನಿಯಾ ಚಿತ್ರದಿಂದ ಈವರೆಗೆ ಜೊತೆಯಿರುವ ಯೋಗರಾಜ ಭಟ್‌ರಿಗೆ ಸೂರಿ ಥ್ಯಾಂಕ್ಸ್ ಹೇಳಿದರು.ಅಂದಹಾಗೆ, ಪುನೀತ್ ಚಿತ್ರವೊಂದರ ಪ್ಲಾಟಿನಂ ಡಿಸ್ಕ್ ಬಿಡುಗಡೆ ಆಗುತ್ತಿರುವುದು ಇದೇ ಮೊದಲು. ‘ಜಾಕಿ’ ಚಿತ್ರದ ಒಂದು ಲಕ್ಷಕ್ಕೂ ಹೆಚ್ಚು ಆಡಿಯೋ ಸಿ.ಡಿ. ಮಾರಾಟವಾಗಿವೆ ಎನ್ನುವ ಮಾಹಿತಿ ನೀಡಿದ್ದು ಆನಂದ್ ಆಡಿಯೊದ ಮೋಹನ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.