ಶನಿವಾರ, ಜೂನ್ 19, 2021
26 °C

ಫುಟ್‌ಬಾಲ್‌: ಬೆಂಗಳೂರು ಗನ್ನರ್ಸ್‌ ಎದುರು ಸೋತ ರೆಡ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೌಶಿಕ್‌ ತಂದಿತ್ತ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಗನ್ನರ್ಸ್‌ ತಂಡದವರು ಬಿಡಿಎಫ್‌ಎ ಆಶ್ರಯದಲ್ಲಿ ನಡೆ ಯುತ್ತಿರುವ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಜಯ ದಾಖಲಿಸಿದ್ದಾರೆ.ಬಸವನಗುಡಿಯ ಬಿಯುಎಫ್‌ಸಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗನ್ನರ್ಸ್‌ 3–1 ಗೋಲುಗಳಿಂದ ಬೆಂಗಳೂರು ರೆಡ್ಸ್‌್ ತಂಡವನ್ನು ಮಣಿಸಿತು.ಗನ್ನರ್ಸ್‌ ಪರ ಅಮೋಘ ಆಟ ತೋರಿದ ಕೌಶಿಕ್‌ (41 ಮತ್ತು 51ನೇ ನಿಮಿಷ) ಎರಡು ಗೋಲು ಬಾರಿಸಿದರೆ, ವಿಜಯ್‌ (49) ಒಂದು ಗೋಲುಗಳಿಸಿ ತಂಡದ ಗೆಲುವಿಗೆ ಕಾರಣರಾದರು. ರೆಡ್ಸ್‌ ತಂಡದ ವಿನೋದ್‌ (59) ಗಳಿಸಿದ ಏಕೈಕ ಗೋಲಿನ ಹೊರತಾಗಿ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.ಗೆಲುವು ಪಡೆದ ಹಂಪಿನಗರ: ದಿನದ ಮತ್ತೊಂದು ಪಂದ್ಯದಲ್ಲಿ ಹಂಪಿನಗರ ತಂಡ 1–0 ಗೋಲುಗಳಿಂದ ತೊರ್ನಾಂಡೊ ತಂಡವನ್ನು ಪರಾಭವಗೊಳಿಸಿತು.ವಿಜಯೀ ತಂಡದ ಪರ ಮಿಂಚಿನ ಆಟ ಪ್ರದರ್ಶಿಸಿದ ರಾಜನ್‌  ಪಂದ್ಯದ 44ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ತೊರ್ನಾಂಡೊ ತಂಡದ ಆಟಗಾರರು ಗೋಲಿನ ಖಾತೆ ತೆರೆಯಲು ವಿಫಲರಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.