ಶುಕ್ರವಾರ, ಮೇ 27, 2022
21 °C

ಫುಟ್‌ಬಾಲ್: ಸಿಐಎಲ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸನೋಜ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಸಿಐಎಲ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸಿಐಎಲ್ 3-0 ಗೋಲುಗಳಿಂದ ಬಿಇಎಲ್ ತಂಡವನ್ನು ಮಣಿಸಿತು. ಸನೋಜ್ ಪಂದ್ಯದ 29 ಹಾಗೂ 61ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮತ್ತೊಂದು ಗೋಲನ್ನು ಪ್ರದೀಪ್ (28) ತಂದಿತ್ತರು.ಕಳೆದ ಪಂದ್ಯದಲ್ಲಿ ಎಚ್‌ಎಎಲ್ ಎದುರು ಸೋಲು ಅನುಭವಿಸಿದ್ದ ಸಿಐಎಲ್ ಇದೀಗ ನಾಲ್ಕು ಪಂದ್ಯಗಳಿಂದ ಆರು ಪಾಯಿಂಟ್ ಕಲೆಹಾಕಿದೆ. ಬಿಇಎಲ್ ತಂಡಕ್ಕೆ ಎದುರಾದ ಸತತ ಐದನೇ ಸೋಲು ಇದು.

ಪಂದ್ಯದ ಮೊದಲ ಕೆಲವು ನಿಮಿಷಗಳಲ್ಲಿ ಬಿಇಎಲ್ ಆಟಗಾರರು ಪ್ರಭುತ್ವ ಸಾಧಿಸಿದ್ದರು.

 

ವಿಕ್ರಮ್ ಮತ್ತು ಅರವಿಂದ್ ಅವರು ಗೋಲು ಗಳಿಸುವ ಕೆಲವೊಂದು ಉತ್ತಮ ಪ್ರಯತ್ನ ನಡೆಸಿದರು. 14ನೇ ನಿಮಿಷದಲ್ಲಿ ವಿಕ್ರಮ್ ಹೆಡ್ ಮಾಡಿದ ಚೆಂಡು ಗುರಿ ಸೇರಲಿಲ್ಲ. ಆರಂಭದಲ್ಲಿ ಪರದಾಟ ನಡೆಸಿದ ಸಿಐಎಲ್ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು.28ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಾದ ಬಳಿಕ ಸಿಐಎಲ್ ಆಟಗಾರರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂತು. ಸನೋಜ್ ಮುಂದಿನ ನಿಮಿಷದಲ್ಲಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಎರಡನೇ ಅವಧಿಯಲ್ಲೂ ಬಿಇಎಲ್ ನೀರಸ ಪ್ರದರ್ಶನ ನೀಡಿತು.ಇಸ್ರೋಗೆ ಗೆಲುವು:
ಬುಧವಾರ ನಡೆದ `ಎ~ ಡಿವಿಷನ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಇಸ್ರೋ 3-2 ಗೋಲುಗಳಿಂದ ಎಜಿಒಆರ್‌ಸಿ ತಂಡವನ್ನು ಮಣಿಸಿತು.ರಾಜಾ (7ನೇ ನಿಮಿಷ) ಮತ್ತು ಸುಜಿತ್ (35) ತಂದಿತ್ತ ಗೋಲುಗಳ ನೆರವಿನಿಂದ ಇಸ್ರೋ ವಿರಾಮದ ವೇಳೆಗೆ 2-0 ರಲ್ಲಿ ಮುನ್ನಡೆ ಪಡೆದಿತ್ತು. ಎರಡನೇ ಅವಧಿಯಲ್ಲಿ ಮರುಹೋರಾಟ ನಡೆಸಿದ ಎಜಿಒಆರ್‌ಸಿ ಸಂತೋಷ್ (49) ಹಾಗೂ ಪ್ರವೀಣ್ (66) ಅವರ ನೆರವಿನಿಂದ ಸಮಬಲ ಸಾಧಿಸಿತು.ಆದರೆ ಪಂದ್ಯದ 76ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ ರಾಘವೇಂದ್ರ ಅವರು ಇಸ್ರೋ ತಂಡದ ಗೆಲುವಿನ ರೂವಾರಿ ಎನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.