ಸೋಮವಾರ, ಮಾರ್ಚ್ 8, 2021
26 °C
ಮುಂದಿನ ಮೂರು ವರ್ಷದ ದಿಕ್ಸೂಚಿ: ಜಯಂತ್‌ ಸಿನ್ಹಾ

ಫೆ. 29ಕ್ಕೆ 2016–17ನೇ ಸಾಲಿನ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫೆ. 29ಕ್ಕೆ 2016–17ನೇ ಸಾಲಿನ ಬಜೆಟ್

ನವದೆಹಲಿ(ಪಿಟಿಐ): ಫೆ. 29ರಂದು ಪ್ರಸಕ್ತ 2016–17ನೇ ಸಾಲಿನ ಬಜೆಟ್‌ ಮಂಡನೆಯಾಗಲಿದೆ. ಇದು, ಮುಂದಿನ ಮೂರು ವರ್ಷಗಳಿಗೆ ದಿಕ್ಸೂಚಿಯಾಗಲಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಜಯಂತ್‌ ಸಿನ್ಹಾ ಹೇಳಿದರು.ಭಾರತ- ಕೊರಿಯಾ ಉದ್ಯಮ ಶೃಂಗಸಭೆಯಲ್ಲಿ ಮಾತನಾಡಿದ ಸಿನ್ಹಾ ಅವರು, ಫೆ. 29ರಂದು ಬಜೆಟ್‌ ಮಂಡನೆಗಾಗಿ ಭರದ ಸಿದ್ಧತೆ ನಡೆದಿದೆ. ಪ್ರಸ್ತುತ ಬಜೆಟ್ ಮುಂದಿನ ಮೂರು ವರ್ಷಗಳಿಗೆ ದಿಕ್ಸೂಚಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸರ್ಕಾರದ ಆರ್ಥಿಕ ನೀತಿಗಳು ಸ್ಪಷ್ಟವಾಗಿವೆ. ಸುಸ್ಥಿರ ಅಭಿವೃದ್ಧಿ ಮತ್ತು ದೂರದೃಷ್ಟಿಯ ಅಭಿವೃದ್ಧಿ ಗುರಿಯನ್ನು ಬಜೆಟ್‌ ಒಳಗೊಂಡಿದೆ ಎಂದು ಅವರು ಹೇಳಿದರು.ಬಜೆಟ್‌ ರಚನಾ ಸಮಿತಿಯಲ್ಲಿ ಜಯಂತ್‌ ಸಿನ್ಹಾ ಹಾಗೂ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಹಾಗೂ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯ ಇದ್ದಾರೆ.ಸರ್ಕಾರ ಕೃಷಿ ಉತ್ಪಾದನೆಗೆ ಒತ್ತು ನೀಡುತ್ತಿದೆ. ಸರ್ವರಿಗೂ ಸಾಮಾಜಿಕ ಭದ್ರತೆ ಒದಗಿಸು ನಿಟ್ಟಿನಲ್ಲಿ ವಿನಿಯೋಗಿಸಲಿದೆ. ಆರ್ಥಿಕ ಪುನಶ್ಷೇತನ ಮತ್ತು ಹೂಡಿಕೆ ಹಾಗೂ ಮೂಲಸೌಲಭ್ಯಕ್ಕೆ ಒತ್ತು ನೀಡುವುದು ಪ್ರಸಕ್ತ ಬಜೆಟ್‌ನ ಪ್ರಮುಖ ಅಂಶಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.