ಕೆಂಗೇರಿ, ಉಲ್ಲಾಳು ಕಡೆಯಿಂದ ಶಿವಾಜಿನಗರ, ಶಾಂತಿನಗರದ ಕಡೆಗೆ ಬರುವ ಬಸ್ಸುಗಳು (ಉದಾ: ಜಿ-6, 222ಇ) ಮೈಸೂರು ರಸ್ತೆ ಫ್ಲೈಓವರ್ ಕೆಳಗೆ ಸಂಚರಿಸುವ ಬದಲಾಗಿ ಮೇಲೆ ಸಂಚರಿಸುತ್ತವೆ. ಮಾರ್ಕೆಟ್ನಲ್ಲಿ ಇಳಿಯಬೇಕಾದ ಪ್ರಯಾಣಿಕರಿಗೆ ಫ್ಲೈಓವರ್ ಮೇಲೆ ಇಳಿಸಿಬಿಡುತ್ತಾರೆ.

ಆದರೆ ಫ್ಲೈಓವರ್ ಮೇಲೆ ಇಳಿಸಿ-ಹತ್ತಿಸುವುದು ನಿಷೇಧ. ಈ ಬಗ್ಗೆ ಸಂಚಾರ ಪೊಲೀಸರಾಗಲಿ, ಬಿಎಂಟಿಸಿಯವರಾಗಲಿ ತಲೆಕೆಡಿಸಿಕೊಂಡಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆದ್ದರಿಂದ ಈ ಬಗ್ಗೆ ಬಿಎಂಟಿಸಿ, ಸಂಚಾರಿ ಪೊಲೀಸರು ಶೀಘ್ರ ಕ್ರಮ ಕೈಗೊಂಡು ಬಸ್ಗಳು ಫ್ಲೈಓವರ್ ಕೆಳಗೆ ಸಂಚರಿಸುವಂತೆ ಕ್ರಮ ಕೈಗೊಳ್ಳಿ.
- ಬಿಎಸ್ಎಂ.

ಬಿಎಂಟಿಸಿ ಉಲ್ಟಾ ಬೋರ್ಡುಗಳು
ಬಿಎಂಟಿಸಿ ಬಸ್ಸುಗಳಲ್ಲಿ ಎಲೆಕ್ಟ್ರಾನಿಕ್ ಬೋರ್ಡುಗಳು ಕಾಣಿಸಿಕೊಂಡ ಮೇಲೆ ಕೆಲವು ಉಪಯೋಗಗಳು ಆಗಿರುವಂತೆ ಚಾಲಕರ ಅಜಾಗರೂಕತೆಯ ಪರಿಣಾಮ ಹಲವು ಅನನುಕೂಲಗಳೂ ಆಗಿವೆ. ಬಸ್ಸುಗಳು ಯಾವ ನಿಲ್ದಾಣದ ಕಡೆಗೆ ಹೋಗುತ್ತಿವೆ ಎನ್ನುವುದನ್ನು ತೋರಿಸುವ ಬದಲು, ಹೊರಟು ಬಂದ ನಿಲ್ದಾಣವನ್ನು ತೋರಿಸಿ ಪ್ರಯಾಣಿಕರನ್ನು ದಿಕ್ಕು ತಪ್ಪಿಸುತ್ತಿವೆ ಅಥವಾ ಗೊಂದಲಕ್ಕೀಡು ಮಾಡುತ್ತಿವೆ.

ಇದರಿಂದಾಗಿ ಪ್ರಯಾಣಿಕರು ದಾರಿಮಧ್ಯೆ ಇಳಿದಿರುವ, ನಿರ್ವಾಹಕರೊಂದಿಗೆ ಜಗಳ ಮಾಡಿರುವ ಉದಾಹರಣೆಗಳೂ ಇವೆ. ಬಸ್ಸು ನಿರ್ದಿಷ್ಟ ನಿಲ್ದಾಣ ಬಿಡುವ ಮುನ್ನ ಅದರ ಬೋರ್ಡು ತಲುಪಬೇಕಾದ ನಿಲ್ದಾಣದ ಹೆಸರನ್ನು ಸೂಚಿಸುವಂತೆ ಚಾಲಕರು ಅದನ್ನು ಸರಿಪಡಿಸಿಕೊಳ್ಳದಿರುವುದರಿಂದ ಇಂಥ ಫಜೀತಿಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಲೋಪ ಸರಿಪಡಿಸಿಕೊಳ್ಳುವಂತೆ ಚಾಲಕರಿಗೆ ಸೂಕ್ತ ತಿಳಿವಳಿಕೆ ನೀಡಬೇಕಾಗಿ ವಿನಂತಿ.
-ಬೈರಮಂಗಲ ರಾಮೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.