ಬೆಂಗಳೂರು:  ಬಸವನಗುಡಿ ಈಜು ಕೇಂದ್ರದ ಈಜುಪಟುಗಳು ರಾಜ್ಯ ಈಜು ಸಂಸ್ಥೆ ಆಶ್ರಯದಲ್ಲಿ ಚಿಕ್ಕಲಸಂದ್ರದ ಕೆ.ಎ. ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ನಡೆದ ರಾಜ್ಯ ಸೀನಿಯರ್ ಈಜು ಚಾಂಪಿ ಯನ್ಷಿಪ್ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದರು.

ಇದೇ ಕೇಂದ್ರದ ಅರವಿಂದ್ ಮಣಿ ಮತ್ತು ಸಲೋನಿ ದಲಾಲ್ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳೆ ಯರ ವಿಭಾಗಗಳಲ್ಲಿ ಶ್ರೇಷ್ಠ ಈಜುಪಟು ಗೌರವ ಗಳಿಸಿದರು.

ಬಸವನಗುಡಿ ತಂಡ ಒಟ್ಟಾರೆ 84 ಪದಕಗಳನ್ನು ಗೆದ್ದಿತಲ್ಲದೆ, 505 ಪಾಯಿಂಟ್ಸ್ ಗಳಿಸಿ ಈ ಸಾಧನೆ ಮಾಡಿತು. ಪುರುಷರ ವಿಭಾಗದಲ್ಲಿ ಬಸವನಗುಡಿ 16 ಚಿನ್ನ ಮತ್ತು ತಲಾ 11 ಬೆಳ್ಳಿ ಮತ್ತು ಕಂಚು ಗೆದ್ದರೆ, ಮಹಿಳೆಯರ ವಿಭಾಗದಲ್ಲಿ 20 ಚಿನ್ನ ಮತ್ತು ತಲಾ 13 ಬೆಳ್ಳಿ ಮತ್ತು ಕಂಚು ಜಯಿಸಿತು.
ಡಾಲ್ಫಿನ್ ಈಜು ಕೇಂದ್ರ ಎರಡು ಚಿನ್ನ ಮತ್ತು ತಲಾ ಎಂಟು ಬೆಳ್ಳಿ ಮತ್ತು ಕಂಚು ಗೆದ್ದು ರನ್ನರ್ಸ್ ಅಪ್ ಆಯಿತು.

ಅರವಿಂದ್ಗೆ ಪ್ರಶಸ್ತಿ: ಪುರುಷರ ವಿಭಾಗದಲ್ಲಿ ಬಸವನಗುಡಿ ಈಜು ಕೇಂದ್ರದ ಅರವಿಂದ್ ಮಣಿ ಶ್ರೇಷ್ಠ ಈಜುಪಟು ಗೌರವ ಪಡೆದರು.
ಅರವಿಂದ್ ಒಟ್ಟು 135 ಪಾಯಿಂಟ್ಸ್ ಕಲೆಹಾಕಿದರು. ಜತೆಗೆ ಎರಡು ರಾಜ್ಯ ದಾಖಲೆಗಳನ್ನು ಮಾಡಿ ದರು.

ಸಲೋನಿಗೆ ಗರಿ: ಮಹಿಳೆಯರ ವಿಭಾಗದ ಶ್ರೇಷ್ಠ ಈಜುಪಟು ಗೌರವ ಬಿಎಸಿಯ ಸಲೋನಿ ದಲಾಲ್ ಪಾಲಾಯಿತು. ಸಲೋನಿ 122 ಪಾಯಿಂಟ್ಸ್ ಗಳಿಸಿದರಲ್ಲದೆ ಎರಡು ರಾಜ್ಯ ದಾಖಲೆಗಳನ್ನು ನಿರ್ಮಿಸಿದರು.

ಅವಿನಾಶ್ಗೆ ಎರಡು ಚಿನ್ನ: ಬಿಎಸಿಯ ಅವಿನಾಶ್ ಮಣಿ ಅಂತಿಮ ದಿನ ಎರಡು ಚಿನ್ನ ಗೆದ್ದರು.

ಅವಿನಾಶ್ 400ಮೀಟರ್ಸ್ ಫ್ರೀಸ್ಟೈಲ್ (ಕಾಲ: 4ನಿ.11.34ಸೆ.), ಮತ್ತು 200 ಮೀಟರ್ಸ್ ಫ್ಲೈ (2ನಿ.10.34ಸೆ.) ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದರು.

ಅಂತಿಮ ದಿನದ ಫಲಿತಾಂಶಗಳು: (ಮೊದಲ ಸ್ಥಾನ ಗಳಿಸಿದವರು): ಪುರುಷರ ವಿಭಾಗ: 400 ಮೀಟರ್ಸ್ ಫ್ರೀಸ್ಟೈಲ್: ಅವಿನಾಶ್ ಮಣಿ (ಬಿಎಸಿ; ಕಾಲ:4ನಿ.11.34ಸೆ.).

50 ಮೀಟರ್ಸ್ ಬ್ಯಾಕ್ಸ್ಟ್ರೋಕ್: ಅರವಿಂದ್ ಮಣಿ (ಬಿಎಸಿ; ಕಾಲ: 27.23 ಸೆ.).
200 ಮೀಟರ್ಸ್ ಫ್ಲೈ: ಅವಿನಾಶ್ ಮಣಿ (ಬಿಎಸಿ; ಕಾಲ: 2ನಿ.10.34ಸೆ.).
100ಮೀಟರ್ಸ್ ಫ್ರೀಸ್ಟೈಲ್: ಮಹಮ್ಮದ್ ಯಾಕೂಬ್ ಸಲೀಂ (ಡಾಲ್ಫಿನ್; ಕಾಲ: 55.25ಸೆ.).
50 ಮೀ. ಫ್ಲೈ: ಎಂ. ಪೃಥ್ವಿ (ಬಿಎಸಿ; ಕಾಲ: 26.56ಸೆ.).
4X100ಮೀಟರ್ಸ್ ಮೆಡ್ಲೆ: ಬಿಎಸಿ–ಎ (ಕಾಲ: 4ನಿ.06.34ಸೆ.).
ಮಹಿಳೆಯರ ವಿಭಾಗ: 400ಮೀ. ಫ್ರೀಸ್ಟೈಲ್: ವಿ. ಮಾಳವಿಕ (ಬಿಎಸಿ; ಕಾಲ: 4ನಿ.33.57ಸೆ.).
50 ಮೀಟರ್ಸ್ ಬ್ಯಾಕ್ಸ್ಟ್ರೋಕ್: ಜಾನತಿ ರಾಜೇಶ್ (ಬಿಎಸಿ; ಕಾಲ: 33.03ಸೆ.).
200 ಮೀ. ಫ್ಲೈ: ಸಿಮ್ರಾನ್ ದೀಪಕ್ ಮುಂಗೇಕರ್ (ಬಿಎಸಿ; 2ನಿ.32.61ಸೆ.).
100ಮೀಟರ್ಸ್ ಫ್ರೀಸ್ಟೈಲ್: ವಿ.ಮಾಳವಿಕ (ಬಿಎಸಿ; 1ನಿ. 00.47ಸೆ.).
50 ಮೀ. ಫ್ಲೈ: ಮಯೂರಿ ಲಿಂಗರಾಜ್ (ಬಿಎಸಿ; ಕಾಲ: 30.96ಸೆ.).
4X100 ಮೀ. ಮೆಡ್ಲೆ: ಬಿಎಸಿ–ಎ (ಕಾಲ: 4ನಿ.49.52ಸೆ.).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.