ಶುಕ್ರವಾರ, ಫೆಬ್ರವರಿ 26, 2021
31 °C

ಬಹುಬಗೆಯ ಸಾಧನಗಳಿಗೆ ಸ್ಮಾರ್ಟ್‌ ಸಿಮ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುಬಗೆಯ ಸಾಧನಗಳಿಗೆ ಸ್ಮಾರ್ಟ್‌ ಸಿಮ್‌

ಇಂದು ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದಂತೆಯೇ ಗ್ರಾಹಕರಲ್ಲಿ ಮೈಕ್ರೋ/ಮಿನಿ ಹಾಗೂ ನ್ಯಾನೋ ಸಿಮ್‌ಗಳ ನಡುವಿನ ಗೊಂದಲ ಹೆಚ್ಚಾಗಿದೆ. ಆ್ಯಪಲ್‌ ಕಂಪೆನಿಯ ಹೊಸ ಮಾದರಿಯ ಐಫೋನ್‌ ಹಾಗೂ ಐಪ್ಯಾಡ್‌ ಮಾರುಕಟ್ಟೆ ಪ್ರವೇಶಿಸುವ ಮೊದಲು ಕೇವಲ ಮಿನಿ ಹಾಗೂ ಮೈಕ್ರೊ ಸಿಮ್‌ ಎಂಬ ಎರಡು ಮಾದರಿ ಇದ್ದವು. ಆದರೆ ಇದೀಗ ಅದಕ್ಕಿಂತಲೂ ಕಿರಿದಾದ ನ್ಯಾನೊ ಎಂಬ ಮೂರನೇ ಬಗೆಯ ಸಿಮ್‌ ಕೂಡ ಕಾಲಿಟ್ಟಿದೆ.ಅಂದಹಾಗೆ, ಮಿನಿ ಸಿಮ್ ಸಾಮಾನ್ಯವಾಗಿ ಎಲ್ಲ ರೀತಿಯ ಫೋನ್‌ಗಳಲ್ಲಿಯೂ ಬಳಸಲಾಗುತ್ತದೆ. ಈ ಸಿಮ್ ಎರಡೂವರೆ ಸೆಂ.ಮೀ. ಉದ್ದ ಹಾಗೂ ಒಂದೂವರೆ ಸೆಂ.ಮೀ. ಅಗಲವಿರುತ್ತದೆ. ಮೈಕ್ರೋ ಸಿಮ್ ಕೊಂಚ ಸಣ್ಣ ಗಾತ್ರದ್ದಾಗಿದ್ದು, ಐಫೋನ್ ೪ನಲ್ಲಿ ಬಳಕೆಯಲ್ಲಿತ್ತು. ಆದರೆ ಇಂದು ಈ ಮಾದರಿಯ ಸಿಮ್ ಅನ್ನು ಸಾಮಾನ್ಯವಾಗಿ ಎಲ್ಲ ರೀತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲಾಗುತ್ತಿದೆ.ಮೈಕ್ರೋ ಸಿಮ್ ಮಿನಿ ಸಿಮ್‌ನ ಅರ್ಧ ಭಾಗದಷ್ಟಿರುತ್ತದೆ. ಇನ್ನು ನ್ಯಾನೋ ಸಿಮ್ ಮೈಕ್ರೋ ಸಿಮ್‌ಗಿಂತಲೂ ಶೇ ೪೦ರಷ್ಟು ಸಣ್ಣ ಗಾತ್ರದ್ದಾಗಿರುತ್ತದೆ. ಅಂದಹಾಗೆ, ಈ ಸಿಮ್ ಕೇವಲ ಐಫೋನ್ ೫, ೫ಎಸ್, ಹಾಗೂ ೫ಸಿ ಮೊಬೈಲ್‌ಗಳಲ್ಲಿ ಮಾತ್ರವೇ ಬಳಸಲು ಸಾಧ್ಯವಾಗುತ್ತದೆ. ೩ಜಿ ಹಾಗೂ ೪ಜಿ ನೆಟ್‌ವರ್ಕ್‌ಗಳಲ್ಲಿ ನ್ಯಾನೊ ಸಿಮ್ ಲಭ್ಯ.ಇದು ಗ್ರಾಹಕರ ಗೊಂದಲಕ್ಕೆ ಕಾರಣವಾಗುತ್ತದೆ. ಫೋನ್‌ ಬದಲಿಸುವುದಕ್ಕಿಂತ ಸಿಮ್‌ ಬದಲಿಸುವುದೇ ಕಷ್ಟ ಎಂಬ ನಂಬಿಕೆ ಗ್ರಾಹಕರಲ್ಲಿದೆ. ಸಿಮ್ ಬದಲಿಸಲು ಹಣ ನೀಡಬೇಕೆ, ಆ ಸಿಮ್‌ಗಾಗಿ ಎಷ್ಟು ದಿನ ಕಾಯಬೇಕು ಮೊದಲಾದ ಸಂಗತಿಗಳು ಗ್ರಾಹಕರನ್ನು ಗೊಂದಲಕ್ಕೀಡು ಮಾಡಿವೆ. ಮೈಕ್ರೊ ಸಿಮ್‌ನಿಂದ ನ್ಯಾನೊ ಸಿಮ್‌ಗೆ ಪರಿವರ್ತಿಸಲು ಕನಿಷ್ಠ ೨೪ರಿಂದ ೪೮ ಗಂಟೆಗಳ ಅವಧಿ ಬೇಕಾಗುತ್ತದೆ. ಅದೂ ಹೆಚ್ಚುವರಿ ಹಣ ಪಡೆದು ಸಿಮ್ ಪರಿವರ್ತನೆ ಮಾಡಿಕೊಡಲಾಗುತ್ತದೆ. ಇದಕ್ಕಾಗಿ ಬಳಕೆದಾರರು ಹತ್ತಿರದ ಸ್ಟೋರ್‌ಗಳಿಗೆ ಭೇಟಿ ನೀಡಬೇಕು. ಇನ್ನು ಬಹುತೇಕ ಪ್ರಕರಣಗಳಲ್ಲಿ ಸಿಮ್‌ಕಾರ್ಡ್ ಕತ್ತರಿಸಿ ಮೈಕ್ರೋ ಸಿಮ್ ಮಾಡಿಕೊಡಲಾಗುತ್ತದೆ. ಇದರಿಂದ ಸಿಗ್ನಲ್ ಗುಣಮಟ್ಟ ಕ್ಷೀಣಿಸುವ ಸಾಧ್ಯತೆ ಇರುತ್ತದೆ.ಇದಕ್ಕೊಂದು ಪರಿಹಾರವನ್ನು ಏರ್‌ಟೆಲ್‌ ಕಂಡುಕೊಂಡಿದೆ. ಸ್ಮಾರ್ಟ್ ಸಿಮ್ ಎಂಬ ಹೆಸರಿನ ಈ ಸಿಮ್ ಬಹುತೇಕ ಸಾಧನಗಳಲ್ಲಿ ಬಳಕೆ ಮಾಡಲು ಸಾಧ್ಯವಾಗುವಂತೆ ಮಾಡಿದೆ. ನ್ಯಾನೋ ಸಿಮ್ ಮಾದರಿಯ ಸಿಮ್ ಕಾರ್ಡ್ ಇದಾಗಿದೆಯಾದರೂ ಅಡಾಪ್ಟರ್ ಸಹಾಯದಿಂದ ಮೈಕ್ರೋ ಸಿಮ್ ಹಾಗೂ ಮಿನಿ ಸಿಮ್ (ಸಾಮಾನ್ಯ ಸಿಮ್‌ಕಾರ್ಡ್) ಮಾದರಿಯಲ್ಲಿಯೂ ಇದನ್ನು ಬಳಕೆ ಮಾಡಬಹುದಾಗಿದೆ.ಗ್ರಾಹಕರು ಒಂದೇ ಸಿಮ್ ಕಾರ್ಡ್ ಮೂಲಕ ಎಲ್ಲಾ ರೀತಿಯ ಸಾಧನಗಳನ್ನು ಬಳಕೆ ಮಾಡುವುದನ್ನು ಸಾಧ್ಯವಾಗಿಸುವ ಉದ್ದೇಶ ಏರ್‌ಟೆಲ್‌ನದ್ದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.