ರಾಮನಗರ: ಜಿಲ್ಲಾ ಕೇಂದ್ರವಾದ ರಾಮನಗರದಿಂದ ಕೂಗಳತೆ ದೂರದಲ್ಲಿರುವ ರಾಂಪುರದಲ್ಲಿ ನಡೆದಿದ್ದ ಬಾಲ್ಯ ವಿವಾಹ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ವಿಚಾರದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಗೊಂದಲಕ್ಕೆ ಒಳಗಾಗಿದೆ.

ಬಾಲ್ಯ ವಿವಾಹಕ್ಕೆ ಒಳಗಾದ ಹಡುಗ ಮತ್ತು ಹುಡುಗಿ ಇಬ್ಬರೂ ಅಪ್ರಾಪ್ತ ವಯಸ್ಸಿನವರೇ ಆಗಿರುವುದು ಹಾಗೂ ಎರಡೂ ಕಡೆಯ ಕುಟುಂಬದವರು ಬಡವರು, ಅನಕ್ಷರಸ್ತರು, ಹೆಚ್ಚಿನ ಜ್ಞಾನ ಇಲ್ಲದವರಾಗಿರುವ ಕಾರಣ ಪ್ರಕರಣ ದಾಖಲಿಸಬೇಕೇ, ಬೇಡವೇ ಎಂಬ ಗೊಂದಲ ಮೂಡಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ರಾಧಾ `ಪ್ರಜಾವಾಣಿ'ಗೆ ತಿಳಿಸಿದರು. ಈ ಬಾಲ್ಯ ವಿವಾಹ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿವಾಹವಾದ ಬಾಲಕಿಗೆ 11 ವರ್ಷ ಮತ್ತು ಬಾಲಕನಿಗೆ 17 ವರ್ಷವಾಗಿದೆ. ಬಾಲಕನಿಗೆ 18 ವರ್ಷವಾಗದ ಕಾರಣ ಆತನ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸುವಂತಿಲ್ಲ. ಬಾಲ ನ್ಯಾಯಮಂಡಳಿಯಲ್ಲಿ ದೂರು ಸಲ್ಲಿಸಬೇಕು. ಇನ್ನೂ ಈ ಎರಡೂ ಮಕ್ಕಳ ಪೋಷಕರ ಸ್ಥಿತಿಯಂತೂ ದಯನೀಯವಾಗಿದೆ. ಎರಡೂ ಕಡೆಯವರೂ ತೀರ ಬಡವರು, ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವವರು ಎಂದು ಅವರು ವಿವರಿಸಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಪ್ರಕಾರ ಬಾಲ್ಯ ವಿವಾಹ ನಡೆಸುವ ಅಥವಾ ಪ್ರೋತ್ಸಾಹಿಸುವ ವ್ಯಕ್ತಿಗೆ ಎರಡು ವರ್ಷ ಸಜೆ ಮತ್ತು ಒಂದು ಲಕ್ಷ ದಂಡ ವಿಧಿಸಲು ಅವಕಾಶ ಇದೆ. ಆದರೆ ವಿವಾಹವಾದ ಗಂಡು ಅಪ್ರಾಪ್ತನಾಗಿದ್ದು, ಎರಡೂ ಕಡೆಯ ಮನೆಯವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಗಮನಿಸಿದರೆ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕೋ, ಬೇಡವೋ ಎಂಬ ದ್ವಂದ್ವ ಕಾಡುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದರು.

ಕಾನೂನು ತಜ್ಞರ ಜತೆ ಚರ್ಚೆ: ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಬೇಕು. ಅದು ನಮ್ಮ ಜವಾಬ್ದಾರಿ ಕೂಡ. ಆದರೆ ಮಾನವೀಯ ಅಂಶಗಳು ಹಾಗೂ ಎರಡೂ ಕುಟುಂಬದ ಸ್ಥಿತಿಗತಿಯನ್ನು ನೋಡಿದರೆ ಪ್ರಕರಣ ದಾಖಲಿಸಲು ಕಷ್ಟವಾಗುತ್ತದೆ. ಈ ಬಗ್ಗೆ ಇನ್ನಷ್ಟು ಹಿರಿಯ ಅಧಿಕಾರಿಗಳ ಜತೆ, ಕಾನೂನು ತಜ್ಞರ ಜತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು. `ಈ ಕಾಯ್ದೆ ಸಾಕಷ್ಟು ಬಲಿಷ್ಠವಾಗಿದೆ. ಆದರೂ ನಮ್ಮ ಕಣ್ಣು ತಪ್ಪಿಸಿ ಸಮಾಜದಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ನಮಗೆ ಗೊತ್ತಾದ ಪ್ರಕರಣಗಳನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಸಾಕಷ್ಟು ಬಾಲ್ಯ ವಿವಾಹಗಳು ಬಲಿಷ್ಠರು, ವಿದ್ಯಾವಂತರು, ಪ್ರಭಾವಿಗಳ ನೇತೃತ್ವದಲ್ಲಿಯೇ ನಡೆಯುತ್ತಿದ್ದರೂ ಈ ಕಾಯ್ದೆಯಡಿ ಶಿಕ್ಷೆ ಅನುಭವಿಸಿದವರು ಮಾತ್ರ ಕಡಿಮೆಯೇ. ಹೀಗಿರುವಾಗ ರಾಂಪುರದಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣದಲ್ಲಿ ಪೋಷಕರ ಮೇಲೆ ಪ್ರಕರಣ ದಾಖಲಿಸಿದರೆ ಅದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವಾದಂತಾಗುತ್ತದೆ ಎಂದು ಕೆಲ ಅಧಿಕಾರಿಗಳು ಮತ್ತು ಮುಖಂಡರು ನನ್ನ ಬಳಿ ಚರ್ಚಿಸಿರುವುದಾಗಿ' ಹೇಳಿದರು.

ಬಾಲ್ಯ ವಿವಾಹವಾಗಿದ್ದ ಬಾಲಕಿಯ ರಕ್ಷಣೆ:
`ಈ ಪ್ರಕರಣದಲ್ಲಿ ವಿವಾಹವಾದ ಇಬ್ಬರೂ ಅಪ್ರಾಪ್ತರೇ ಆಗಿರುವ ಕಾರಣ ಈ ವಿವಾಹವೇ ಅಸಿಂಧುವಾಗುತ್ತದೆ. ಈ ಪ್ರಕರಣದಲ್ಲಿನ ಬಾಲಕಿಯನ್ನು ರಕ್ಷಿಸಿ, ಪೋಷಿಸಿ, ಅವಳಿಗೆ ಸೂಕ್ತ ವಿದ್ಯಾಭ್ಯಾಸ ಕಲ್ಪಿಸಿ ಉತ್ತಮ ಜೀವನ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆ ಕಾರಣದಿಂದಲೇ ವಿಷಯ ಗೊತ್ತಾಗದ ಕೂಡಲೇ ಆ ಬಾಲಕಿಯನ್ನು ರಕ್ಷಿಸಲಾಗಿದೆ. ಬಾಲಕಿಯೂ ವ್ಯಾಸಂಗ ಮುಂದುವರೆಸಲು ಆಸಕ್ತಿ ತೋರಿದ್ದು, ಆಕೆಯನ್ನು ಮಂಡ್ಯದ ಬಾಲಕಿಯರ ಬಾಲ ಮಂದಿರಕ್ಕೆ ದಾಖಲಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು. ಬಾಲಕಿಯ ತಂದೆ ಚಿಕ್ಕೋನಯ್ಯ ಅವರಿಗೆ `ಕಡಕ್' ಆಗಿ ಎಚ್ಚರಿಕೆ ನೀಡಲಾಗಿದೆ. ಬಾಲಕಿಯ ವಿದ್ಯಾಭ್ಯಾಸಕ್ಕೆ ಅಡ್ಡ ಬಾರದಂತೆ ಸೂಚಿಸಲಾಗಿದೆ. ಅವರು ಕೂಡ ಮಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಒದಗಿಸುವಂತೆ ಕೋರಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.