ಶನಿವಾರ, ಜನವರಿ 18, 2020
25 °C

ಬಾಲ್‌ ಬ್ಯಾಡ್ಮಿಂಟನ್: ಬನಶಂಕರಿ, ಆಳ್ವಾಸ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಬೆಂಗಳೂರಿನ ಬನಶಂಕರಿ ಸ್ಪೋರ್ಟ್ಸ್‌ ಕ್ಲಬ್ ಮತ್ತು ಮೂಡುಬಿದರೆಯ ಆಳ್ವಾಸ್ ‘ಎ‘ ತಂಡವು ಭಾನುವಾರ ಇಲ್ಲಿ ಮುಕ್ತಾಯವಾದ ರಾಜ್ಯಮಟ್ಟದ ಬಾಲ್‌ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ.ಮಹಿಳೆಯರ ವಿಭಾಗದಲ್ಲಿ ಮೂಡುಬಿದರೆಯ ಆಳ್ವಾಸ್ ‘ಎ’ ತಂಡವು 21–11ರಿಂದ ಆಳ್ವಾಸ್ ಬಿ ತಂಡದ ವಿರುದ್ಧ ಜಯಿಸಿ ಪ್ರಶಸ್ತಿ ಗಳಿಸಿತು. ಮೂರನೇ ಸ್ಥಾನವನ್ನು ಆಳ್ವಾಸ್ ಸಿ ತಂಡವು ಪಡೆಯಿತು. ಪುರುಷರ ವಿಭಾಗದ ಫೈನಲ್‌ನಲ್ಲಿ ನಾಯಕ ವಿಜಯಕುಮಾರ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಬೆಂಗಳೂರಿನ ಬನಶಂಕರಿ ಸ್ಪೋರ್ಟ್ಸ್ ಕ್ಲಬ್‌ 29–21ರಿಂದ ಬೆಂಗಳೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ತಂಡವನ್ನು ಸೋಲಿಸಿತು. ವಿಜಯನಗರ ಸ್ಪೋರ್ಟ್ಸ್‌ ಕ್ಲಬ್ ತಂಡವು ಮೂರನೇ ಸ್ಥಾನ ಗಳಿಸಿತು.

ಪ್ರತಿಕ್ರಿಯಿಸಿ (+)