ಸೋಮವಾರ, ಏಪ್ರಿಲ್ 19, 2021
28 °C

ಬಾವಿಗೆ ಬಿದ್ದು ಕಾಡಾನೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಆಹಾರ ಹುಡುಕಿಕೊಂಡು ಕಾಫಿ ತೋಟಕ್ಕೆ ಬಂದ ಕಾಡಾನೆಯೊಂದು ಪಾಳು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ದೇವರಪುರ ಸಮೀಪದ ಹೆಬ್ಬಾಲೆ ಭದ್ರಗೋಳದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಪೆಮ್ಮಂಡ ಮಾಚಯ್ಯ ಅವರ ಕಾಫಿ ತೋಟದಲ್ಲಿ ಪಾಳು ಬಿದ್ದ ಸುಮಾರು 25 ಅಡಿ ಆಳದ ಬಾವಿಗೆ ಕಾಡಾನೆಯು ಕಾಲು ಜಾರಿ ಬಿದ್ದಿದೆ ಎನ್ನಲಾಗಿದ್ದು, ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.



ನೀರಿಲ್ಲದ ಬಾವಿಯ ಸುತ್ತ ತಂತಿ ಬೇಲಿ ಇದ್ದರೂ ಅದನ್ನು ಆನೆ ದಾಟಿ ಹೋಗಿರುವುದು ಅಚ್ಚರಿ ಮೂಡಿಸಿದೆ. ಅಂದಾಜು 25 ವರ್ಷದ ಈ ಹೆಣ್ಣಾನೆಯನ್ನು ಮಂಗಳವಾರ ಬಾವಿಯಿಂದ ಹೊರತೆಗೆದು ಶವ ಪರೀಕ್ಷೆ ನಡೆಸಲಾಗುವುದು ಎಂದು ತಿತಿಮತಿ  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.