ಭಾನುವಾರ, ಜೂನ್ 13, 2021
25 °C
ಪಂಚರಂಗಿ

ಬಿಟ್ಟರೂ, ಬಿಡದು ಈ ಮಾಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀಲಿಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟಿದ್ದರೂ ನಟಿ ಸನ್ನಿ ಲಿಯೋನ್‌ಗೆ ಬಾಲಿವುಡ್‌ನಲ್ಲೂ ದೇಹಸಿರಿ ಪ್ರದರ್ಶನ ಮಾಡುವಂತಹ ಪಾತ್ರಗಳೇ ಸಿಕ್ಕುತ್ತಿವೆ. ನಟಿಸಿದ ಮೊದಲ ಎರಡು ಚಿತ್ರಗಳಲ್ಲೂ ಸ್ಕಿನ್‌ ಷೋ ಮಾಡುವ ಪಾತ್ರ ಮಾಡಿದ್ದ ಸನ್ನಿ, ಮೂರನೇ ಚಿತ್ರದಲ್ಲೂ ಅದೇ ಮಾದರಿಯ ಪಾತ್ರ ನಿರ್ವಹಿಸಿದ್ದಾರೆ. ಇದಕ್ಕೆ ಆಕೆಗೆ ಕಿಂಚಿತ್ತೂ ಬೇಸರವಿಲ್ಲವಂತೆ.‘ನಾನಿನ್ನೂ ಉದಯೋನ್ಮುಖ ನಟಿ. ಹಾಗಾಗಿ, ನಾನು ಯಾವುದೇ ಬಗೆಯ ಪಾತ್ರವನ್ನು ಒಪ್ಪಿಕೊಂಡರೂ ಒಬ್ಬ ನಟಿಯಾಗಿ ಬೆಳೆಯಲು ನನಗೆ ಸಹಾಯವಾಗುತ್ತದೆ ಎಂದು ಭಾವಿಸಿದ್ದೇನೆ. ಈ ಕಾರಣಕ್ಕಾಗಿಯೇ ನಾನು ಸಿಕ್ಕ ಅವಕಾಶವನ್ನೆಲ್ಲಾ ಒಪ್ಪಿಕೊಳ್ಳುತ್ತಿದ್ದೇನೆ. ಎಲ್ಲ ಚಿತ್ರಗಳಲ್ಲೂ ಒಂದೇ ಬಗೆಯ ಪಾತ್ರ ಮಾಡುತ್ತಿರುವ ಬಗ್ಗೆ ನನಗೆ ಏಕತಾನತೆ ಅಥವಾ ಬೇಸರ ಕಾಡುತ್ತಿಲ್ಲ’ ಎಂದು ಹೇಳುತ್ತಾರೆ ಸನ್ನಿ ಲಿಯೋನ್‌.ಸನ್ನಿ ಲಿಯೋನ್‌ ಬಾಲಿವುಡ್‌ಗೆ ಬಂದು ಎರಡು ವರ್ಷ ಕಳೆದಿದೆ. ಈ ವೇಳೆ ಅವರು ಮೂರು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸನ್ನಿ ಅಭಿನಯಿಸಿರುವ ‘ರಾಗಿಣಿ ಎಂಎಂಎಸ್‌ 2’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.‘ಉದಯೋನ್ಮುಖ ನಟಿಯರು ಒಂದೇ ಬಗೆಯ ಪಾತ್ರಗಳಲ್ಲಿ ನಟಿಸುತ್ತಿದ್ದೇವೆ ಎಂದು ಹೆದರಬೇಕಿಲ್ಲ. ನಟನೆಯಲ್ಲಿ ಸಕ್ರಿಯವಾಗಿದ್ದಾಗಲೇ ನಮಗೆ ಉತ್ತಮ ಚಿತ್ರಕಥೆ ಹಾಗೂ ನಿರ್ದೇಶಕರು ಸಿಗುವುದು’ ಎಂದಿದ್ದಾರೆ ಸನ್ನಿ ಲಿಯೋನ್‌.‘ರಾಗಿಣಿ ಎಂಎಂಎಸ್‌ 2’ ನನ್ನ ಮೂರನೇ ಚಿತ್ರ. ನಿಜ ಜೀವನಕ್ಕೆ ಹೋಲುವ ಪಾತ್ರಗಳು ಅಂದರೇನು ಎಂಬುದರ ಬಗ್ಗೆ ನನಗೆ ಸ್ಪಷ್ಟ ಅರಿವಿಲ್ಲ. ಆದರೆ, ನಾನು ಅದೇ ಮಾದರಿಯ ಪಾತ್ರಗಳನ್ನು ನಿರ್ವಹಿಸಿದ್ದೇನೆ ಅಂದರೆ ಅದಕ್ಕೆ ನಾನು ತಾನೇ ಏನು ಮಾಡಲು ಸಾಧ್ಯ? ಅದನ್ನು ಬದಲಿಸಲು ನನಗೂ ಸಾಧ್ಯವಿಲ್ಲ. ಸಿನಿಮಾ ಮಾಡುತ್ತೇನೆ, ನಟಿಸಿ ಎಂದು ಕೇಳಿಕೊಂಡು ಬರುವವರ ಬಳಿ ಇರುವ ಸ್ಕ್ರಿಪ್ಟ್‌ ಓದುತ್ತೇನೆ ಮತ್ತು ಚಿತ್ರಕಥೆ, ನಿರ್ದೇಶಕರು ಇಷ್ಟವಾದರೆ ಚಿತ್ರವನ್ನು ಒಪ್ಪಿಕೊಳ್ಳುತ್ತೇನೆ. ಚಿತ್ರಕತೆಗೆ ದೇಹ ಪ್ರದರ್ಶನ ಪೂರಕವಾಗಿದ್ದರೆ ಅಂತಹ ಚಿತ್ರದಲ್ಲಿ ನಟಿಸುವುದರಲ್ಲಿ ತಪ್ಪೇನಿದೆ. ಶೃಂಗಾರ, ರೊಮ್ಯಾಂಟಿಕ್‌, ಕಾಮಿಡಿ, ಹಾರರ್‌ ಹೀಗೆ ಯಾವುದೇ ಬಗೆಯ ಚಿತ್ರಕಥೆಯನ್ನು ಹೊಂದಿದ್ದರೂ ನಾನು ಮಾಡುತ್ತೇನೆ’ ಎನ್ನುತ್ತಾರೆ ಸನ್ನಿ.ಅಂದಹಾಗೆ, ‘ರಾಗಿಣಿ ಎಂಎಂಎಸ್‌ 2’ ಚಿತ್ರ ಮಾರ್ಚ್‌ 21ರಂದು ತೆರೆಕಾಣಲಿದೆ. ದಿವ್ಯಾ ದತ್ತಾ, ಪರ್ವಿನ್‌ ದಬಾಸ್‌ ಮತ್ತು ಸಂಧ್ಯಾ ಮೃದುಲ್‌ ಮೊದಲಾದವರು ತಾರಾಗಣದಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.