ಕೊಪ್ಪ: ಅಡಿಕೆ ಬೆಳೆಗೆ ಬೊರ್ಡೊ ದ್ರಾವಣ ಸಿಂಪಡಿಸಲು ಇದು ಸಕಾಲವಾಗಿದ್ದು ಕೊಳೆ ನಿವಾರಣೆಗೆ ಬೇರಾವ ಔಷಧವು ಬೊರ್ಡೋ ದ್ರಾವಣದಷ್ಟು ಪ್ರಭಾವಶಾಲಿ, ಪರಿಸರ ಸ್ನೇಹಿ ಹಾಗೂ ಮಿತವ್ಯಯಕಾರಿ ಯಾಗಿರುವುದಿಲ್ಲ ಎಂದು ತೀರ್ಥಹಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಬಿ.ಆರ್.ಗುರುಮೂರ್ತಿ ತಿಳಿಸಿದ್ದಾರೆ.

ಜೈವಿಕ ಕೊಳೆನಾಶಕಗಳು ಬಳಕೆಗೆ ಬಂದಿದ್ದರೂ ಅವುಗಳು ಸತತ ಮೂರು ವರ್ಷ ಪ್ರಯೋಗಕ್ಕೆ ಒಳಗಾಗಿ ಫಲಿತಾಂಶ ಲಭ್ಯವಿಲ್ಲ, ವಿಜ್ಞಾನಿಗಳ ಸಮಾವೇಶಗಳು ಅನುಮೋದಿಸಿಲ್ಲ, ತೋಟಗಾರಿಕಾ ಕೈಪಿಡಿಗಳಲ್ಲೂ ಮುದ್ರಿಸಲ್ಪಟ್ಟಿಲ್ಲ. ನೂರು ವರ್ಷ ಬಳಕೆ ನಂತರವೂ ಅನೇಕ ರೈತರು ಸರಿಯಾದ ರೀತಿ ಬೊರ್ಡೊ ದ್ರಾವಣ ತಯಾರಿಸುತ್ತಿಲ್ಲ. ಶೇ. 1 ರ ಬೊರ್ಡೊ ದ್ರಾವಣವೆಂದರೆ 1 ಕಿ.ಗ್ರಾಂ. ಮೈಲುತುತ್ತ, 1 ಕೆಜಿ ಸುಣ್ಣ ಮಿಶ್ರಣವುಳ್ಳ 100 ಲೀ ನೀರಿನ ದ್ರಾವಣ ಎಂದಿರುವ ಅವರು ಮೈಲುತುತ್ತ ಹಾಗೂ ಸುಣ್ಣದ ಗುಣ ಪ್ರಮಾಣದ ಬಗ್ಗೆ ಪರೀಕ್ಷಿಸುವುದು ಅಗತ್ಯ ಎಂದಿದ್ದಾರೆ.

ಪಾರದರ್ಶಕ ಗಾಜಿನಲ್ಲಿ ಮೈಲುತುತ್ತಾ ಹರಳು ಹಾಕಿ ನೀರು ತುಂಬಿದಾಗ ಹರಳಿನ ಎಲ್ಲ ಭಾಗದಲ್ಲಿ ನೀರಿನ ಗುಳ್ಳೆ ಕಂಡು ಬಂದಲ್ಲಿ ಅದು ಉತ್ತಮ ಮೈಲುತುತ್ತ. ಅದೇ ರೀತಿ ಸುಣ್ಣದ ಪುಡಿ ಇರುವ ಪಾತ್ರೆಗೆ ನೀರು ಹಾಕಿ ಐದು ನಿಮಿಷಗಳ ನಂತರ ನಿಧಾನಗತಿಯ ಕುದಿ ಬಂದರೆ ಅದು ಉತ್ತಮ ಸುಣ್ಣ ಎಂದು ಪರಿಗಣಿಸಬಹುದು ಎಂದಿದ್ದಾರೆ.

ಮೈಲುತುತ್ತದ ನೀರಿಗೆ ಸುಣ್ಣ ಬೆರೆಸುವುದು, ಸುಣ್ಣದ ನೀರಿಗೆ ಮೈಲುತುತ್ತಾ ಬೆರೆಸುವುದು ತಪ್ಪು ಕ್ರಮವಾಗಿದ್ದು ಪ್ರತ್ಯೇಕವಾಗಿ ತಯಾರು ಮಾಡಿದ ಮೈಲುತುತ್ತಾ ಹಾಗೂ ಸುಣ್ಣದ ನೀರನ್ನು ನೀರಿರುವ ಡ್ರಮ್ಮಿಗೆ ಏಕಕಾಲಕ್ಕೆ ಎತ್ತರದಿಂದ ಸುರಿದು 100 ಲೀ ಬೊರ್ಡೊ ದ್ರಾವಣಕ್ಕೆ 200 ಲೀ ರಾಳ ಬೆರಸಿ ಸಿಂಪಡಿಸಿದರೆ ಔಷಧಿ ಅಂಶ 50 ದಿನಗಳ ಕಾಲ ಅಡಿಕೆ ಕಾಯಿಗಳಲ್ಲಿ ಉಳಿಯಲು ಸಹಕಾರಿ ಎಂದಿದ್ದಾರೆ.

ಬೊರ್ಡೊ ದ್ರಾವಣದ ಮಿಶ್ರಣ ಸರಿಯಾಗಿದೆಯೇ ಎಂಬುದನ್ನು ಸ್ವಚ್ಛ ಅಥವಾ ಬ್ಲೇಡ್ನ್ನು ಅದ್ದಿ ಪರೀಕ್ಷಿಸಬೇಕು. ಬ್ಲೇಡಿನ ಮೇಲೆ ಕೆಂಪು ಬಣ್ಣ ಕಂಡು ಬಂದರೆ ಮತ್ತಷ್ಟು ಸುಣ್ಣಸ ತಿಳಿ ಸೇರಿಸಬೇಕು. ಲಿಟ್ಮಸ್ ಕಾಗದ ಅದ್ದಿದರೆ ನೀಲಿ ಬಣ್ಣಕ್ಕೆ ತಿರಗಿದರೆ ಯೋಗ್ಯವಾದ ದ್ರಾವಣ. ಸುಣ್ಣದಲ್ಲಿ ಕ್ಯಾಲ್ಸಿಯಂ ಅಂಶವಿರು ವುದರಿಂದ ಅಡಿಕೆ ಕಾಯಿಗಳ ಬೆಳವ ಣಿಗೆಗೆ ಸಹಕಾರಿ. ಅಡಿಕೆ ಮರದಲ್ಲಿ ಶಿಲೀಂದ್ರ, ಬ್ಯಾಕ್ಟರೀಯ ರೋಗಾಣು ಗಳು ಹುಟ್ಟುವುದನ್ನು ಬೊರ್ಡೋ ದ್ರಾವಣ ಪರಿಣಾಮ ಕಾರಿಯಾಗಿ ತಡೆಯಬಲ್ಲದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.