ಗುರುವಾರ , ಮೇ 6, 2021
26 °C

ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಅಜಯ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಂಡಾವೊ, ಚೀನಾ (ಐಎಎನ್‌ಎಸ್): ಭಾರತದ ಅಗ್ರಶ್ರೇಯಾಂಕದ ಆಟಗಾರ ಅಜಯ್ ಜಯರಾಮ್ ಇಲ್ಲಿ ನಡೆಯುತ್ತಿರುವ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 21-19, 21-19ರಲ್ಲಿ ಚೀನಾ ತೈಪೆಯ ಜೆನ್ ಹಾವೊ ಹಸು ವಿರುದ್ಧ ಗೆಲುವು ಸಾಧಿಸಿದರು.ಆದರೆ ಭಾರತದವರೇ ಆದ ಪರುಪಲ್ಲಿ ಕಶ್ಯಪ್, ಎಚ್.ಎಸ್.ಪ್ರಣಯ್ ಹಾಗೂ ಸಮೀರ್ ವರ್ಮಾ ಅವರು ಮೊದಲ ಸುತ್ತಿನಲ್ಲಿಯೇ ಆಘಾತ ಅನುಭವಿಸಿ ನಿರ್ಗಮಿಸಿದರು.ಕಶ್ಯಪ್ 9-21, 13-21ರಲ್ಲಿ ವಿಶ್ವ ಮೂರನೇ ಕ್ರಮಾಂಕದ ಆಟಗಾರ ಚೀನಾದ ಚೆನ್ ಲಾಂಗ್ ವಿರುದ್ಧವೂ, ಪ್ರಣಯ್ 6-21, 20-22ರಲ್ಲಿ ವಿಯೆಟ್ನಾಮ್‌ನ ಟೀನ್ ಮಿನ್ ನುಯೆನ್ ಎದುರೂ ಹಾಗೂ ಸಮೀರ್ 19-21, 14-21ರಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಇಂಡೊನೇಷ್ಯಾದ ಸೈಮನ್ ಸಾಂಟೊಸೊ ವಿರುದ್ಧ ಸೋಲನುಭವಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.