ಮಂಡ್ಯ: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ (ಕೆಬಿಎ) ರೋಹನ್ ಕಾಸ್ಟೊಲಿನ್ ಮತ್ತು ಪ್ರಕಾಶ ಪಡುಕೋಣೆ ಬ್ಯಾಡ್ಮಿಂಟನ್ ಸಂಸ್ಥೆಯ ಮಹಿಮಾ ಅಗರವಾಲ್ ಇಲ್ಲಿ ನಡೆಯುತ್ತಿರುವ ಯೋನೆಕ್ಸ್ ಸನ್ರೈಸ್ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಬುಧವಾರ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದ ಫೈನಲ್ ಪ್ರವೇಶಿಸಿದರು.

ಪುರುಷರ ಫೈನಲ್ನಲ್ಲಿ ರೋಹನ್ 21-14, 21-8 ರಲ್ಲಿ ಪಿಪಿಬಿಎಯ ಡೇನಿಯಲ್ ಫರೀದ್ ವಿರುದ್ಧ; ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ಆರ್.ಎನ್. ಸೂರಜ್ 21-9, 21-12 ರಲ್ಲಿ ಮಣಿಪಾಲ್ನ ವೆಂಕಟೇಶ್ ಕಾಮತ್ ವಿರುದ್ಧ ಗೆಲುವು ಪಡೆದು ಫೈನಲ್ಸ್ ಪ್ರವೇಶಿಸಿದರು.

ಮಹಿಳೆಯರ ಸಿಂಗಲ್ಸ್: ಪಿಪಿಬಿಎಯ ಮಹಿಮಾ ಅಗರವಾಲ್ 21-18, 21-12 ರಿಂದ ತಮ್ಮದೇ ಕ್ಲಬ್ನ ಅರ್ಷೇನ್ ಸಯ್ಯದ್ ಸಾದತ್ ಮೇಲೂ; ಪಿಪಿಬಿಎಯ ಸಿಂಧು ಭಾರದ್ವಾಜ್ 13-21, 21-12, 21-12 ರಿಂದ ಥಾಮ್ಸನ ಜಾಕ್ವಲಿನ್ ಕುನ್ನತ್ ಅವರನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿದರು.

ಡಬಲ್ಸ್ ವಿಜೇತರು: 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹರ್ಷಿತ್ ಅಗರವಾಲ್-ಬಿ.ಆರ್.ಸಂಕೀರ್ತ್ ಜೋಡಿ 21-12, 23-21 ರಿಂದ ಎನ್.ಹೇಮಂತ್ಗೌಡ-ಕೆ.ಲೋಕ್ ಸಾಹಿನಾಥ್ ಮೇಲೂ; ಬಾಲಕಿಯರ ವಿಭಾಗದಲ್ಲಿ ಎಸ್.ಪಾರ್ವತಿ ಕೃಷ್ಣನ್-ಪೂರ್ವಿಶಾ ಎಸ್.ರಾಮ್ ಜೋಡಿ ದೇವಿಕಾ ರವೀಂದ್ರ-ಸಿಂಧು ಭಾರದ್ವಾಜ್ ವಿರುದ್ಧ 1-0 ಯಿಂದ ಮಂದಿದ್ದಾಗ ದೇವಿಕಾ-ಸಿಂಧು ಜೋಡಿ ನಿವೃತ್ತಿಯಾಗಿದ್ದರಿಂದ ಅವರು, ಪ್ರಶಸ್ತಿ ಪಡೆದರು.

ಮಹಿಳೆಯರ ಡಬಲ್ಸ್ ಫೈನಲ್ಸ್ನಲ್ಲಿ ಜಿ.ಎಂ.ನಿಶ್ಚಿತಾ-ವರ್ಷಾ ಬೆಳವಾಡಿ ಜೋಡಿ 21-9, 21-11 ರಿಂದ ಎಸ್.ಪಾರ್ವತಿ ಕೃಷ್ಣನ್-ಪೂರ್ವಿಶಾ ಎಸ್.ರಾಮ್ ಜೋಡಿ ಎದುರು ಗೆಲುವು ಪಡೆದು ಪ್ರಶಸ್ತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.