ಬೆಂಗಳೂರು: ಆತಿಥೇಯ ಎಂಎಸ್ಆರ್ಐಟಿ ತಂಡದವರು ಸುವರ್ಣ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಎಂ.ಎಸ್. ರಾಮಯ್ಯ ಸ್ಮಾರಕ ಅಖಿಲ ಭಾರತ ಅಂತರ ಎಂಜಿನಿಯರಿಂಗ್ ಕಾಲೇಜ್ ಬ್ಯಾಸ್ಕೆಟ್ಬಾಲ್ ಟೂರ್ನಿ ಪುರುಷರ ವಿಭಾಗದ ಉದ್ಘಾಟನಾ ಪಂದ್ಯದಲ್ಲಿ ಸುಲಭ ಗೆಲುವು ಪಡೆದು ಶುಭಾರಂಭ ಮಾಡಿದರು.

ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ಆರ್ಐಟಿ ತಂಡ 37-18 (ವಿರಾಮದ ಸ್ಕೋರು: 17-12) ರಲ್ಲಿ ಬಿಐಟಿ ತಂಡವನ್ನು ಸುಲಭವಾಗಿ ಮಣಿಸಿತು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ವಿಜಯಿ ತಂಡದ ಕಿರಣ್ (11), ವಿಜಯ್ (7) ಹಾಗೂ ಎದುರಾಳಿ ತಂಡದ ಪ್ರತೀಕ್ (9), ಗುರುಪ್ರಸಾದ್ (5) ಉತ್ತಮ ಗುರಿ ಎಸೆತದ ಆಟವಾಡಿದರು.

ಟೂರ್ನಿ ಇತರ ಪಂದ್ಯಗಳಲ್ಲಿ ಆರ್ವಿಸಿಇ 43-21 (ವಿರಾಮದ ಸ್ಕೋರು: 21-11) ರಲ್ಲಿ ಬಿಎಂಎಸ್ಐಟಿ ಮೇಲೂ, ಎನ್ಎಚ್ಸಿಇ 50-33 (ವಿ. ಸ್ಕೋರು: 17-6) ರಲ್ಲಿ ರೇವಾ ಎಂಜಿನಿಯರಿಂಗ್ ಕಾಲೇಜ್ ವಿರುದ್ಧವೂ, ಪಿಇಎಸ್ಐಟಿ 42-15 (ವಿ. ಸ್ಕೋರು: 23-8) ರಲ್ಲಿ ಜೆಎಸ್ಎಸ್ ಮೇಲೂ, ಎಸ್ವಿಐಟಿ 32-26 (ವಿ. ಸ್ಕೋರು: 18-16) ರಲ್ಲಿ ಎಎಂಸಿಸಿಇ ವಿರುದ್ಧವೂ, ಎಎಂಆರ್ಐಟಿಎ 38-7 ರಲ್ಲಿ ಬಿಎಂಎಸ್ಸಿಇ ಮೇಲೂ, ಆರ್ವಿಸಿಇ 51-18 ರಲ್ಲಿ ಸಪ್ತಗಿರಿ ವಿರುದ್ಧವೂ, ಎಂವಿಐಟಿ 44-35 ರಲ್ಲಿ ಎನ್ಎಚ್ಸಿಇ ಮೇಲೂ ಜಯ ಪಡೆಯಿತು.

ಆರ್ವಿಸಿಇ ತಂಡದ ಅಪ್ಪಚ್ಚು (11), ನಿತಿನ್ (6), ಬಿಎಂಎಸ್ಐಟಿನ ಪಾಲ್ (8), ಅಖಿಲ್ (6), ಎನ್ಎಚ್ಸಿಇ ತಂಡದ ಮಾಯಾಂಕ್ (12), ಐವೆನ್ (9), ರೇವಾ ತಂಡದ ಅಂಕಾ (8), ಜೋ (8), ಪಿಇಎಸ್ಐಟಿ ತಂಡದ ಶಿಶಿರ್ (15), ಶ್ರೇಯಸ್ (8), ಜೆಎಸ್ಎಸ್ನ ಎಡ್ವಿನ್ (6), ಸೂರಜ್ (6), ಎಸ್ವಿಐಟಿ ತಂಡದ ಶ್ರೇಯಸ್ (8), ಸುಬ್ರಮಣ್ಯ (8), ಎಎಂಸಿಸಿಇ ತಂಡದ ಅಭಿಶೇಕ್ (10), ಬ್ರಾರ್ (8), ಎಎಂಆರ್ಐಟಿಎ ತಂಡದ ಅಭಿಲಾಶ್ (15), ಕಿಶೋರ್ (8), ಆರ್ವಿಸಿಇ ತಂಡದ ಸೂರ್ಯ (9), ನಿತಿನ್ (6), ಸಪ್ತಗಿರಿ ತಂಡದ ಸರೇಜ್ (6), ಎಂವಿಐಟಿ ತಂಡದ ಅಚ್ಚಯ್ಯ (12), ರವಿ (9) ಹಾಗೂ ಎನ್ಎಚ್ಸಿಇ ತಂಡದ ಮಯಾಂಕ್ (17), ನಿತೀಶ್ (8) ಉತ್ತಮ ಆಟದ ಪ್ರದರ್ಶನ ತೋರಿದರು.

ಮಹಿಳಾ ವಿಭಾಗದ ಪಂದ್ಯದಲ್ಲಿ ಎಎಂಆರ್ಐಟಿಎಚ್ಎ ತಂಡದವರು 30-14 ರಲ್ಲಿ ಪಿಇಎಸ್ಐಟಿ ತಂಡವನ್ನು ಮಣಿಸಿದರು. ವಿರಾಮದ ವೇಳೆಗೆ 16-4 ರಲ್ಲಿ ಮುಂದಿದ್ದ ವಿಜಯಿ ತಂಡದ ರಮ್ಯಾ (20) ಹಾಗೂ ಎದುರಾಳಿ ತಂಡದ ಗಾಯತ್ರಿ (7) ಉತ್ತಮವಾಗಿ ಆಟವಾಡಿದರು.

ಗೋಕುಲ ಶಿಕ್ಷಣ ಫೌಂಡೇಷನ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಎಂ. ಆಚಾರ್ಯ ಟೂರ್ನಿಯನ್ನು ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.