ಸೋಮವಾರ, ಮೇ 17, 2021
22 °C
ಚೆನ್ನೈ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಬ್ರಿಟಿಷ್ ದಂಪತಿ ರಕ್ಷಣೆ: 9 ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ(ಪಿಟಿಐ): ಅಪಹರಣಕ್ಕೊಳಗಾಗಿದ್ದ ಬ್ರಿಟಿಷ್ ದಂಪತಿಯನ್ನು ರಕ್ಷಿಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶ್ರೀಲಂಕಾ ಪ್ರಜೆಗಳು ಒಳಗೊಂಡಂತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.ಲಂಡನ್‌ನ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸ್, ಬ್ರಿಟನ್‌ನ ಸೀರಿಯಸ್ ಆರ್ಗನೈಸ್ಡ್ ಕ್ರೈಮ್ ಏಜೆನ್ಸಿ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಬೇಹುಗಾರಿಕಾ ಸಂಸ್ಥೆಗಳ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ ಚೆನ್ನೈ ಪೊಲೀಸರು, ಕಡಲೂರು ಜಿಲ್ಲೆಯ ಮಂದಾಕುಪ್ಪಂನಲ್ಲಿನ ಮನೆಯೊಂದರಿಂದ ಬ್ರಿಟಿಷ್ ದಂಪತಿಯನ್ನು ಭಾನುವಾರ ರಾತ್ರಿ  ರಕ್ಷಿಸಿದರು.`ಲಂಡನ್‌ನಲ್ಲಿರುವ ಒಂದು ಗುಂಪು , ಚೆನ್ನೈನ ವ್ಯಕ್ತಿಗಳ ಸಹಕಾರದೊಂದಿಗೆ ಬ್ರಿಟಷ್ ದಂಪತಿಯನ್ನು ಅಪಹರಿಸಿದ್ದರು. ಇದೊಂದು ವಿಚಿತ್ರ ಮತ್ತು ಸಂಕೀರ್ಣ ಪ್ರಕರಣವಾಗಿದ್ದು. ಈ ಪ್ರಕರಣದಲ್ಲಿ ಎರಡು ದೇಶಗಳ ಎರಡು ವಿವಿಧ ನಗರಗಳ ವ್ಯಕ್ತಿಗಳು ಭಾಗಿಯಾಗಿದ್ದಾರೆ' ಎಂದು ಚೆನ್ನೈ ಪೊಲೀಸ್ ಆಯುಕ್ತ ಎಸ್. ಜಾರ್ಜ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.ಕೊಲಂಬೊದಿಂದ ಚೆನ್ನೈ ವಿಮಾನನಿಲ್ದಾಣಕ್ಕೆ ಬಂದಿಳಿದ ಬ್ರಿಟನ್  ದಂಪತಿ ಥವರಾಜ(59) ಮತ್ತು ಪತ್ನಿ ಸಲಜ(55)  ಅವರು ನಾಪತ್ತೆಯಾಗ್ದ್ದಿದರು. ಈ ಕುರಿತು ಮೇ 29ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಥವರಾಜ್-ಸಲಜ ದಂಪತಿ ಮೂಲತಃ ಶ್ರೀಲಂಕಾದವರು. ಬ್ರಿಟನ್‌ನಲ್ಲಿ ನೆಲೆಸಿ, ಅಲ್ಲಿನ ನಾಗರಿಕತ್ವ ಪಡೆದಿದ್ದಾರೆ.ದಕ್ಷಿಣ ಭಾರತದ ದೇಗುಲಗಳಿಗೆ ಒಂಬತ್ತು ದಿನಗಳ ಪ್ರವಾಸಕ್ಕಾಗಿ ಪ್ರವಾಸಿ ಆಯೋಜಕರನ್ನು ಭೇಟಿಯಾಗಲು ತಿರುಚನಾಪಳ್ಳಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು.ಅಪಹರಣಕಾರರು ಲಂಡನ್‌ನಲ್ಲಿರುವ ದಂಪತಿ ಪುತ್ರಿ ದರ್ಶಿನಿ ಅವರಿಗೆ ಕರೆ ಮಾಡಿ ರೂ 2.58 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ಕರೆಗಳನ್ನು ಆಧರಿಸಿದ ಚೆನ್ನೈ ಪೊಲೀಸರು, ದರ್ಶಿನಿಯವರ ನೆರವಿನೊಂದಿಗೆ ದಂಪತಿಯನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದರು.`ಅಪಹರಣಕಾರರು ಯಾರೆಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿರಲಿಲ್ಲ. ದರ್ಶಿನಿಯವರ ಬಳಿ ಇದ್ದ ಚಿತ್ರದ ಕ್ಲಿಪ್ಪಿಂಗ್‌ಗಳು ತನಿಖೆಗೆ ನೆರವಾದವು' ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.